Karnataka Election 2023 Live: ಸ್ಟ್ರಾಂಗ್​ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ, ಮೇ 13ರ ರತ್ತ ಎಲ್ಲರ ಚಿತ್ತ!

Karnataka Exit Poll Results 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾದಾಗಿನಿಂದ ಎಲ್ಲರ ಚಿತ್ತ ಎಕ್ಸಿಟ್​ ಪೋಲ್​ ಕಡೆ ಇತ್ತು. ಈದೀಗ ಎಕ್ಸಿಟ್​​ ಪೋಲ್​ ಹೊರಬಂದಿದ್ದು, ಕರ್ನಾಟಕದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದರ ಅಸ್ಪಷ್ಟ ಚಿತ್ರಣ ಸಿಕ್ಕಿದೆ ಎನ್ನಬಹುದು.

ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಮತದಾನ ಮುಗಿದಿದ್ದು, ವಿವಿಧ ಏಜೆನ್ಸಿಗಳ ಎಕ್ಸಿಟ್​ ಪೋಲ್​ ಬಿಡುಗಡೆಯಾಗಿದೆ. ಯಾರ ಪರ ಮತದಾರನ ಒಲವು ಹೆಚ್ಚಿದೆ ಎಂಬ ಕುತೂಹಲ ಮನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರುವ ಕನಸು ಹೊಂದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೆರಾ ನೇರಾ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಆದರೆ ಜೆಡಿಎಸ್​ ಕಿಂಗ್​ ಮೇಕರ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಎಕ್ಸಿಟ್​ ಪೋಲ್​ನ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​18 ಕನ್ನಡದಲ್ಲಿ. 

ಮತ್ತಷ್ಟು ಓದು ...
11 May 2023 10:45 (IST)

Karnataka Election 2023 Live: ಡಿಕೆಶಿ ರಿಲ್ಯಾಕ್ಸ್ ಮೂಡ್

ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯ ಹಿನ್ನಲೆ ಕನಕಪುರದಲ್ಲಿ ಕಾಲಕಳೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ನಗರದಲ್ಲಿನ ಹೋಟೆಲ್​ನಲ್ಲಿ ಇಡ್ಲಿ ಸವಿದ ಡಿಕೆಶಿಗೆ ಸಹೋದರ ಡಿ.ಕೆ.ಸುರೇಶ್ ಸಾಥ್. ಬೆಳಗ್ಗೆ ಮನೆಯಲ್ಲೇ ಕಟಿಂಗ್ ಮಾಡಿಸಿಕೊಂಡು ರೆಡಿಯಾದ ಡಿಕೆಶಿ.

11 May 2023 10:05 (IST)

Karnataka Election 2023 Live: ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತ್ರ ಅಪ್ರಚಾರ ಮಾಡಿದರು. ಆದರೆ ಅವೆಲ್ಲವೂ ನಿನ್ನೆಗೆ ಮುಗಿದಿವೆ. ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ. ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107 ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಮೋದಿಯವರ ಪ್ರಚಾರ ನಮ್ಮ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ
ನನಗೆ ವಿಶ್ವಾಸವಿದೆ. ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.

11 May 2023 07:31 (IST)

Karnataka Election 2023 Live: ಸ್ಟ್ರಾಂಗ್ ರೂಂ ತಲುಪಿದ ಅಭ್ಯರ್ಥಿಗಳ ಭವಿಷ್ಯ ಅಡಗಿರೋ ಇವಿಎಂಗಳು..!

ಚುನಾವಣಾ ಆಯೋಗ ನಗರದಲ್ಲಿ ಒಟ್ಟು ನಾಲ್ಕು ಸ್ಟ್ರಾಂಗ್ ರೂಂಗಳನ್ನು ಸ್ಥಾಪಿಸಲಾಗಿವೆ. ಬಸವನಗುಡಿ ಬಿಎಂಸ್ ಕಾಲೇಜು, ಜಯನಗರದ SSMRV ಕಾಲೇಜು, ವಸಂತನಗರ ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ವಿಠ್ಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಕಾಲೇಜುಗಳಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗಿದೆ. ಈ ಮತ ಪೆಟ್ಟಿಗೆಗಳು ಕೊಠಡಿ ತಲುಪಿದಂತೆ ಅಧಿಕಾರಿಗಳು ಕೊಠಡಿಯನ್ನ ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ.

11 May 2023 06:54 (IST)

Karnataka Election 2023 Live: ವಿಶೇಷ ಪೂಜೆ ಮಾಡಿ ಮತಯಂತ್ರಗಳನ್ನ ಕಳುಹಿಸಿಕೊಟ್ಟ ಯುವಕರು

ಮತದಾನದ ಬಳಿಕ ಇವಿಎಂ ಮಷಿನ್ ತೆಗೆದುಕೊಂಡು ಹೊರಟಿದ್ದ KSRTC ಬಸ್​ಗೆ ಯುವಕರು ಪೂಜೆ ಮಾಡಿದ್ದಾರೆ. ಬಿದರೇಕೆರೆ ಗ್ರಾಮದ ಯುವಕರು ಕರ್ಪೂರ‌ ಹಿಡಿದು ಪೂಜೆ ಮಾಡಿದ್ದಾರೆ.

