• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dharwad Elections: ಕ್ಷೇತ್ರಕ್ಕೆ ಎಂಟ್ರಿ ಇಲ್ಲದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಟಿಕೆಟ್: ಕೈ, ಕಮಲ ಕಾರ್ಯಕರ್ತರ ವಾರ್

Dharwad Elections: ಕ್ಷೇತ್ರಕ್ಕೆ ಎಂಟ್ರಿ ಇಲ್ಲದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಟಿಕೆಟ್: ಕೈ, ಕಮಲ ಕಾರ್ಯಕರ್ತರ ವಾರ್

ವಿನಯ್ ಕುಲಕರ್ಣಿ, ಮಾಜಿ ಸಚಿವ

ವಿನಯ್ ಕುಲಕರ್ಣಿ, ಮಾಜಿ ಸಚಿವ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಈ ಬಾರಿ ಕಾಂಗ್ರೆಸ್  ಟಿಕೆಟ್ ಘೋಷಿಸಿದೆ. ಮತ್ತೊಂದೆಡೆ ಹಾಲಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಈ ಇಬ್ಬರೂ ನಾಯಕರ ಬೆಂಬಲಿಗರು ಈಗಾಗಲೇ ಫೇಸ್ಬುಕ್ನಲ್ಲಿ ದೊಡ್ಡ ಮಟ್ಟದ ವಾರ್ ಶುರು ಮಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Dharwad, India
  • Share this:

ಧಾರವಾಡ(ಏ.07): ಚುನಾವಣೆ (Karnataka Elections) ಬಂತು ಅಂದ್ರೆ ಪ್ರಬಲ ಸ್ಪರ್ಧಿಗಳ ಮಧ್ಯೆ ಹಾಗೂ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ ಇದ್ದೇ ಇರುತ್ತೆ. ಆಯಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳಲು ಎದುರಾಳಿಗಳಿಗೆ ತಿರುಗೇಟು ನೀಡುತ್ತಲೇ ಇರುತ್ತಾರೆ. ಅದರಲ್ಲಿಯೂ ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಂತೂ (Social Media) ಕೇವಲ ಪೋಸ್ಟ್ ಮೂಲಕವೇ ಒಬ್ಬರ ಮೇಲೋಬ್ಬರು ಕೆಸರೆರಚುತ್ತಲೇ ಇರುತ್ತಾರೆ. ಅಂತಹುದೇ ಒಂದು ಫೇಸ್ಬುಕ್ ವಾರ್ (Facebook War)  ಈಗ ಧಾರವಾಡದಲ್ಲಿ ಶುರುವಾಗಿದೆ.


ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಈ ಏಳರ ಪೈಕಿ ಧಾರವಾಡ ಗ್ರಾಮೀಣ (Dharwad Rural) ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಫೈಟ್​ಗೆ ಸಾಕ್ಷಿಯಾಗಲಿದೆ. ಯಾಕಂದ್ರೆ ಯೋಗೇಶಗೌಡ ಕೊಲೆ ಕೇಸ್​ನ ಸಿಬಿಐ ತನಿಖೆಯಲ್ಲಿ ಸಿಲುಕಿ ಜಿಲ್ಲಾ ಪ್ರವೇಶದ ನಿರ್ಬಂಧದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಈ ಬಾರಿ ಕಾಂಗ್ರೆಸ್  ಟಿಕೆಟ್ ಘೋಷಿಸಿದೆ. ಮತ್ತೊಂದೆಡೆ ಹಾಲಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಈ ಇಬ್ಬರೂ ನಾಯಕರ ಬೆಂಬಲಿಗರು ಈಗಾಗಲೇ ಫೇಸ್ಬುಕ್ನಲ್ಲಿ ದೊಡ್ಡ ಮಟ್ಟದ ವಾರ್ ಶುರು ಮಾಡಿದ್ದಾರೆ.


ಇವರು ಅವರ ಮೇಲೆ, ಅವರು ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವುದು ಮಾತ್ರವಲ್ಲದೇ ಕೆಲವೊಂದು ಪೋಸ್ಟ್ ಗಳಲ್ಲಿ ವೈಯಕ್ತಿಕ ನಿಂದನೆಯೂ ಆರಂಭವಾಗಿದೆ.




