• Home
 • »
 • News
 • »
 • state
 • »
 • Tumakuru: ರಸ್ತೆ ಕಾಮಗಾರಿಗೆ ಸ್ವಂತ ದುಡಿಮೆಯ 1.5 ಲಕ್ಷ ಹಣ ವ್ಯಯಿಸಿದ ರೈತ; ರಾಜ್ಯ ನಾಯಕರ ಭರವಸೆಗೆ ರೋಸಿ ಹೋದ ಗ್ರಾಮಸ್ಥರು

Tumakuru: ರಸ್ತೆ ಕಾಮಗಾರಿಗೆ ಸ್ವಂತ ದುಡಿಮೆಯ 1.5 ಲಕ್ಷ ಹಣ ವ್ಯಯಿಸಿದ ರೈತ; ರಾಜ್ಯ ನಾಯಕರ ಭರವಸೆಗೆ ರೋಸಿ ಹೋದ ಗ್ರಾಮಸ್ಥರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ಅಸಾಧಾರಣ ಸಂಗತಿಯೊಂದು ಕಂಡುಬಂದಿದ್ದು, ರೈತರೊಬ್ಬರು ತಮ್ಮ ಜಮೀನಿನಲ್ಲಿದ್ದ ಕೊಪ್ಪರಿಗೆ ಮಾರಿ ಬಂದ ಹಣದಲ್ಲಿ 400 ಮೀಟರ್ ಉದ್ದದ ರಸ್ತೆಯನ್ನು ದುರಸ್ತಿ ಮಾಡಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

 • Trending Desk
 • Last Updated :
 • Tumkur, India
 • Share this:

  ರಾಜಕೀಯ ನಾಯಕರು ಚುನಾವಣಾ (Elections) ಪ್ರಚಾರದ ಸಮಯದಲ್ಲಿ ಊರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡುತ್ತಾರೆ. ಈ ಭರವಸೆ ಆಶ್ವಾಸನೆಗಳು ಚುನಾವಣೆ ಗೆಲ್ಲುವವರೆಗೆ ಮಾತ್ರ ಎಂಬುದು ಹಳ್ಳಿಯಿಂದ ಹಿಡಿದು ದಿಲ್ಲಿವರೆಗಿನ ನಿವಾಸಿಗಳವರೆಗೆ ಎಲ್ಲರಿಗೂ ತಿಳಿದಿದೆ. ಅದಾಗ್ಯೂ ಗೆದ್ದವರು ತಮ್ಮ ಊರಿಗೋ ತಾವಿರುವ ಕೇರಿಗೋ ಏನಾದರೂ ಒಳ್ಳೆಯದನ್ನು ಮಾಡಬಹುದು ಎಂಬ ಆಸೆಯಿಂದ ಪ್ರತೀ ಚುನಾವಣೆಯಲ್ಲಿ ಮತಚಲಾಯಿಸುತ್ತಾರೆ ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿರುತ್ತದೆ.


  ಇದರಿಂದ ರೋಸಿ ಹೋದ ಹಳ್ಳಿಗರು ತಮ್ಮ ಹಳ್ಳಿಗಳಿಗೆ ಬೇಕಾದ ಸೌಲಭ್ಯ ಸವಲತ್ತುಗಳನ್ನು ತಮ್ಮ ಖರ್ಚಿನಲ್ಲಿ ನಡೆಸಲು ಮುಂದಾದ ಹಲವಾರು ದೃಷ್ಟಾಂತಗಳಿವೆ. ಇದೀಗ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ ಕೂಡ ಇಂತಹುದ್ದೇ ನಿದರ್ಶನಕ್ಕೆ ಸಾಕ್ಷಿಯಾಗಿದೆ.


  ಸ್ವಂತ ಖರ್ಚಿಲ್ಲಿ ರಸ್ತೆ ಗುಂಡಿ ಮುಚ್ಚಿದ ರೈತ


  ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ಅಸಾಧಾರಣ ಸಂಗತಿಯೊಂದು ಕಂಡುಬಂದಿದ್ದು, ರೈತರೊಬ್ಬರು ತಮ್ಮ ಜಮೀನಿನಲ್ಲಿದ್ದ ಕೊಪ್ಪರಿಗೆ ಮಾರಿ ಬಂದ ಹಣದಲ್ಲಿ 400 ಮೀಟರ್ ಉದ್ದದ ರಸ್ತೆಯನ್ನು ದುರಸ್ತಿ ಮಾಡಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.


  ಪದವೀಧರರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅರೇಹಳ್ಳಿ ನಂಜೇಗೌಡ ನಟರಾಜು (53) ಎಂಬ ರೈತ ತಮ್ಮ ದುಡಿಮೆಯಿಂದ ಬಂದ ರೂ 1.5 ಲಕ್ಷ ಹಣವನ್ನು ಖರ್ಚುಮಾಡಿದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿಗಳು ರಸ್ತೆಯ ಕಾಮಗಾರಿ ನಡೆಸಲು ಮುಂದಾಗದೇ ಇರುವ ಕಾರಣ ರೈತ ನಂಜೇಗೌಡ ತಾವೇ ಖುದ್ದು ರಸ್ತೆ ರಿಪೇರಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.


