Karnataka Election 2023: ನಾನೇ ಬಿಎಸ್​​ವೈಯನ್ನ ಸಿಎಂ ಮಾಡಿದ್ದು; ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಪ್ರಚಾರ

ಜನಾರ್ದನ ರೆಡ್ಡಿ ಪ್ರಚಾರ

ಇವತ್ತಿನ ಬಿಜೆಪಿಯಲ್ಲಿ‌ ತತ್ವ ಸಿದ್ಧಾಂತ ಇಲ್ಲ. ಎಲ್ಲವೂ ಮಣ್ಣು ಪಾಲಾಗಿದೆ. ಬಿಜೆಪಿಯಲ್ಲಿ ಈಗ ಎಲ್ಲವೂ ವ್ಯಾಪಾರ ಆಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Raichur, India
  • Share this:

ರಾಯಚೂರು: ಇಂದು ಕೆಆರ್​​ಪಿಪಿ (KRPP) ಪಕ್ಷದ ನಾಯಕರಾದ ಜನಾರ್ದನ ರೆಡ್ಡಿ (Janardhan Reddy) ರಾಯಚೂರಿನಲ್ಲಿ (Raichuru) ಬೃಹತ್ ರೋಡ್​ ಶೋ ನಡೆಸಿದ್ದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ (BJP) ವಿರುದ್ಧ ಹರಿಹಾಯ್ದರು. ರಾಯಚೂರು ಜಿಲ್ಲೆ ಲಿಂಗಸುಗೂರು (Lingasugur) ಪಟ್ಟಣದಲ್ಲಿ ಮಾತನಾಡಿದ ಅವರು, ದೆಹಲಿಯ (Delhi) ಬಿಜೆಪಿ ನಾಯಕರಿಂದ ದೇಶ ರಕ್ಷಣೆ ಆಗುತ್ತಿದೆ ಅಂತಾರೆ, ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಇಲ್ಲಿ ಡಬಲ್ ಇಂಜಿನ್ ಸರ್ಕಾರನೇ  ಇತ್ತು ಅಲ್ವಾ. ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.


ವಯಸ್ಸಾಗಿದೆ ಎಂದು ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ್ರು


ಜನರಿಂದ ಸಿಳ್ಳೆ, ಚಪ್ಪಾಳೆ ಹೊಡೆಸಿಕೊಳ್ಳುವ ಜನಾರ್ದನ ರೆಡ್ಡಿ ಅಂತ ನಾಯಕನನ್ನು ಮನೆಯಲ್ಲಿ ಕೂರಿಸುವುದು. ಯಡಿಯೂರಪ್ಪಗೆ ಚಪ್ಪಾಳೆ ಹೊಡಿತಾರೆ ಅಂತ ವಯಸ್ಸಾಗಿದೆ ಅಂತ ಅವರ ಸಲಹೆ ಪಡೆಯುತ್ತೇವೆ ಎಂದು ಅವರನ್ನು ಮೂಲೆ ಗುಂಪು ಮಾಡುವುದು. ಯಡಿಯೂರಪ್ಪ, ಅಡ್ವಾನಿ ಅಂತವರನ್ನ ಮೂಲೆಗುಂಪು ಮಾಡಿದ್ದಾರೆ. ಕೇವಲ ಡಮ್ಮಿಗಳು, ನಿಮಗೆ ಹೆಬ್ಬೆಟ್ಟು ಒತ್ತುವ ಶಾಸಕರನ್ನು ಹಿಡಿದುಕೊಂಡಿದ್ದೀರಿ. ಕೂರು ಎಂದರೆ ಕೂರುವ, ಎದ್ದೇಳು ಅಂದರೆ ನಿಲ್ಲುವ ಮುಖ್ಯಮಂತ್ರಿ ಇಟ್ಕೊಂಡು ಬಿಜೆಪಿ ಆಡಳಿತ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಎಸ್​ವೈರನ್ನ ಸಿಎಂ ಮಾಡಿ ನಾನು ಸಚಿವನಾದೆ


ಚುನಾವಣೆ ಬಳಿಕ ನಿಮ್ಮ ಆಟ ನಡೆಯುವುದಿಲ್ಲ. ಯಡಿಯೂರಪ್ಪ ಅವರನ್ನ ಕೂರಿಸಿ, ಬೊಮ್ಮಾಯಿ ಸಾಧಿಸಿದ್ದೇನು. ಎಲ್ಲಾ ಬರೀ ಸುಳ್ಳು, ಮೋಸ. ಕುತಂತ್ರಗಳಿಂದ ಬಿಜೆಪಿ ಎಲ್ಲವನ್ನು ಸರ್ವನಾಶ ಮಾಡಿದೆ. ವಿಶ್ವಾಸ, ಸ್ವಾಭಿಮಾನ ಇಲ್ಲ. ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಒಳ್ಳೆ ಅಭಿವೃದ್ಧಿ ಮಾಡಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ, ಬಿಎಸ್​ವೈರನ್ನ ಸಿಎಂ ಮಾಡಿ ನಾನು ಸಚಿವನಾದೆ. ಕೇವಲ ನನ್ನ ಬಗ್ಗೆ ವಿಪಕ್ಷದವರು, ನನ್ನವರೇ ಆದ ಶತ್ರುಗಳು ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಿದರು.


ಅಲ್ಲದೆ, ಕಲಬುರಗಿ ಭಾಗದಲ್ಲಿ ಏರ್ ಪೋರ್ಟ್ ಮಾಡಿದ್ದು ನಾನು. ವಿಜಯಪುರ, ಬಳ್ಳಾರಿ ಏರ್ ಪೋರ್ಟ್, ಮೊನ್ನೆ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರು ಬಂದು ಉದ್ಘಾಟನೆ ಮಾಡಿದ ಏರ್ ಪೋರ್ಟ್ ಮಾಡಿದ್ದು ನಾನು. ದೇವರಾಜ್ ಅರಸು, ಸಿದ್ದರಾಮಯ್ಯ ಅಂತ ಘಟಾನುಘಟಿ ನಾಯಕರು ಹುಟ್ಟಿದ ಮೈಸೂರಿನಲ್ಲಿ, ಯಡಿಯೂರಪ್ಪ-ಸಿದ್ದರಾಮಯ್ಯ ಅವರನ್ನು ಫ್ಲೈಟ್ ನಲ್ಲಿ ಕೂರಿಸಿಕೊಂಡು ಹೋಗಿ ಲ್ಯಾಂಡ್ ಮಾಡಿ ಉದ್ಘಾಟನೆ ಮಾಡಿದ್ದು ನಾನು ಎಂದು ತಿಳಿಸಿದರು.


ಬಿಎಸ್​ವೈರನ್ನ ಸಿಎಂ ಮಾಡಿ ನಾನು ಸಚಿವನಾದೆ


ನೀರಿನಲ್ಲಿ ಈಜುವ ಮೀನಿನಂತಿದ್ದ ನನಗೆ ನಮ್ಮವರು ಶತ್ರುಗಳು, ಬಲೆ ಹಾಕಿದರು. ನಂತರ ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ನಲ್ಲಿ ಸಿಲುಕಿ ಹಾಕಿಸಿದ್ದರು. ನಾಲ್ಕು ವರ್ಷ ಜೈಲಿಗೆ ಹಾಕಿ 12 ವರ್ಷ ಜನರ ಮಧ್ಯೆ ಇರದಂತೆ ಮಾಡಿದ್ದರು. ನನ್ನ ವನವಾಸ ಮುಗಿದಿದೆ, ನಿಮ್ಮ ವನವಾಸ ಪ್ರಾರಂಭವಾಗಿದೆ. ನನಗೆ ಯಾರಾದರೂ ಕಾಫಿ ಟೀ ಕೊಟ್ಟರೆ ನಿಮ್ಮನ್ನ ಮನೆಗೆ ಕರೆದು ಊಟ ಮಾಡಿಸಬೇಕು ಅಂತ ಇದ್ದೀನಿ.
ಅದು ಅಡ್ವಾನಿ, ವಾಜಪೇಯಿ ಕಾಲ. ಇವತ್ತಿನ ಬಿಜೆಪಿಯಲ್ಲಿ‌ ತತ್ವ ಸಿದ್ಧಾಂತ ಇಲ್ಲ. ಎಲ್ಲವೂ ಮಣ್ಣು ಪಾಲಾಗಿದೆ. ಬಿಜೆಪಿಯಲ್ಲಿ ಈಗ ಎಲ್ಲವೂ ವ್ಯಾಪಾರ ಆಗಿದೆ. ಬಿಜೆಪಿ ಹೇಗೆ ನನಗೆ ಮೋಸ ಮಾಡಿತೋ, ಹಾಗೆ ಲಿಂಗಸುಗೂರಿನಲ್ಲಿ ಕಾಂಗ್ರೆಸ್ ರುದ್ರಯ್ಯಗೆ ಮೋಸ ಮಾಡಿದೆ. 15 ವರ್ಷದ ಹಿಂದೆ ನಾವು ಶಾಸರನ್ನ ಮಾಡೋವಾಗ, ಕೆಲವರನ್ನ ಅಮಾಯಕರು ಅಂತ ತಿಳಿದಿದ್ದೆ. ಆದರೆ ನಾವೇ ಅಮಾಯಕರು. ನೇರ ನುಡಿಯಿಂದ ಮಾತನಾಡಿ ಜೈಲಿಗೆ ಹೋಗೋ ಪರಿಸ್ಥಿತಿ ನನಗೆ ಬಂತು. ಸಾವಿರಾರು ಕೋಟಿ ಮಾಡಿಕೊಂಡು ಬಿಜೆಪಿ ಮಾನಪ್ಪ ವಜ್ಜಲ್ ಆರಾಮವಾಗಿ ಮನೆಯಲ್ಲಿದ್ದಾರೆ ಎಂದರು.

First published: