• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Congress: ಕಾಂಗ್ರೆಸ್ ಪ್ರಜಾಧ್ವನಿಯಲ್ಲಿ​ ‘ಹಸ್ತ’ದ ಗುರುತು ಬದಲಾಗಿದ್ದು ಯಾಕೆ? ಇಲ್ಲಿದೆ ನೋಡಿ ಕಾರಣ!

Karnataka Congress: ಕಾಂಗ್ರೆಸ್ ಪ್ರಜಾಧ್ವನಿಯಲ್ಲಿ​ ‘ಹಸ್ತ’ದ ಗುರುತು ಬದಲಾಗಿದ್ದು ಯಾಕೆ? ಇಲ್ಲಿದೆ ನೋಡಿ ಕಾರಣ!

'ಕಾಂಗ್ರೆಸ್ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್

'ಕಾಂಗ್ರೆಸ್ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್

ಚುನಾವಣೆಯಲ್ಲಿ ಗೆಲ್ಲಲು ಜನ ಬೆಂಬಲದೊಂದಿಗೆ ಅದೃಷ್ಟವೂ ಬೇಕು ಎಂದು ರಾಜಕೀಯದ ಮಂದಿ ನಂಬುತ್ತಾರೆ. ಸಣ್ಣ ನಂಬಿಕೆಗಳಿಗೂ ಮಹತ್ವ ಕೊಟ್ಟು ಚುನಾವಣಾ ಗೆಲುವಿಗೆ ಮಹತ್ವ ಕೊಡುತ್ತಾರೆ. ಇದೀಗ ರಾಜ್ಯ ಕಾಂಗ್ರೆಸ್ ಕೂಡ ಅದೇ ಬಗೆಯ ಪ್ರಯೋಗಕ್ಕೆ ಮುಂದಾಗಿದೆ ಎಂಬ ಚರ್ಚೆ ಶುರುವಾಗಿದೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

  ಬೆಂಗಳೂರು (ಫೆ. 07): ರಾಜಕಾರಣಿಗಳಿಗೂ ಜ್ಯೋತಿಷ್ಯ ಶಾಸ್ತ್ರಕ್ಕೂ (Astrology) ಅವಿನಾಭಾವ ಸಂಬಂಧ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಚುನಾವಣೆ ಬಂದಾಗ ಇದು ಮತ್ತಷ್ಟು ಹೆಚ್ಚಾಗುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಜನ ಬೆಂಬಲದೊಂದಿಗೆ ಅದೃಷ್ಟವೂ ಬೇಕು ಎಂದು ರಾಜಕೀಯದ (Politicians) ಮಂದಿ ನಂಬುತ್ತಾರೆ. ಸಣ್ಣ ನಂಬಿಕೆಗಳಿಗೂ ಮಹತ್ವ ಕೊಟ್ಟು ಚುನಾವಣಾ ಗೆಲುವಿಗೆ ಮಹತ್ವ ಕೊಡುತ್ತಾರೆ. ಇದೀಗ ರಾಜ್ಯ ಕಾಂಗ್ರೆಸ್ (Karnataka Congress) ಕೂಡ ಅದೇ ಬಗೆಯ ಪ್ರಯೋಗಕ್ಕೆ ಮುಂದಾಗಿದೆ ಎಂಬ ಚರ್ಚೆ ಶುರುವಾಗಿದೆ.


  ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ರಾಜಕೀಯ ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿವೆ. ಜೊತೆಗೆ ಈ ಸಲ ಆಮ್ ಆದ್ಮಿ ಪಾರ್ಟಿ ಕೂಡ ರಾಜ್ಯದಲ್ಲಿ ತನ್ನ ಬಲ ಪರೀಕ್ಷೆಗೆ ಮುಂದಾಗಿದೆ. ಇದೇ ವೇಳೆ ಕಾಂಗ್ರೆಸ್ ಮಾಡಿಕೊಂಡಿದೆ ಎನ್ನಲಾದ ಬದಲಾವಣೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಈಡಾಗುತ್ತಿದೆ. ಅಷ್ಟಕ್ಕೂ ಕಾಂಗ್ರೆಸ್ ಮಾಡಿಕೊಂಡಿರುವ ಬದಲಾವಣೆ ಏನು? ಮುಂದಿದೆ ಮಾಹಿತಿ!


  ಇದನ್ನೂ ಓದಿ: Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!


  ವಿಧಾನಸಭಾ ಚುನಾವಣೆಯಲ್ಲಿ 140 ಸೀಟ್ ಗೆಲ್ಲುವುದೇ ಕಾಂಗ್ರೆಸ್ ಗುರಿ!


