• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಜೆಡಿಎಸ್​ಗೆ ಶಕ್ತಿ ತಂದ ಪಕ್ಷಾಂತರ ಪರ್ವ: ತೆನೆ ಹೊತ್ತ ಬಿಜೆಪಿ ಟಿಕೆಟ್​ ವಂಚಿತ!

Karnataka Election: ಜೆಡಿಎಸ್​ಗೆ ಶಕ್ತಿ ತಂದ ಪಕ್ಷಾಂತರ ಪರ್ವ: ತೆನೆ ಹೊತ್ತ ಬಿಜೆಪಿ ಟಿಕೆಟ್​ ವಂಚಿತ!

ಮಾಲಕ ರೆಡ್ಡಿ

ಮಾಲಕ ರೆಡ್ಡಿ

ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ವಂಚಿತರಿಗೆ ಜೆಡಿಎಸ್ ಪಕ್ಷವು ಟಿಕೆಟ್ ನೀಡುವ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಕನಸು ಹೊತ್ತಿದ್ದವರ ಕನಸು ಸಾಕಾರಗೊಳಿಸಿದೆ.

  • Share this:

ಯಾದಗಿರಿ(ಏ.15): ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಟಿಕೆಟ್ ಸಿಗದಕ್ಕೆ ಟಿಕೆಟ್ ವಂಚಿತರು ಬಂಡಾಯ ಎದ್ದಿದ್ದಾರೆ.ಬಂಡಾಯಗೊಂಡವರಿಗೆ ಜೆಡಿಎಸ್ ಮಣೆ ಹಾಕಿದೆ. ನಿನ್ನೆ ತಾನೆ ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾದ ಗುರುಲಿಂಗಪ್ಪ ಪಾಟೀಲ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದರು. ಗುರುಲಿಂಗಪ್ಪ ಪಾಟೀಲ ಅವರಿಗೆ ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆ ಮಾಡಿದೆ. ಗುರು ಪಾಟೀಲ ಶಿರವಾಳ ಅವರು ಜೆಡಿಎಸ್ ಸೇರ್ಪಡೆಯಾಗಿದಕ್ಕೆ ಶಹಾಪುರದಲ್ಲಿ ಜೆಡಿಎಸ್ ಗೆ ಬಲ ಬಂದಿದೆ.


ಮಾಲಕರೆಡ್ಡಿ ಜೆಡಿಎಸ್ ಅಭ್ಯರ್ಥಿ..!


ಡಾ.ಎ.ಬಿ.ಮಾಲಕರೆಡ್ಡಿ ಅವರ ಪುತ್ರಿ ಡಾ.ಅನುರಾಗ ಮಾಲಕರೆಡ್ಡಿ ಅವರು ಯಾದಗಿರಿ ಕ್ಷೇತ್ರದಿಂದ ಟಿಕೆಟ್ ಬಯಸಿ ಕಾಂಗ್ರೆಸ್ ನಿಂದ ಅರ್ಜಿ ಸಲ್ಲಿಸಿದರು. ಮಾಲಕರೆಡ್ಡಿ ಅವರು ತನಗೆ ಇಲ್ಲವೇ ಪುತ್ರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರಿಗೆ ಡಿಮ್ಯಾಂಡ್ ಮಾಡಿದರು. ಮಾಲಕ ರೆಡ್ಡಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದರು. ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರಿಗೆ ಕೂಡ ಮಾಲಕರೆಡ್ಡಿ ಭೇಟಿಯಾಗಿದ್ದರು ಆದರೆ, ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಟಿಕೆಟ್ ನೀಡುವ ಭರವಸೆ ನೀಡಿರಲಿಲ್ಲ. ಹೀಗಾಗಿ ಮಾಲಕರೆಡ್ಡಿ ಕಾಂಗ್ರೆಸ್ ಸೇರಲು ಮುಂದಾಗಿರಲಿಲ್ಲ.


ಕಾಂಗ್ರೆಸ್ ಪಕ್ಷವು ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡ ಮಾಲಕರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ನಂತರ, ಸಾಕಷ್ಟು ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಈಗ ಜೆಡಿಎಸ್ ಸೇರಿದ್ದಾರೆ.


ಬೆಂಬಲಿಗರು ಹಾಗೂ ಕ್ಷೇತ್ರದ ಜನರ ಜೊತೆ ಮಾಲಕರೆಡ್ಡಿ ಸಭೆ ನಡೆಸಿದರು. ಸಭೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಕೂಗು ಹೆಚ್ಚಾಗಿತ್ತು.ಹೀಗಾಗಿ ಮಾಲಕರೆಡ್ಡಿ ಚುನಾವಣೆಗೆ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದರು.


ಮೂವರ ಲಾಬಿ ನಡುವೆಯು ಟಿಕೆಟ್ ಪಡೆದ ಮಾಲಕರೆಡ್ಡಿ..!


ಯಾದಗಿರಿ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿ ಡಾ. ಎ. ಬಿ. ಮಾಲಕರೆಡ್ಡಿ, ಹಣುಮೇಗೌಡ ಬೀರನಕಲ್, ಡಾ. ಎಸ್. ಬಿ. ಕಾಮರೆಡ್ಡಿ ಅವರು ಜೆಡಿಎಸ್ ಟಿಕೆಟ್ ಪಡೆಯಲು ಸಾಕಷ್ಟು ಲಾಬಿ ನಡೆಸಿದರು.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮೂವರು ಆಕಾಂಕ್ಷಿಗಳ ಜೊತೆ ಸಭೆ ನಡೆಸಿದರು. ಮಾಲಕರೆಡ್ಡಿ ಅವರು ಹಿರಿಯರಿದ್ದಾರೆ ಈ ಬಗ್ಗೆ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಿದರಂತೆ.ಇನ್ನೂ ಅನೇಕ ವಿಷಯದ ಕುರಿತು ರಾಜಕೀಯ ಚರ್ಚೆ ನಡೆದಿದೆ.


ಹಠ ಬಿಡದ ಮಾಲಕರೆಡ್ಡಿ..!


ಹೇಗಾದರೂ ಮಾಡಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕೆಂದು ಪಟ್ಟು ಹೀಡಿದ ಮಾಲಕರೆಡ್ಡಿ ಅವರು,ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕೃಪೆ ಕಟಾಕ್ಷೆಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಸಕ್ಸೆಸ್ ಆಗಿದ್ದಾರೆ.


ಮಾಲಕರೆಡ್ಡಿ ಅವರು ಒಂದು ಬಾರಿ ಜನತಾ ಪರಿವಾರದಿಂದ ಎಂಎಲ್ ಸಿ ಆಗಿದ್ದರು.ಐದು ಶಾಸಕರಾಗಿ ಎರಡು ಬಾರಿ ಆರೋಗ್ಯ ಮತ್ತು ವೈದ್ಯಕೀಯ ಸಚಿವರಾಗಿ ಸೇವೆ ಸಲ್ಲಿಸಿದರು. ಮಾಲಕರೆಡ್ಡಿ ಅವರ ರಾಜಕೀಯ ವರ್ಚಸ್ಸು ಹಾಗೂ ಹಿರಿತನ ಅರಿತು ಜೆಡಿಎಸ್ ಟಿಕೆಟ್ ನೀಡಿದೆ. ಮಾಲಕರೆಡ್ಡಿ ಅವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದ್ದು ಬೆಂಗಳೂರಿನಲ್ಲಿ ಮಾಲಕರೆಡ್ಡಿ ಅವರು ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.


ಈ ಬಗ್ಗೆ ನ್ಯೂಸ್ 18 ಗೆ ಡಾ.ಎ.ಬಿ.ಮಾಲಕರೆಡ್ಡಿ ಅವರು ಮಾತನಾಡಿ,ಐದು ವರ್ಷದ ಅವಧಿಯಲ್ಲಿ ಯಾದಗಿರಿ ಕ್ಷೇತ್ರವು ನಿರೀಕ್ಷೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. ಜನರು ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೆನೆ.ಕುಮಾರಸ್ವಾಮಿ ಅವರು ತಮ್ಮ ಸರಕಾರದ ಅವಧಿಯಲ್ಲಿ ರೈತರಿಗೆ, ಬಡವರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ರೈತರ, ಬಡವರ ಸಂಕಷ್ಟಕ್ಕೆ ಕುಮಾರಸ್ವಾಮಿ ಅವರು ಸ್ಪಂದಿಸಲಿದ್ದಾರೆ ಎಂದರು.

top videos
    First published: