ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದ ರಾಜ್ಯಕ್ಕೆ ಕುಷ್ಠರೋಗ ; ಮಾರುತಿ ಮಾನ್ಪಡೆ ಕಿಡಿ

ಇಬ್ಬರ ಜನಗಳದ ನಡುವೆ ಕೂಲಿಕಾರರು, ಜನಸಾಮಾನ್ಯರು ಬಡವಾಗುವಂತಾಗಿದೆ. ರೈತರಿಗೂ ಪದೇ ಪದೇ ಅನ್ಯಾಯವಾಗುತ್ತಿದೆ. ಕೂಡಲೇ ಜಗಳ ಆಡುವದನ್ನು ಬಿಟ್ಟು ಸರಿಯಾದ ಆಡಳಿತ ಕೊಡಿ ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

news18-kannada
Updated:January 15, 2020, 3:41 PM IST
ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದ ರಾಜ್ಯಕ್ಕೆ ಕುಷ್ಠರೋಗ ; ಮಾರುತಿ  ಮಾನ್ಪಡೆ ಕಿಡಿ
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ
  • Share this:
ಕಲಬುರ್ಗಿ(ಜ.15) : ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದಾಗಿ ರಾಜ್ಯಕ್ಕೆ ಕುಷ್ಠರೋಗ ತಗಲುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ಸಿಎಂ ಯಡಿಯೂರಪ್ಪ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂತೋಷ್ ಗುಂಪುಗಳ ನಡುವೆ ಕಿತ್ತಾಟ ನಡೆಯುತ್ತಿದ್ದು, ರಾಜ್ಯದ ಅಭಿವೃದ್ಧಿ ಕುಷ್ಠರೋಗ ತಗುಲಿದ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು. ಹೈಕಮಾಂಡ್ ಸಹ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಬಿಜೆಪಿ ಹಿರಿಯ ನಾಯಕರೂ ಯಡಿಯೂರಪ್ಪ ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದರು.

ಮತ್ತೊಂದೆಡೆ ಸಂತೋಷ್ ಸರ್ಕಾರ ನಡೆಸಲು ಬಿಡುತ್ತಿಲ್ಲ. ಇಬ್ಬರ ಜನಗಳದ ನಡುವೆ ಕೂಲಿಕಾರರು, ಜನಸಾಮಾನ್ಯರು ಬಡವಾಗುವಂತಾಗಿದೆ. ರೈತರಿಗೂ ಪದೇ ಪದೇ ಅನ್ಯಾಯವಾಗುತ್ತಿದೆ. ಕೂಡಲೇ ಜಗಳ ಆಡುವದನ್ನು ಬಿಟ್ಟು ಸರಿಯಾದ ಆಡಳಿತ ಕೊಡಿ ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

ತೊಗರಿ ಖರೀದಿ ಆರಂಭಿಸದಿರೋದಕ್ಕೆ ಕಿಡಿ

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ ಎಂದು ಇದೇ ವೇಳೆ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ರೈತ ಸಂಘಟನೆಗಳ ಪರ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರದಿಂದ ಬೇಜವಾಬ್ದಾರಿ ವರ್ತನೆ ಮಾಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ತೊಗರಿ ಖರೀದಿ ವಿಳಂಬ ಮಾಡುತ್ತಿದೆ. ರೈತರು ತಮ್ಮ ಬಳಿಯಿದ್ದ ತೊಗರಿ ಮಾರಿದ ಮೇಲೆ ಸರ್ಕಾರ ತೊಗರಿ ಖರೀದಿಸಿ ಪ್ರಕ್ರಿಯೆ ಆರಂಭಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಪ್ರೋತ್ಸಾಹ ಧನ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಲಾಗುತ್ತಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಕೂಡಲೇ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಜೊತೆಗೆ ಪ್ರತಿ ರೈತನಿಗೆ 10 ಕ್ವಿಂಟಲ್ ತೊಗರಿ ಖರೀದಿ ಮಿತಿಯನ್ನು ತೆಗೆಯಬೇಕು. ಪ್ರತಿ ರೈತನಿಂದ ಕನಿಷ್ಠ 25 ಕ್ವಿಂಟಲ್ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಸಂಸದರ ಕಛೇರಿ ಎದುರು ಅನಿರ್ಧಿಷ್ಟ ಧರಣಿ

ತೊಗರಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ (ಜನವರಿ 16) ಕಲಬುರ್ಗಿ ಸಂಸದ ಉಮೇಶ್ ಜಾಧವ್ ಕಛೇರಿ ಎದುರು ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಸಂಘ, ರೈತ, ಕೃಷಿ ಕೂಲಿಕಾರರ ಸಂಘ ಮತ್ತಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಾಳೆಯಿಂದ ಅನಿರ್ಧಿಷ್ಟ ಧರಣಿ ಆರಂಭಿಸಲಾಗುವುದು ಎಂದರು.

ಇದನ್ನೂ ಓದಿ : ಈಗಲಾದರೂ ನಿಮ್ಮ ಕಣ್ಣಿಗೆ ಕಲಬುರ್ಗಿ ಕಾಣಿಸಿತೇ?; ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ಗೆ ಕುಟುಕಿದ ಪ್ರಿಯಾಂಕ್​ ಖರ್ಗೆ

ಈ ಮುಂಚೆ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಿದಾಗ, ಉದ್ದೇಶಪೂರ್ವಕವಾಗಿಯೇ ಉಮೇಶ್ ಜಾಧವ್ ಹೋರಾಟಗಾರರನ್ನು ಭೇಟಿ ಮಾಡಿರಲಿಲ್ಲ. ಈಗ ಮಾತ್ರ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯೋದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Published by: G Hareeshkumar
First published: January 15, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading