• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಬೇಡಿಕೆಗೆ ಸ್ಪಂದಿಸದ ಸರ್ಕಾರಕ್ಕೆ ಬಂಟರ ವಾರ್ನಿಂಗ್, ಕರಾವಳಿಯಲ್ಲಿ ಬಿಜೆಪಿಗೆ ಮತ್ತೊಂದು ಅಡ್ಡಿ

Karnataka Politics: ಬೇಡಿಕೆಗೆ ಸ್ಪಂದಿಸದ ಸರ್ಕಾರಕ್ಕೆ ಬಂಟರ ವಾರ್ನಿಂಗ್, ಕರಾವಳಿಯಲ್ಲಿ ಬಿಜೆಪಿಗೆ ಮತ್ತೊಂದು ಅಡ್ಡಿ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚೆಗೆ ರಾಜ್ಯ ಸರ್ಕಾರ ಮಂಡಿಸಿದ್ದ ಬಜೆಟ್ ವಿರುದ್ದ ಬಂಟ ಸಮುದಾಯ ಆಕ್ರೋಶ ಹೊರಹಾಕಿದೆ. ನಮ್ಮನ್ನ ನಿರ್ಲಕ್ಷ್ಯ ಮಾಡಿದರೆ ಸರ್ಕಾರ ಉರುಳಿಸುತ್ತೇವೆ ಎಂದು ಪರೋಕ್ಷವಾಗಿ ವಾರ್ನ್ ಮಾಡಿದೆ ಕರಾವಳಿಯ ಬಂಟ ಸಮುದಾಯ.

 • News18 Kannada
 • 3-MIN READ
 • Last Updated :
 • Udupi, India
 • Share this:

ಉಡುಪಿ(ಮಾ.08): ಚುನಾವಣೆ (Karnataka Elections) ಹೊಸ್ತಿಲಲ್ಲಿ ಕರಾವಳಿಯ ಪ್ರಬಲ ಸಮುದಾಯವೊಂದು (Bunt Community) ಸರ್ಕಾರದ ವಿರುದ್ದ ಸಿಡಿದೆದ್ದಿದೆ.ಕರಾವಳಿ ಭಾಗದ ಪ್ರಮುಖ ಓಟ್ ಬ್ಯಾಂಕ್ ಆಗಿರುವ ಬಂಟ ಸಮುದಾಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರ (State Govt) ಮಂಡಿಸಿದ್ದ ಬಜೆಟ್ ವಿರುದ್ದ ಬಂಟ ಸಮುದಾಯ ಆಕ್ರೋಶ ಹೊರಹಾಕಿದೆ. ನಮ್ಮನ್ನ ನಿರ್ಲಕ್ಷ್ಯ ಮಾಡಿದರೆ ಸರ್ಕಾರ ಉರುಳಿಸುತ್ತೇವೆ ಎಂದು ಪರೋಕ್ಷವಾಗಿ ವಾರ್ನ್ ಮಾಡಿದೆ ಕರಾವಳಿಯ ಬಂಟ ಸಮುದಾಯ.


ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಕರಾವಳಿಯ ಬಿಲ್ಲವರು ತುಂಬಾ ದಿನಗಳಿಂದ ಹೋರಾಟ ನಡೆಸಿದ್ದರು. ಬಿಲ್ಲವರ ಹೋರಾಟಕ್ಕೆ ಮಣಿದ ಸರ್ಕಾರ ಕೊನೆಗೂ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿತ್ತು. ಇದೀಗ ಕರಾವಳಿಯ ಇನ್ನೊಂದು ಪ್ರಬಲ ಸಮುದಾಯವಾದ ಬಂಟರ ಸರದಿ. ಬಂಟರ ಸಂಘಟನೆಗಳು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಬೇಕು ಮತ್ತು ಬಂಟರ ಅಭಿವೃದ್ಧಿ ನಿಗಮ ರಚಿಸಬೇಕು, ಇಲ್ಲದಿದ್ದಲ್ಲಿ ಪರಿಣಾಮ ಎದುರಿಸಿ ಎಂದು ನೇರವಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.


ಇದನ್ನೂ ಓದಿ: Madalu Virupakshappa: ಊರೆಲ್ಲ ಹುಡುಕಿದ್ರೂ ಸಿಗದ ಮಾಡಾಳು ಮನೆ ಬಳಿ ಪ್ರತ್ಯಕ್ಷ! ಜಾಮೀನು ಪಡೆದು ಬಂದ ಶಾಸಕನಿಗೆ ಅದ್ಧೂರಿ ಸ್ವಾಗತ!


ಜಾಗತಿಕ ಬಂಟರ ಸಂಘಟನೆ ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ತಮ್ಮನ್ನು 2ಎಗೆ ಸೇರಿಸಿ ಎಂದು ಮನವಿ ಸಲ್ಲಿಸಿದ್ದವು. ಆದರೆ ಬಜೆಟ್ ನಲ್ಲಿ ಸರಕಾರ ಅವರ ಬೇಡಿಕೆಯನ್ನು ಈಡೇರಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಬಂಟರ ಸಂಘಟನೆಗಳು, ಸರಕಾರಕ್ಕೆ ನೇರ ಎಚ್ಚರಿಕೆ ನೀಡಿವೆ. ಬಿಜೆಪಿ ಪಕ್ಷದ ಸಾಂಪ್ರದಾಯಿಕ ಮತದಾರರಾಗಿ ಗುರುತಿಸಿಕೊಂಡಿದ್ದ ಈ ಸಮುದಾಯವತಮ್ಮ ಬೇಡಿಕೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ಮಾಧ್ಯಮದ ಮೂಲಕ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಐದು ಮಂದಿ ಶಾಸಕರನ್ನು ಹೊಂದಿರುವ ಬಂಟ ಸಮುದಾಯ ಈ. ಬಾರಿ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಸಮುದಾಯದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ಮಾಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಂಟ ಮುಖಂಡರು ರಾಜ್ಯದ 20 ಕ್ಷೇತ್ರಗಳಲ್ಲಿ ನಮ್ಮ ಪ್ರಾಬಲ್ಯ ಇದೆ. ಬಂಟ ಸಮುದಾಯದಲ್ಲಿ 30 ಲಕ್ಷ ಮತದಾರರು ಇದ್ದೇವೆ. ಅಭ್ಯರ್ಥಿಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ಬಂಟ ಸಮುದಾಯಕ್ಕಿದೆ. ನಾವು ಗೆಲ್ಲದಿದ್ದರೂ ತೊಂದರೆ ಇಲ್ಲ ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುತ್ತೇವೆ ಎಂದು ಆಡಳಿತ ಪಕ್ಷಕ್ಕೆ ಖಡಕ್ ಎಚ್ಚರಿಕೆ ನೀಡಿದೆ ಬಂಟ ಸಮುದಾಯ.


ಬಂಟ ಸಮುದಾಯದ ಎರಡು ಪ್ರಮುಖ ಬೇಡಿಕೆಗಳು


* ಹಿಂದುಳಿದ ವರ್ಗ ಮೂರು ಬಿ ಯಲ್ಲಿದ್ದ ಮೀಸಲಾತಿಯನ್ನು, 2A ವರ್ಗಕ್ಕೆ ಸೇರಿಸಬೇಕು


* ಬಂಟ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಆಗ್ರಹ


ನಮ್ಮ ಬೇಡಿಕೆಗಳನ್ನ ಮೂರು ವರ್ಷಗಳ ಹಿಂದೆ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಬಂಟರು ಅಂದರೆ ಶ್ರೀಮಂತರು ಆಸ್ತಿವಂತರು ಅನ್ನೋದು ತಪ್ಪು ಕಲ್ಪನೆ, ಅದು ಈಗಲೂ ಇದೆ. ಶೇಕಡ 90ರಷ್ಟು ಬಂಟರು ಈಗಲೂ ಬಡತನದಲ್ಲಿದ್ದಾರೆ. ನಮ್ಮ ಔದಾರ್ಯವನ್ನು ವೀಕ್ನೆಸ್ ಎಂದು ಭಾವಿಸಬೇಡಿ ಎಂದಿದ್ದಾರೆ ಮುಖಂಡರು.


ಇದನ್ನೂ ಓದಿ:  Madal Virupakshappa: 6 ದಿನಗಳಿಂದ ತಲೆ ಮರೆಸಿಕೊಂಡಿದ್ದ ಬಿಜೆಪಿ ಶಾಸಕನಿಗೆ ಮಧ್ಯಂತರ ಜಾಮೀನು ಜಾರಿ!


ಅಲ್ಲದೇ ಈ ಬಾರಿ ಅನ್ಯ ರಾಜ್ಯ , ಅನ್ಯ ದೇಶಗಳಲ್ಲಿರುವ ಬಂಟ ಮತದಾರರು ಬಂದು ಸರಕಾರದ ವಿರುದ್ಧ ವೋಟ್ ಮಾಡುತ್ತಾರೆ. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಾದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ.‌ ಬೇಡಿಕೆ ಈಡೇರದಿದ್ದಲ್ಲಿ ಸಮಸ್ತ ಬಂಟರಿಂದ ಹೋರಾಟ ಕೂಡ ನಡೆಯಲಿದೆ ಎಂದಿದ್ದಾರೆ.
ನಮ್ಮಲ್ಲಿ ಪ್ರಭಾವಿ ರಾಜಕೀಯ ನಾಯಕರಿದ್ದಾರೆ. ಆದರೂ ಕೂಡ ನಮ್ಮ ಬೇಡಿಕೆಯನ್ನು ಸರಕಾರ ಈಡೇರಿಸಿಲ್ಲ. ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಬಂಟರು ಮನಸ್ಸು ಮಾಡಿದರೆ ಸುಮಾರು 20 ಕ್ಷೇತ್ರಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಶಾಸಕರನ್ನು ಸೋಲಿಸುವ ಶಕ್ತಿ ಇದೆ. ಮಾತ್ರವಲ್ಲ, ನಮ್ಮ ಬೇಡಿಕೆ ಈಡೇರಿಸದಿದ್ದರೆ ಬಂಟ ಸಮುದಾಯದವರನ್ನು ಕಣಕ್ಕೆ ಇಳಿಸುವ ಮೂಲಕ ಸರಕಾರಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಮುಖಂಡರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

Published by:Precilla Olivia Dias
First published: