ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಮತದಾನ ಮುಕ್ತಾಯವಾಗಿದ್ದು, ಮತದಾನ (Voting) ಅಂತ್ಯವಾಗುತ್ತಿದ್ದಂತೆ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ (Exit Polls) ವರದಿಗಳು ಬಹಿರಂಗಗೊಂಡಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಫಲಿತಾಂಶದ (Result) ಚಿತ್ರಣವನ್ನು ನೀಡಲು ಮುಂದಾಗಿದೆ. ಚುನಾವಣೋತ್ತರ ಸಮೀಕ್ಷೆ ನೀಡುವಲ್ಲಿ ದೇಶದ ಪ್ರಮುಖ ಸಂಸ್ಥೆಯಾಗಿರುವ Republic P-MARQ ತನ್ನ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ರಿಪಬ್ಲಿಕ್ ಸಮೀಕ್ಷೆಯ ಅನ್ವಯ ಕರ್ನಾಟಕದಲ್ಲಿ (Karnataka) ಮತ್ತೆ ಅತಂತ್ರ ಫಲಿತಾಂಶ ಬರಲಿದೆ ಎಂದು ವರದಿ ನೀಡಿದೆ. ಇದರೊಂದಿಗೆ ಕಾಂಗ್ರೆಸ್ (Congress) ಬೇರೆ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ಬಹಿರಂಗ ಪಡಿಸಿದೆ.
ರಿಪಬ್ಲಿಕ್ ಸಮೀಕ್ಷೆಯಲ್ಲಿ ಬಿಜೆಪಿಗೆ 85 ರಿಂದ 100, ಕಾಂಗ್ರೆಸ್ಗೆ 94 ರಿಂದ 108 ಹಾಗೂ ಜೆಡಿಎಸ್ಗೆ 24 ರಿಂದ 32 ಸ್ಥಾನಗಳು ಲಭ್ಯವಾಗಲಿದ್ದು, ಇತರೆ 2 ರಿಂದ 6 ಸ್ಥಾನಗಳು ಸಿಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.
ಪಕ್ಷ | ಸ್ಥಾನ | ಮತ ಹಂಚಿಕೆ |
ಬಿಜೆಪಿ | 85-100 | 36% |
ಕಾಂಗ್ರೆಸ್ | 94-108 | 40% |
ಜೆಡಿಎಸ್ | 24-32 | 17% |
ಇತರೆ | 2-6 | 7% |
ಒಟ್ಟು | 224 | 100% |
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 104 ಸ್ಥಾನಗಳೊಂದಿಗೆ ಕರ್ನಾಟಕದ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಜೆಡಿಎಸ್ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಿತು.
ಈ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಸರ್ಕಾರವನ್ನು ರಚಿಸಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಮೈತ್ರಿ ಸರ್ಕಾರ 14 ತಿಂಗಳಲ್ಲೇ ಪತನಗೊಂಡಿತ್ತು. ಆ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಸರ್ಕಾರವನ್ನು ರಚನೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