  ಬರುವ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ  ಸ್ಪಷ್ಟ ಬಹುಮತದ ನಿರೀಕ್ಷೆಯಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಕಾರ್ಯಕ್ರಮ ಮೂಲಕ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲಿ ಬಳಕೆ ಮಾಡಲಾಗುತ್ತಿರುವ ‘ಹಸ್ತ’ದ  ಸಿಂಬಲ್​ನಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ಜನರ ಗಮನ ಸೆಳೆಯುತ್ತಿದೆ.
  ಹೌದು, ಕಳೆದ 4 ದಶಕಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ‘ಹಸ್ತ’ದ ಚಿಹ್ನೆ ಇಟ್ಟುಕೊಂಡು ದೇಶಾದ್ಯಂತ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಆದರೆ ಇದೀಗ ಕರ್ನಾಟಕ ಕಾಂಗ್ರೆಸ್ 'ಹಸ್ತ’ದ ಚಿಹ್ನೆಯಲ್ಲಿ ಸಣ್ಣ ಬದಲಾವಣೆ ಮಾಡಿದೆ ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ. ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶಗಳಲ್ಲಿ ಬಳಕೆ ಆಗುತ್ತಿರುವ ‘ಹಸ್ತ’ದ ಚಿಹ್ನೆಯಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಗೆರೆ ಕಾಣಿಸುತ್ತಿದೆ. ಮೂರು ಗೆರೆಗಳಿಗೆ ಅಡ್ಡಲಾಗಿ ಮತ್ತೊಂದು ಗೆರೆಯನ್ನು ಸೇರಿಸಲಾಗಿದೆ. ಹೀಗೇಕೆ ಮಾಡಲಾಗಿದೆ ಎಂಬುದಕ್ಕೆ ಕುತೂಹಲಕಾರಿ ವಿವರಣೆಯೂ ಇದೆ.


  ಇದನ್ನೂ ಓದಿ: Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?


  ಈ ಬದಲಾವಣೆಗೆ ಕಾರಣ ಕಾರಣಸಂಖ್ಯಾಶಾಸ್ತ್ರ ತಜ್ಞರ ಸಲಹೆ?


  ಈ ಹಿಂದೆ ಬಳಸಲಾಗುತ್ತಿದ್ದ ‘ಹಸ್ತ’ದ ಗುರುತಿನಲ್ಲಿ ಮೂರು ಗೆರೆಗಳಿದ್ದವು. ಆದರೆ ಮೂರು ಗೆರೆಗಳು ಇರುವುದು ಸರಿಯಲ್ಲ. ಮೂರು ಗೆರೆಗಳಿಗೆ ಬದಲಾಗಿ ಸಮ ಸಂಖ್ಯೆ ಗೆರೆಗಳನ್ನು ಬಳಕೆ ಮಾಡಿ ಎಂದು ಸಂಖ್ಯಾಶಾಸ್ತ್ರ ತಜ್ಞರು ಸಲಹೆ ಕೊಟ್ಟಿದ್ದಾರಂತೆ. ಹೀಗಾಗಿ ಸಂಖ್ಯಾಶಾಸ್ತ್ರ ತಜ್ಞರ ಸಲಹೆಯಂತೆ ಗೆರೆಗಳನ್ನು ಬದಲಾಯಿಸಲಾಗಿದೆ. ಮೂರು ಗೆರೆಗಳ ಮಧ್ಯೆ ಅಡ್ಡ ಗೆರೆ ಎಳೆದ ಸಿಂಬಲ್ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿದೆ.


  ಅದೃಷ್ಟದ ಮೊರೆ ಹೋದ್ರಾ ಡಿ.ಕೆ. ಶಿವಕುಮಾರ್?


  ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶಗಳಲ್ಲಿ ಈ ಹೊಸ ‘ಹಸ್ತ’ದ ಚಿಹ್ನೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಂಖ್ಯಾಶಾಸ್ತ್ರ ತಜ್ಞರ ಸಲಹೆಯಂತೆ ಬದಲಾವಣೆ ತಂದಿದ್ದಾರೆ ಎನ್ನಲಾಗಿದೆ. ಅದೃಷ್ಟಕ್ಕಾಗಿ ಹಸ್ತದ ರೇಖೆಯನ್ನು ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
  1980ರಲ್ಲಿ ಕಾಂಗ್ರೆಸ್ ಸಿಂಬಲ್ ಆಗಿ ಹಸ್ತದ ‘ಚಿಹ್ನೆ’ ಹುಟ್ಟಿಕೊಂಡಿತ್ತು. ಅದು ಕಾಂಗ್ರೆಸ್ ಸಿಂಬಲ್ ಆಗಿ ಬಳಕೆ ಆಗುತ್ತಿತ್ತು. ಆ ಹಸ್ತದ ಗುರುತಿನಲ್ಲಿ ಮೂರು ಗೆರೆಗಳಿದ್ದವು.
  ಈಗ ಪ್ರಜಾಧ್ವನಿ ಯಾತ್ರೆ, ಸಮಾವೇಶದಲ್ಲಿ ನಾಲ್ಕು ಗೆರೆಗಳಿರುವ ಹಸ್ತದ ಚಿಹ್ನೆ ಬಳಕೆ ಮಾಡಲಾಗುತ್ತಿದೆ. ಆದರೆ ಈ ಹೊಸ ಹಸ್ತದ ಗುರಿತನ ಬಗ್ಗೆ ಕಾಂಗ್ರೆಸ್ ಪಕ್ಷ ಮಾಹಿತಿ ಕೊಡಬೇಕಾಗಿದೆ.


  - ಅನಿಲ್ ಬಸ್ರೂರು, ನ್ಯೂಸ್​ 18 ಕನ್ನಡ

  Published by:Precilla Olivia Dias
  First published: