ಬೆಂಗಳೂರು: ಬೇಸಿಗೆ (Summer) ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ಕೊರತೆಯ (Lack of Electricity) ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಬಾರಿ ಬೇಸಿಗೆಯಲ್ಲಿ ಜನರು ಲೋಡ್ ಶೆಡ್ಡಿಂಗ್ (Load Shedding) ಸಮಸ್ಯೆ ಎದುರಿಸಲು ಸಜ್ಜಾಗಬೇಕಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ (Electricity Demand) 15 ಸಾವಿರ ಮೆಗಾ ವ್ಯಾಟ್ ಗಡಿ ದಾಟಿದೆ. ರಾಜ್ಯದ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿರೋದು, ವಿದ್ಯುತ್ ಅಭಾವದ ಸೂಚನೆಯನ್ನು ನೀಡುತ್ತಿದೆ. ಈ ಬಾರಿ ಬೇಸಿಗೆಯಲ್ಲಿ ವಿಧಾನಸಭಾ ಚುನಾವಣೆ (Assembly Election) ಎದುರಾಗುವ ಹಿನ್ನೆಲೆ ರಾಜ್ಯದ ವಿದ್ಯುತ್ ಬೇಡಿಕೆ ಹೆಚ್ಚಾಗಬಹುದು. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಸಾಧ್ಯವಾ ಅನ್ನೋ ಪ್ರಶ್ನೆ ಎದುರಾಗಿದೆ.
ಬೇಡಿಕೆ ಹೆಚ್ಚಳ
2022ರ ಡಿಸೆಂಬರ್ನಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿತ್ತು. ಡಿಸೆಂಬರ್ನಲ್ಲಿ ವಿದ್ಯುತ್ ಬೇಡಿಕೆ 14 ಸಾವಿರ ಮೆಗಾವ್ಯಾಟ್ಗೆ ತಲುಪಿತ್ತು. ಈ ವರ್ಷ ಆರಂಭದಿಂದಲೇ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಪ್ರಮಾಣ ಏರಿಕೆ ಕಂಡಿದೆ.
2022ರ ಮಾರ್ಚ್ 5ರಂದು ರಾಜ್ಯದ ವಿದ್ಯುತ್ ಬೇಡಿಕೆ 14,766 ಮೆಗಾ ವ್ಯಾಟ್ ಆಗಿತ್ತು. ಇದು ಇಂದಿನವರೆಗೆ ಸರ್ವಕಾಲಿಕ ದಾಖಲೆಯಾಗಿತ್ತು. ಆದ್ರೆ ಈ ದಾಖಲೆ 2023ರ ಫೆಬ್ರವರಿ 8ರಂದೇ ಮುರಿದಿದೆ. ಫೆಬ್ರವರಿ 8ರಂದು ರಾಜ್ಯದಲ್ಲಿ 15,100 ಮೆಗಾವ್ಯಾಟ್ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿತ್ತು.
ಬೇಡಿಕೆ ಹೆಚ್ಚಾಗಿದ್ದೇಕೆ?
ಬೇಸಿಗೆ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಫ್ಯಾನ್, ಎಸಿ ಬಳಕೆ ಹೆಚ್ಚಾಗುತ್ತದೆ. ಇನ್ನು ಕೃಷಿಯಲ್ಲಿ ಬೆಳೆಗಳಿಗೆ ನೀರು ಪೂರೈಕೆ ಮಾಡಲು ರೈತರು ಪಂಪ್ಸೆಟ್ ಆರಂಭಿಸಲು ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಮಳೆಯಾಧರಿತ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಮನೆಗಳಲ್ಲಿ ಹಗಲು ಮತ್ತು ರಾತ್ರಿ ನಿರಂತರವಾಗಿ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗುತ್ತದೆ.