  ಹೀರೋ ಆದ ರೈತ ನಂಜೇಗೌಡ


  ಶಿವೇನಹಳ್ಳಿ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರು ರಸ್ತೆಯ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಬೈಕ್‌ನಲ್ಲಿದ್ದ ಕಂದಾಯ ಇಲಾಖೆಯ ಪ್ಯೂನ್ ನಾರಾಯಣಪ್ಪ (54) ರಸ್ತೆಯಲ್ಲೇ ಸಾವನ್ನಪ್ಪಿದ ನಂತರ ರೈತ ನಂಜೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಯ ಗುಂಡಿಯನ್ನು ಮುಚ್ಚಲು ನಿರ್ಧರಿಸಿದ್ದಾರೆ.


  ಇದನ್ನೂ ಓದಿ: Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


  ನಟರಾಜು ಅವರ ಕಾರ್ಯವನ್ನು ಗ್ರಾಮಸ್ಥರು ಹೊಗಳಿದ್ದು ಅಲ್ಲಿನ ಸ್ಥಳೀಯ ಹೀರೋ ಆಗಿ ನಂಜೇಗೌಡ ಇದೀಗ ಮಿಂಚುತ್ತಿದ್ದಾರೆ ಅಂತೆಯೇ ಊರಿನವರು ನಂಜೇಗೌಡ ಅವರನ್ನು ಮುಂದಿನ ಹಂತಕ್ಕೆ ತಾಲ್ಲೂಕು ಪಂಚಾಯ್ತಿ (ಟಿಪಿ) ಅಥವಾ ಜಿಲ್ಲಾ ಪಂಚಾಯ್ತಿ (ಝೆಡ್‌ಪಿ) ಗೆ ಬಡ್ತಿ ನೀಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


  ಸಂಸದರ ಬಳಿ ಮನವಿ


  ನಂಜೇಗೌಡ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಅವರು ಸೇರಿರುವ ಜೆಡಿಎಸ್ ಪಕ್ಷದ ಮನವೊಳಿಸಲು ಆರಂಭಿಸಿದ್ದಾರೆ. ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಶಿವನೇಹಳ್ಳಿ ಗ್ರಾಮದ ಸ್ಥಳೀಯ ಸಂಸದ ಜಿ.ಎಸ್.ಬಸವರಾಜು ಹಾಗೂ ಸ್ಥಳೀಯ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಗಮನಕ್ಕೆ ಹಲವು ಬಾರಿ ತಂದರೂ ನಿವಾಸಿಗಳ ಮಾತುಗಳನ್ನು ಕೇಳದೇ ಅವರು ನಿರ್ಲಕ್ಷಿಸಿದ್ದಾರೆ ಎಂದು ಇಲ್ಲಿನ ನಿವಾಸಿ ಎಸ್.ಷಡಕ್ಷರಿ ದೂರಿದ್ದಾರೆ.


  ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೈತ ನಂಜೇಗೌಡ


  ಕುತೂಹಲಕಾರಿಯಾಗಿ, ಡಿಸೆಂಬರ್ 2020 ರಲ್ಲಿ ಗ್ರಾಮ್ ಪಂಚಾಯತ್ ಫಲಿತಾಂಶಗಳನ್ನು ಘೋಷಿಸಿದಾಗ, ನಟರಾಜು ಅವರು ತಮ್ಮ ಪ್ರತಿಸ್ಪರ್ಧಿ ಅಜಯ್ ವಿರುದ್ಧ ಒಂದು ಮತದಿಂದ ಸೋತಿದ್ದರು. ಈ ವಿಷಯವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ನಟರಾಜು, ಸಂಬಂಧಿತ ಚುನಾವಣಾಧಿಕಾರಿಯು ಪ್ರತಿಸ್ಪರ್ಧಿ ಅಜಯ್ ಪರವಾಗಿ ಸುಮಾರು 20 ರಿಂದ 25 ಅಮಾನ್ಯ ಮತಗಳನ್ನು ಎಣಿಸಿದ ಕಾರಣ ನಾನು ಗುಬ್ಬಿ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿದ್ದು ಸೆಪ್ಟೆಂಬರ್ 2022 ರಲ್ಲಿ ಅವರ ಪರವಾಗಿ ನ್ಯಾಯಾಲಯವು ತೀರ್ಪು ನೀಡಿರುವುದಾಗಿ ತಿಳಿಸಿದ್ದಾರೆ.


  ಇದನ್ನೂ ಓದಿ: Bengaluru: ನಾಯಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಸಹೋದರರು; ಹಲ್ಲೆ ವಿಡಿಯೋ ವೈರಲ್​!


  ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ


  ಹಾಗಾಗಿ, ಈಗ ಜಿಲ್ಲಾ ಪಂಚಾಯತ್‌ಗೆ ಚುನಾಯಿತನಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮತ್ತು ಹಳ್ಳಿಯ ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅವರು ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ. ನಟರಾಜು ಅವರ ಕೊಡುಗೆ ಶ್ಲಾಘನೀಯವಾಗಿದ್ದು, ಅವರು ನಮಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ಮಾಜಿ ಜಿ.ಪಂ.ಸದಸ್ಯ ನಾಗರಾಜು ತಿಳಿಸಿದ್ದಾರೆ.

  Published by:Precilla Olivia Dias
  First published: