ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan ) ಅವರು ಇಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ (Malleshwaram) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ (Nomination ) ಸಲ್ಲಿಕೆ ಮಾಡಿದ್ದಾರೆ. ಭಾರೀ ಪ್ರಚಾರದೊಂದಿಗೆ ಮಲ್ಲೇಶ್ವರ 18ನೇ ಕ್ರಾಸ್ ನಲ್ಲಿರುವ ಆರ್.ಓ ಕಚೇರಿಗೆ ಆಗಮಿಸಿದ ಅಶ್ವಥ್ ನಾರಾಯಣ್ ಅವರು 12:32ಕ್ಕೆ ಸರಿಯಾಗಿ ಅಧಿಕೃತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ್ ಅವರು, ಇಂದು ಕಾಂಗ್ರೆಸ್ (Congress) ಸೇರ್ಪಡೆಯಾದ ಜಗದೀಶ್ ಶೆಟ್ಟರ್ (Jagadish Shettar) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಶೆಟ್ಟರ್ ಹೋದರೆ ಇನ್ನೊಬ್ಬ ಲಿಂಗಾಯತ (Lingayat) ನಾಯಕ ನಮ್ಮಲ್ಲಿ ಹುಟ್ಟಿಕೊಳ್ತಾರೆ ಎಂದು ಕೌಂಟರ್ ನೀಡಿದ್ದಾರೆ.
ಜನರು ಪಾಠ ಕಲಿಸ್ತಾರೆ ಅಂತ ವಾರ್ನಿಂಗ್!
ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಶೆಟ್ಟರ್ ನಡೆಗೆ ಕೌಂಟರ್ ನೀಡಿದರು. ಶೆಟ್ಟರ್ ಬಿಜೆಪಿ ಬಿಟ್ಟಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಅವರ ನಿರ್ಗಮನದಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ.
ಇದನ್ನೂ ಓದಿ: Karnataka Election 2023: ಬೆಂಗಳೂರಿಗೆ ಕಳಪೆ ಮತದಾನದ ಅಪಖ್ಯಾತಿ ತಪ್ಪಿಸಲು BBMPಯಿಂದ ಸರ್ವ ಪ್ರಯತ್ನ; ಮನೆ ಮನೆಗೆ ಜಾಗೃತಿ!
ಅಲ್ಲದೆ, ಶೆಟ್ಟರ್ ಅವರಿಂದ ಲಿಂಗಾಯತ ಸಮುದಾಯ ಬಿಜೆಪಿ ಬೆಂಬಲಿಸುವುದು ನಿಲ್ಲಿಸಲ್ಲ. ಇಡೀ ಲಿಂಗಾಯತ ಸಮುದಾಯ ಈಗಲೂ ಮುಂದೆಯೂ ನಮ್ಮ ಜೊತೆಗಿರುತ್ತೆ. ಅವರು ಹೋದರೆ ಇನ್ನೊಬ್ಬ ಲಿಂಗಾಯತ ನಾಯಕ ನಮ್ಮಲ್ಲಿ ಹುಟ್ಟಿಕೊಳ್ಳುತ್ತಾರೆ.
ಸವದಿ, ಶೆಟ್ಟರ್ ಹೋಗಿರುವುದರಿಂದ ಯಾವುದೇ ಹೊಡೆತ ನಮ್ಮ ಪಕ್ಷಕ್ಕಿಲ್ಲ. ಇದುವರೆಗೂ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿರಲಿಲ್ಲ. ಆದರೆ ಈಗಿನ ಬೆಳವಣಿಗೆ ನೋಡಿದರೆ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