ಕರ್ನಾಟಕ ರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಹೊರ ಬಿದ್ದಿದ್ದು, ಅಚ್ಚರಿಯ ಫಲಿತಾಂಶ ಲಭಿಸಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ. ಬಿಜೆಪಿ ಕೈ ಪಾಳಯದ ಮುಂದೆ ಮಂಡಿಯೂರಿದೆ. ಹೀಗಿರುವಾಗ ಸದ್ಯ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದು, ಮೈತ್ರಿ ಸರ್ಕಾರ ರಚನೆಯಾದ ಬಳಿಕ ಬಂಡಾಯವೇಳುವ ಮೂಲಕ ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದ್ದ 17 ನಾಯಕರ ವಿಚಾರ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಸೇರಿದ್ದ ಈ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಏನಾಗಿದ್ದಾರೆ? ಗೆದ್ದಿದ್ದಾರಾ? ಇಲ್ಲಿದೆ ವಿವರ.
ಬಂಡಾಯವೆದ್ದಿದ್ದ ನಾಯಕರಲ್ಲಿ ರೋಶನ್ ಬೇಗ್ ಐಎಂಎ ಕೇಸ್ ಬಳಿಕ ಅತ್ತ ಬಿಜೆಪಿಗೂ ಸೇರಲಾಗದೆ, ಇತ್ತ ಜೆಡಿಎಸ್ಗೂ ಹೋಗದೆ ಸುಮ್ಮನಾಗಿದ್ದಾರೆ. ಇನ್ನು ಹುಣಸೂರು ಕ್ಷೇತ್ರದಿಂದಲೂ ಈ ಬಾರಿ ಬಿಜೆಪಿ ಅಡಗೂರು ಎಚ್.ವಿಶ್ವನಾಥ್ಗೆ ಟಿಕೆಟ್ ಕೊಡದೇ ದೇವರಹಳ್ಳಿ ಸೋಮಶೇಖರ್ರನ್ನು ಕಣಕ್ಕಿಳಿಸಿದ್ದರು. ಆದರೆ ಈ ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವಾಗಿಲ್ಲ. ಇಲ್ಲಿ ಜೆಡಿಎಸ್ ಗೆಲುವು ಕಂಡಿದೆ.
ಇನ್ನು ಬಂಡಾಯವೆದ್ದವರಲ್ಲಿಉಳಿದವರ ಕತೆ ಏನಾಯ್ತು? ಎಂದು ನೋಡುವುದಾದರೆ
* ಮಸ್ಕಿ (ST) ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್ ಸೋಲನುಭವಿಸಿದ್ದಾರೆ.
* ಹೊಸಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜು ಸೋಲನುಭವಿಸಿದ್ದಾರೆ.
* ಕಾಗವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀಮಂತ ಬಾಳಾಸಾಹೇಬ ಪಾಟೀಲ್ಗೆ ಸೋಲಾಗಿದೆ.
* ಕೃಷ್ಣರಾಜಪುರಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬೈರತಿ ಬಸವರಾಜ ಗೆಲುವು ಸಾಧಿಸಿದ್ದಾರೆ.
* ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುನಿರತ್ನ ಗೆದ್ದಿದ್ದಾರೆ.
* ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್ ಟಿ ಸೋಮಶೇಖರ್ ಗೆದ್ದಿದ್ದಾರೆ
* ಗೋಕಾಕ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ಗೆದ್ದಿದ್ದಾರೆ
* ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ಈ ಬಾರಿ ತಮ್ಮ ಮಗ ಸಿದ್ಧಾರ್ಥ್ ಸಿಂಗ್ರನ್ನು ಕಣಕ್ಕಿಳಿಸಿದ್ದರು. ಆದರೆ ಅವರಿಗೂ ಸೋಲಾಗಿದೆ.
* ಹಿರೇಕೆರೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿ.ಸಿ ಪಾಟೀಲ್ಗೆ ಸೋಲಾಗಿದೆ.
* ಅಥಣಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಹೇಶ ಕುಮಠಳ್ಳಿಗೆ ಸೋಲಾಗಿದೆ.
* ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಕೆ.ಸುಧಾಕರ್ ಅವರಿಗೂ 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
* ಯಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರಬೈಲ್ ಶಿವರಾಮ ಹೆಬ್ಬಾರ್ ಗೆದ್ದಿದ್ದಾರೆ.
* ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆ.ಗೋಪಾಲಯ್ಯ ಗೆಲುವು ಸಾಧಿಸಿದ್ದಾರೆ.
* ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಾರಾಯಣ ಗೌಡಗೂ ಸೋಲಾಗಿದೆ. * ಆರ್. ಶಂಕರ್ಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರಿಗೆ ಸೋಲಾಗಿದೆ.
ಕರ್ನಾಟಕ ರಾಜ್ಯ ಚುನಾವಣೆ 2023ರ ಫಲಿತಾಂಶಕ್ಕೆ ಇಡೀ ಕರುನಾಡೇ ಕಾತುರದಿಂದ ಕಾಯುತ್ತಿತ್ತು. ಕಳೆದೊಂದು ತಿಂಗಳ ಹಿಂದೆ ಅಭಿಯಾನದಿಂದ ಆರಂಭವಾದ ಚುನಾವಣಾ ಭರಾಟೆ ಇಂದಿನ ಫಲಿತಾಂಶದ ಬಳಿಕ ಒಂದು ಹಂತದಲ್ಲಿ ಮುಕ್ತಾಯ ಕಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ.
ಅಭ್ಯರ್ಥಿಗಳು ಮತ್ತು ಅರ್ಹ ಮತದಾರರು
ಕರ್ನಾಟಕ ಚುನಾವಣೆಯಲ್ಲಿ ಒಟ್ಟು 2,615 ಅಭ್ಯರ್ಥಿಗಳು ಕಣದಲ್ಲಿದ್ದು, 58,545 ಮತಗಟ್ಟೆಗಳಲ್ಲಿ ಒಟ್ಟು 5.31 ಕೋಟಿ ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಒಟ್ಟು ಮತದಾರರಲ್ಲಿ 2.67 ಕೋಟಿ ಪುರುಷರು, 2.64 ಕೋಟಿ ಮಹಿಳೆಯರು ಮತ್ತು 4,927 ಇತರರು ಇದ್ದು, ಅಭ್ಯರ್ಥಿಗಳ ಪೈಕಿ 2430 ಪುರುಷರು, 184 ಮಹಿಳೆಯರು ಮತ್ತು ತೃತೀಯಲಿಂಗಿ ಒಬ್ಬರು ಕಣದಲ್ಲಿದ್ದರು.
ಇದನ್ನೂ ಓದಿ: Yathindra Siddaramaiah: ನನ್ನ ತಂದೆಯವರೇ ಸಿಎಂ ಆಗಬೇಕು! ಯತೀಂದ್ರ ಸಿದ್ದರಾಮಯ್ಯ ಆಗ್ರಹ
ಸ್ಟಾರ್ ಅಭ್ಯರ್ಥಿಗಳು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (ವರುಣಾ), ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (ಚನ್ನಪಟ್ಟಣ) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಕನಕಪುರ) ಕಣದಲ್ಲಿರುವ ಪ್ರಮುಖರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೊರತುಪಡಿಸಿ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆಂಬುವುದು ಉಲ್ಲೇಖನೀಯ.
ಕರ್ನಾಟಕದಲ್ಲಿ 1985 ರಿಂದ ಆಡಳಿತ ಪಕ್ಷ ಎಂದೂ ಗೆದ್ದ ಇತಿಹಾಸವಿಲ್ಲ. 38 ವರ್ಷಗಳ ಹಿಂದಿನ ಈ ಪದ್ಧತಿಯನ್ನು ಮುರಿಯುವುದಾಗಿ ಆಡಳಿತಾರೂಢ ಬಿಜೆಪಿ ಹೇಳಿಕೊಂಡಿತ್ತಾದರೂ, ಈ ಬಾರಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಮತ್ತೆ ಹಳೇ ಸಂಪ್ರದಾಯ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