ಶಾಖೋತ್ಪನ್ನ ಕೇಂದ್ರಗಳ ಮೊರೆ
ಕಳೆದ ಒಂದು ವಾರದಿಂದ ವಿದ್ಯುತ್ ಬೇಡಿಕೆ 14,800 ಮೆಗಾವ್ಯಾಟ್ನಿಂದ 15,000 ವರೆಗೆ ತಲುಪಿದೆ. ಈ ಬೇಡಿಕೆ ಪೂರೈಕೆ ಮಾಡಲು ಕೆಪಿಸಿ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೊರೆ ಹೋಗಿದೆ. ಸದ್ಯ ಸೌರ ಮತ್ತು ಪವನ ಮೂಲದಿಂದ ರಾಜ್ಯಕ್ಕೆ ಆರು ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತಿದೆ. ಇದು ಹಗಲಿನಲ್ಲಿ ಮಾತ್ರ ಲಭ್ಯವಾಗುತ್ತಿದೆ.
ಎಷ್ಟು ವಿದ್ಯುತ್ ಉತ್ಪಾದನೆ?
ಬೇಡಿಕೆ ಹೆಚ್ಚಾದ ಹಿನ್ನೆಲೆ ರಾಯಚೂರಿನ ಶಕ್ತಿ ನಗರ, ಯರಮರಸ್ ಹಾಗೂ ಬಳ್ಳಾರಿಯ ಥರ್ಮಲ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ನಿರಂತರವಾಗಿ ಸಾಗುತ್ತಿದೆ. ಬಳ್ಳಾರಿಯ ಮೂರು ಘಟಕಗಳ ಪೈಕಿ ಎರಡದಿಂದ 820 ಮೆವ್ಯಾ ವಿದ್ಯುತ್ ಉತ್ಪಾದನೆ ಆಗ್ತಿದೆ.
ಶಕ್ತಿನಗರದ ಎಂಟು ಘಟಕಗಳ ಪೈಕಿ ಒಂದು ದುರಸ್ತಿಯಲ್ಲಿದೆ. ಏಳು ಘಟಕಗಳಿಂದ ಒಟ್ಟು 1,120 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗ್ತಿದೆ.
ಅಡುಗೆ ಮನೆಯಲ್ಲಿ ಬುಸ್ ಬುಸ್
ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಹಾವೊಂದು ಅಡುಗೆ ಮನೆ ಸೇರಿತ್ತು. ಬೆಳ್ಳಂಬೆಳಗ್ಗೆ ಅಡುಗೆ ಮನೆಗೆ ಹೋದವ್ರು ಹಾವು ನೋಡಿ ದಂಗಾದ್ರು. ಹಾವನ್ನ ನೋಡಿ ಭಯಭೀತರಾದ ಮನೆಯ ಮಹಿಳೆ, ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಸೂರಿ, ಕೊಳಕು ಮಂಡಲ ಹಾವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Suspected Terrorist: ಮಾತಿಲ್ಲ, ಕಥೆ ಇಲ್ಲ, ಫುಲ್ ಸೈಲೆಂಟ್; ಯಾರು ಈ ಶಂಕಿತ ಟೆರರಿಸ್ಟ್?
ಏರೋ ಇಂಡಿಯಾ ಶೋ
ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ ನಡೆಯಲಿದೆ. ಆದರೆ, ಒಂದೆಡೆ ಶೋ ಸಂಭ್ರಮ ಇದ್ರೆ, ಮತ್ತೊಂದೆಡೆ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. 2019ರ ಏರೋ ಇಂಡಿಯಾ ಶೋ ತಾಲೀಮಿನ ವೇಳೆ ವಿಮಾನ ಅಪಘಾತ ಸಂಭವಿಸಿತ್ತು.
ಇಸ್ರೋ ಲೇಔಟ್‌ನಲ್ಲಿ ಸೂರ್ಯಕಿರಣ ಜೆಟ್‌ಗಳು ನೆಲಕ್ಕಪ್ಪಳಿಸಿದ್ವು. ದುರ್ಘಟನೆಯಲ್ಲಿ ಹಲವರ ಮನೆ, ಭೂಮಿ, ಆಸ್ತಿಗೆ ಹಾನಿಯಾಗಿತ್ತು. ಆದ್ರೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