10 May 2023 22:57 (IST)

Karnataka Election 2023 Live: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 85 ಮತದಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ

  • ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%
  • ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%
  • ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%
  • ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%

10 May 2023 22:55 (IST)

Karnataka Exit Poll 2023 LIVE: ಕರ್ನಾಟಕ ಚುನಾವಣೆಯ ಎಕ್ಸಿಟ್​ ಪೋಲ್ ಫಲಿತಾಂಶ

10 May 2023 22:54 (IST)

Karnataka Election 2023 Live: ಬೀದರ್ ಜಿಲ್ಲೆಯಲ್ಲಿ ಶೇಕಡಾ 71.66 ಮತದಾನ

  • ಬಸವಕಲ್ಯಾಣ ಕ್ಷೇತ್ರ- 70.69% ರಷ್ಟು ಮತದಾನ
  • ಹುಮನಾಬಾದ್ ಕ್ಷೇತ್ರ-73.26% ರಷ್ಟು ಮತದಾನ
  • ಬೀದರ್ ದಕ್ಷಿಣ ಕ್ಷೇತ್ರ-73.97% ರಷ್ಟು ಮತದಾನ
  • ಬೀದರ್ ಉತ್ತರ ಕ್ಷೇತ್ರ-65.67% ರಷ್ಟು ಮತದಾನ
  • ಭಾಲ್ಕಿ ಕ್ಷೇತ್ರ- 74.84% ರಷ್ಟು ಮತದಾನ
  • ಔರಾದ ಕ್ಷೇತ್ರ-71.69% ರಷ್ಟು ಮತದಾನ

10 May 2023 22:49 (IST)

Karnataka Election 2023 Live: ಗದಗ ಜಿಲ್ಲೆಯಲ್ಲಿ ಶೇಕಡಾ 77.18 ಮತದಾನ

ಶಿರಹಟ್ಟಿ -ಶೇಕಡಾ 71
ಗದಗ -ಶೇಕಡಾ 75.68
ರೋಣ -ಶೇಕಡಾ75.49
ನರಗುಂದ -ಶೇಕಡಾ79.46

10 May 2023 22:39 (IST)

Karnataka Exit Poll 2023 LIVE: ಎಕ್ಸಿಟ್ ಪೋಲ್ ಶೇಕಡಾವಾರು ಫಲಿತಾಂಶ

10 May 2023 22:32 (IST)

Karnataka Election 2023 Live: ಧಾರವಾಡ ಜಿಲ್ಲೆಯಲ್ಲಿ ಶೇಕಡಾ 73.19 ಮತದಾನ

  • ನವಲಗುಂದ ವಿಧಾನಸಭಾ ಮತಕ್ಷೇತ್ರ ಶೇಕಡಾ 76.99 ಮತದಾನ
  • ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇಕಡಾ 82.82 ಮತದಾನ
  • ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇಕಡಾ 76.99 ಮತದಾನ
  • ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇಯ ಶೇಕಡಾ 70.74 ಮತದಾನ
  • ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇಕಡಾ 64.30 ಮತದಾನ
  • ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇಕಡಾ 64.33 ಮತದಾನ
  • ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇಕಡಾ 81.78 ಮತದಾನ

10 May 2023 22:29 (IST)

Karnataka Election 2023 Live: ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 75.47 ಮತದಾನ

  • ಕಂಪ್ಲಿ -ಶೇಕಡಾ 84.43
  • ಸಿರಗುಪ್ಪ -ಶೇಕಡಾ 73.30
  • ಬಳ್ಳಾರಿ ಗ್ರಾಮೀಣ -ಶೇಕಡಾ 76.10
  • ಬಳ್ಳಾರಿ ನಗರ -ಶೇಕಡಾ 67.96
  • ಸಂಡೂರು -ಶೇಕಡಾ 77.07

10 May 2023 22:27 (IST)

Karnataka Election 2023 Live: ಕೋಲಾರ ಜಿಲ್ಲೆಯಲ್ಲಿ ಶೇಕಡಾ 81.22 ಮತದಾನ

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯ

  • ಶ್ರೀನಿವಾಸಪುರ -87.13% ಮತದಾನ
  • ಮುಳಬಾಗಿಲು -79.35 % ಮತದಾನ
  • ಕೆಜಿಎಫ್ -74.2 % ಮತದಾನ
  • ಬಂಗಾರಪೇಟೆ -79.7% ಮತದಾನ
  • ಕೋಲಾರ -78.57% ಮತದಾನ
  • ಮಾಲೂರು -88.6% ಮತದಾನ

10 May 2023 22:24 (IST)

Karnataka Election 2023 Live: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ

ಮಂಗಳೂರಿನ ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಮತದಾನ ಮುಗಿದ ಬಳಿಕ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಪರಸ್ಪರ ಘೋಷಣೆ ಕೂಗಿದ ವೇಳೆ ಗಲಾಟೆ ಆಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಭದ್ರತೆ ಹಾಕಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

10 May 2023 21:51 (IST)

Karnataka Election 2023 Live: ಎಕ್ಸಿಟ್ ಪೋಲ್ ಶೇಕಡಾವಾರು ಫಲಿತಾಂಶ

10 May 2023 21:49 (IST)

Karnataka Election 2023 Live: ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಶೇಕಡಾ 77.62 ಮತದಾನ

ಹೂವಿನಹಡಗಲಿ -ಶೇಕಡಾ 77.31,
ಹಗರಿಬೊಮ್ಮನಹಳ್ಳಿ -ಶೇಕಡಾ 81.14,
ವಿಜಯನಗರ -ಶೇಕಡಾ 71.65,
ಕೂಡ್ಲಿಗಿ -ಶೇಕಡಾ 79.48
ಹರಪನಹಳ್ಳಿ -ಶೇಕಡಾ 79.3

10 May 2023 21:42 (IST)

Karnataka Election 2023 Live: ಉಡುಪಿ ಜಿಲ್ಲೆಯಲ್ಲಿ ಒಟ್ಟು ಶೇಕಡಾ 78.39 ಮತದಾನ

ಉಡುಪಿ -75.84%
ಕುಂದಾಪುರ -78.94%
ಕಾಪು -78.79%
ಕಾರ್ಕಳ -81.25%
ಬೈಂದೂರು -77.64%

10 May 2023 21:22 (IST)

Karnataka Election 2023 Live: ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶೇಕಡಾ 78.10 ರಷ್ಟು ಮತದಾನ

  • ಚಿಕ್ಕಮಗಳೂರು -72.21%
  • ತರೀಕೆರೆ -78.21%
  • ಕಡೂರು -80.88%
  • ಶೃಂಗೇರಿ -81.79%
  • ಮೂಡಿಗೆರೆ -77.47%

10 May 2023 21:00 (IST)

Karnataka Exit Poll 2023 LIVE: ಕರ್ನಾಟಕ ಚುನಾವಣೆಯ ಎಕ್ಸಿಟ್​ ಪೋಲ್ ಫಲಿತಾಂಶ

10 May 2023 20:39 (IST)

Karnataka Election 2023 Live: ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 74.66 ಮತದಾನ

ಕಾರವಾರ & ಅಂಕೋಲಾ ಕ್ಷೇತ್ರದಲ್ಲಿ ಶೇಕಡಾ 70.81 ಮತದಾನ
ಕುಮಟಾ ಕ್ಷೇತ್ರದಲ್ಲಿ ಶೇಕಡಾ 70.28 ಮತದಾನ
ಭಟ್ಕಳ ಕ್ಷೇತ್ರದಲ್ಲಿ ಶೇಕಡಾ 77.47 ಮತದಾನ
ಶಿರಸಿ ಕ್ಷೇತ್ರದಲ್ಲಿ ಶೇಕಡಾ 78.62 ಮತದಾನ
ಯಲ್ಲಾಪುರ ಕ್ಷೇತ್ರದಲ್ಲಿ ಶೇಕಡಾ 79.65 ಮತದಾನ
ಹಳಿಯಾಳ ಕ್ಷೇತ್ರದಲ್ಲಿ ಶೇಕಡಾ 74.90 ಮತದಾನ

10 May 2023 20:36 (IST)

Karnataka Election 2023 Live: ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 67.77 ರಷ್ಟು ಮತದಾನ

ವಿಜಯಪುರ ಜಿಲ್ಲೆಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ ಸಂಜೆ 6 ಗಂಟೆಯವರೆಗೆ ಶೇಕಡಾ 67.77 ರಷ್ಟು ಮತದಾನವಾಗಿದೆ. ವಿಜಯಪುರ ಜಿಲ್ಲೆಯ 08 ವಿಧಾನಸಭಾ ಮತಕ್ಷೇತ್ರಗಳ ಮತದಾನ ವಿವರ ಇಂತಿದೆ.

  • ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶೇಕಡಾ 68.79
  • ದೇವರಹಿಪ್ಪರಗಿ ಶೇಕಡಾ 66.81
  • ಬಸವನ ಬಾಗೇವಾಡಿ ಶೇಕಡಾ 69.85
  • ಬಬಲೇಶ್ವರ ಶೇಕಡಾ 77.60
  • ಬಿಜಾಪೂರ ನಗರ ಶೇಕಡಾ 64.43
  • ನಾಗಠಾಣ ಮತಕ್ಷೇತ್ರದಲ್ಲಿ ಶೇಕಡಾ 65.87
  • ಇಂಡಿ ಶೇಕಡಾ 70.52
  • ಸಿಂದಗಿ ಶೇಕಡಾ 67.77