ಇದೆಲ್ಲ ಹೀಗೇಕೆ ಎಂದು ಕೇಳಿದ್ರೆ ಕಾಂಗ್ರೆಸ್​ನವರು ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ. ಅವರು ಮಾಡಿದ್ದೇ ಬೇರೆ, ಅದನ್ನೆಲ್ಲಾ ಜನರಿಗೆ ತಿಳಿಸಬೇಕಿದೆ, ಅದಕ್ಕೆ ನಾವು ಪೋಸ್ಟ್ ಹಾಕ್ತಾ ಇದ್ದೇವೆ. ಅಲ್ಲದೇ ಎದುರಾಳಿಯ ಪೋಸ್ಟ್​ಗಳಿಗೆ  ಸುಮ್ಮನೆ ಇರೋದಕ್ಕೆ ಆಗೋದಿಲ್ಲ. ಅದಕ್ಕೆ ನಮ್ಮ ಕಾರ್ಯಕರ್ತರು ಅವರ ವಿರುದ್ಧ ಪೋಸ್ಟ್ ಗಳ ಮೂಲಕವೇ ತಿರುಗೇಟು ನೀಡುತ್ತಿದ್ದಾರೆ ಅನ್ನೋ ಸಮರ್ಥನೆಯನ್ನು ಬಿಜೆಪಿಗರು ನೀಡುತ್ತಿದ್ದಾರೆ.




ಇನ್ನು ವಿನಯ್ ಕುಲಕರ್ಣಿ ಮತ್ತು ಅಮೃತ ದೇಸಾಯಿಯ ವೈಯಕ್ತಿಕ ವಿಚಾರಗಳು ಸಹ ಇಲ್ಲಿನ ಕಾರ್ಯಕರ್ತರ ಪೋಸ್ಟ್​ಗಳಲ್ಲಿ ಹರಿದಾಡುತ್ತಿವೆ. ಫೇಸ್​ಬುಕ್ ವಾರ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವೊಬ್ಬ ಪದಾಧಿಕಾರಿಯೂ ಇಲ್ಲ. ಬದಲಿಗೆ ಎರಡೂ ಕಡೆಯಲ್ಲಿರುವ ತಳಮಟ್ಟದ ಕಾರ್ಯಕರ್ತರೇ ಈ ವಾರ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕಳೆದ ಒಂದು ವಾರದಿಂದ ವಿನಯ್ ಕುಲಕರ್ಣಿಗೆ ಟಿಕಟ್ ಸಿಗದೇ ಇದ್ದಾಗ, ಅಮೃತ ದೇಸಾಯಿ ಹಿಂದೊಮ್ಮೆ ಹೇಳಿದ್ದ ಬಂದಾರ ಬಾರೋ. ಅನ್ನೋ ಭಾಷಣದ ವಿಡಿಯೋ ಇಟ್ಟುಕೊಂಡು ಬಿಜೆಪಿಗರು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು. ಆದರೆ ಈಗ ವಿನಯ್​ಗೆ ಟಿಕೆಟ್ ಸಿಕ್ಕಿದೆ.  ಈಗ ಏನಂತೀರಿ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಹಾಕ್ತಿದ್ದಾರೆ. ಈಗ ನಮ್ಮ ನಾಯಕರಿಗೆ ಟಿಕೆಟ್ ಸಿಕ್ಕಿದೆ ಅಸಲಿ ಆಟ ಇನ್ನು ಮುಂದೆ ಇದೆ ನೋಡಿ ಅನ್ನೋ ಸವಾಲು ಹಾಕಿದ್ದಾರೆ.


ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?




ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಫೇಸ್​ಬುಕ್ ವಾರ್ ಜೋರಾಗಿಯೇ ನಡೆದಿದ್ದರೂ ಎರಡೂ ಕಡೆಯ ನಾಯಕರಲ್ತಲಿ ಯಾರೊಬ್ಬರೂ ತಮ್ಮ  ಕಾರ್ಯಕರ್ತರಿಗೆ ಮೀತಿಯಲ್ಲಿರುವಂತೆ ಹೇಳುತ್ತಿಲ್ಲ. ಇತ್ತ ಚುನಾವಣಾ ಆಯೋಗವೂ ಸಹ ಈ ಪೋಸ್ಟ್ ಗಳನ್ನು ಗಮನಿಸುತ್ತಿಲ್ಲ.


ಮಂಜುನಾಥ್ ಯಡಳ್ಳಿ,  ನ್ಯೂಸ್ 18 ಧಾರವಾಡ

First published: