• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Exit Poll: ಕಾಂಗ್ರೆಸ್​ ಪಕ್ಷಕ್ಕೆ ಮ್ಯಾಜಿಕ್​ ನಂಬರ್​ಗಿಂತಲೂ ಹೆಚ್ಚು ಸ್ಥಾನ! ಹಸ್ತಕ್ಕೆ ಸ್ವತಂತ್ರ ಪಕ್ಷವಾಗಿ ಅಧಿಕಾರ ಎಂದ Axis My India ಸಮೀಕ್ಷೆ

Exit Poll: ಕಾಂಗ್ರೆಸ್​ ಪಕ್ಷಕ್ಕೆ ಮ್ಯಾಜಿಕ್​ ನಂಬರ್​ಗಿಂತಲೂ ಹೆಚ್ಚು ಸ್ಥಾನ! ಹಸ್ತಕ್ಕೆ ಸ್ವತಂತ್ರ ಪಕ್ಷವಾಗಿ ಅಧಿಕಾರ ಎಂದ Axis My India ಸಮೀಕ್ಷೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Exit Poll 2023: ಇಂಡಿಯಾ ಟುಡೆ-ಆ್ಯಕ್ಸಿಸ್​ ಮೈ ಇಂಡಿಯಾ ಕಾಂಗ್ರೆಸ್​ ಪಕ್ಷ 122ರಿಂದ 140 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ದೇಶದ ಗಮನ ಸೆಳೆದಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly elections) ಮತದಾನ (Voting) ಬುಧವಾರ ಮುಕ್ತಾಯವಾಗಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ರಾಷ್ಟ್ರೀಯ ವಾಹಿನಿಗಳು ಹಾಗೂ ಸರ್ವೆ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷಾ ವರದಿಯನ್ನು (Exit Poll) ಬಿಡುಗಡೆ ಮಾಡಿವೆ. ಬಹುಪಾಲು ಸಂಸ್ಥೆಗಳು ರಾಜ್ಯದಲ್ಲಿ ಕಾಂಗ್ರೆಸ್​ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದೇ ಹೇಳಿವೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್​ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಪಡೆಯುತ್ತದೆ ಎಂದು ಭವಿಷ್ಯ ನುಡಿದಿವೆ.


ಅದರಲ್ಲೂ ಇಂಡಿಯಾ ಟುಡೆ-ಆ್ಯಕ್ಸಿಸ್​ ಮೈ ಇಂಡಿಯಾ ಕಾಂಗ್ರೆಸ್​ ಪಕ್ಷ 122ರಿಂದ 140 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಈ ಮೂಲಕ ಸಂಪೂರ್ಣ ಬಹುಮತ ಪಡೆದು ಸ್ವತಂತ್ರ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.


ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ ಆಡಳಿತರೂಢ ಬಿಜೆಪಿ 2023ರ ಚುನಾವಣೆಯಲ್ಲಿ 60ರಿಂದ 80 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ. ಆದರೆ ಕರಾವಳಿ ಕರ್ನಾಟಕದಲ್ಲಿ 19 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದೆ. ಜೆಡಿಎಸ್​ 20-25 ಹಾಗೂ ಇತರೆ 4 ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ.


ಇದನ್ನೂ ಓದಿ: Karnataka Election Exit Polls: PolStrat ಸಮೀಕ್ಷೆ ಪ್ರಕಾರ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಕಾಂಗ್ರೆಸ್‌! ಸಂಪೂರ್ಣ ವಿವರ ಇಲ್ಲಿದೆ


ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್​ 12 ಸ್ಥಾನಗಳನ್ನು ಗೆಲ್ಲಬಹುದು. ಇದು 2018ರ ಚುನಾವಣೆಗಿಂತಲೂ 8 ಸ್ಥಾನ ಹೆಚ್ಚು ಸ್ಥಾನ ಕೈ ಪಕ್ಷಕ್ಕೆ ದಕ್ಕಲಿದೆ ಎಂದು ಸಮೀಕ್ಷೆ ತಿಳಿಸಿದೆ.


ಕಾಂಗ್ರೆಸ್​ಗೆ ಹೆಚ್ಚು ಸ್ಥಾನ ನೀಡಿದ ಸಮೀಕ್ಷೆ ವರದಿ ಇಲ್ಲಿವೆ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ ನೀಡಿದ ಸಮೀಕ್ಷೆ ವರದಿ ಇಲ್ಲಿವೆTV9 PolStrat


ಬಿಜೆಪಿ-99-109
ಕಾಂಗ್ರೆಸ್​-88-98
ಜೆಡಿಎಸ್-21-26
ಇತರರು-0-4


Zee News-Matrize Opinion Poll
ಬಿಜೆಪಿ-79-94
ಕಾಂಗ್ರೆಸ್​-103-118
ಜೆಡಿಎಸ್-25-33
ಇತರರು-2-5


ETG-Times Now
ಬಿಜೆಪಿ - 78-92
ಕಾಂಗ್ರೆಸ್ - 106-120
ಜೆಡಿಎಸ್ - 20-26
ಇತರರು - 2-4


C-Voter ಸಮೀಕ್ಷೆ


ಬಿಜೆಪಿ-83-95
ಕಾಂಗ್ರೆಸ್-100-112
ಜೆಡಿಎಸ್-21-29
ಇತರರು-2-6


CNX ಸಮೀಕ್ಷೆ


ಬಿಜೆಪಿ-88-98
ಕಾಂಗ್ರೆಸ್-99-109
ಜೆಡಿಎಸ್-21-26
ಇತರರು-0-4

First published: