ಹುಬ್ಬಳ್ಳಿ(ಏ,29): ಪ್ರಧಾನಿ ಮೋದಿ (PM Narendra Modi) ಅವರನ್ನು ವಿಷ ಸರ್ಪಕ್ಕೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಬಿಜೆಪಿ (BJP) ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಅಮಿತ್ ಶಾ (Amit Shah) , ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರ್ಜರಿ ಪ್ರಚಾರ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಶಾ, ಮೋದಿ ಒಂಬತ್ತು ವರ್ಷದಲ್ಲಿ ದೇಶದ ಮಾನ ಹೆಚ್ಚಿಸಿದ್ದಾರೆ.ಮೂಲಭೂತ ಸೌಕರ್ಯ ಹೆಚ್ಚಿಸಿದ್ದಾರೆ. ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಇಡೀ ವಿಶ್ವದಲ್ಲಿ ಮೋದಿ ಬಗ್ಗೆ ಅಭಿಮಾನದಾತುಗಳು ವ್ಯಕ್ತವಾಗ್ತಿವೆ. ಆದರೆ ಖರ್ಗೆ ಅವರು ಮೋದಿಯನ್ನು ವಿಷ ಸರ್ಪ ಕ್ಕೆ ಹೋಲಿಸ್ತಾರೆ. ಇಂತಹ ಕಾಂಗ್ರೆಸ್ನ್ನು ಚುನಾವಣೆಯಲ್ಲಿ ಗೆಲ್ಲಿಸ್ತೀರಾ..? ಸೋನಿಯಾ ಗಾಂಧಿ ಮೌತ್ ಕಾ ಸೌದಾಗರ್ ಅಂತಾರೆ. ರಾಹುಲ್ ಗಾಂಧಿ ನೀಚ ಜಾತಿ ಜನ ಅಂತಾರೆ. ಮೋದಿಗೆ ನೀವು ಹೀಗಳೆದಷ್ಟೂ ಕಮಲ ಮತ್ತಷ್ಟು ಅರಳುತ್ತೆ. ಮೋದಿಗೆ ಧಮ್ಕಿ ಕೊಟ್ಟಷ್ಟು ಅವರ ಪರ ಅಲೆ ಏಳಲಿದೆ. ಒಬ್ಬ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾನೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ನಾನು ಯಾರಿಗೂ ಅಂಜೋದಿಲ್ಲ. ಪಿ.ಎಫ್.ಐ ನಿಷೇಧಿಸಿ ಕರ್ನಾಟಕ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. ಆದ್ರೆ ಮತಬ್ಯಾಂಕ್ಗಾಗಿ ಕಾಂಗ್ರೆಸ್ ಪಿ.ಎಫ್.ಐ ಯನ್ನು ಸಮರ್ಥಿಸ್ತಿದೆ. ಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಕಾಶ್ಮೀರದಲ್ಲಿ ವ್ಯಾಪಕವಾಗಿ 370 ಅನ್ವಯ ಕೊಟ್ಟ ವಿಶೇಷ ಸ್ಥಾನಮಾನ ವಾಪಸ್ ಪಡೆದಿದೆ. ಅದ್ರೆ ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ವಿರೋಧಿಸಿದವು. ರಕ್ತದ ನದಿ ಹರಿಯಲಿದೆ ಅಂತ ರಾಹುಲ್ ಬಾಬಾ ಹೇಳಿದ್ರು. ಆದ್ರೆ ನಾವು 370 ತೆಗೆದೆವು. ಈಗ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಗುಡುಗಿದ್ದಾರೆ.
ಕರ್ನಾಟಕದಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಅದನ್ನು ಬಿಜೆಪಿ ವಾಪಸ್ ಪಡೆದಿದೆ. ಆದ್ರೆ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡೋದಾಗಿ ಹೇಳ್ತಿದಾರೆ. ಹಾಗಿದ್ದರೆ ಯಾರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ಪ್ರಶ್ನಿಸಿದರು. ಡಬಲ್ ಎಂಜಿನ್ ಸರ್ಕಾರ ತನ್ನಿ. ಮೋದಿ ಅವರ ಕೈ ಮತ್ತಷ್ಟು ಬಲಪಡಿಸಿ. ಮುಂದಿ ಮೋದಿ ಸರ್ಕಾರ ಬರಬೇಕಂದ್ರೆ, ಈಗ ರಾಜ್ಯದಲ್ಲಿ ಕಮಲ ಅರಳಬೇಕು ಎಂದಿದ್ದಾರೆ.
ಇದನ್ನೂ ಓದಿ: Karnataka Election: ಸಿಎಂ ರೇಸ್ನಲ್ಲಿರೋ ಬಿಜೆಪಿ ನಾಯಕರ ಹೆಸರು ಬಿಚ್ಚಿಟ್ಟ ಸುರ್ಜೇವಾಲಾ
ಯಡಿಯೂರಪ್ಪ ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ದರು. ಕೃಷಿಕರ ಕಲ್ಯಾಣಕ್ಕೆ ಶ್ರಮಿಸಿದರು. ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆದರೆ ಮಹಾದಾಯಿ ವಿವಾದ ಬಗೆಹರಿಸಲಿಲ್ಲ. ಉತ್ತರ ಕರ್ನಾಟಕದ ರೈತರ ಜೀವನಲ್ಲಿ ಖುಷಿ ತಂದರು. ಕಳಸಾ - ಬಂಡೋರಿ ಯೋಜನೆ ಚಾಲನೆಗೆ ಮೋದಿ ಕಾರಣಕರ್ತರಾದರು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಇದ್ದ ಕಬ್ಬಿನ ದರವನ್ನು ಬಿಜೆಪಿ ಹೆಚ್ಚಿಸಿತು. ಎಥೆನಾಲ್ ಹೊಸ ಯೋಜನೆಯನ್ನೂ ಮೋದಿ ಜಾರಿಗೆ ತಂದರು. ಶಂಕರಪಾಟೀಲ ಮತ್ತು ಅನಿಲ್ ಮೆಣಸಿನಕಾಯಿ ಗೆಲ್ಲಿಸಿ. ಶಾಸಕರ ಜೊತೆ, ಸಚಿವರನ್ನಾಗಿ ಮಾಡುವ ಚುನಾವಣೆ. ಕರ್ನಾಟಕದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ ಎಂದರು.
ಮಹ್ಮದ್ ಗೋರಿಯನ್ನು ಮಣಿಸಿದ ಮಹಿಳೆಯರು ಕಿತ್ತೂರು ಕರ್ನಾಟಕದವರು. ರಾಹುಲ್ ಬಾಬಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವಿದೆ. ಮತ್ತೊಂದೆಡೆ ಮೋದಿ ನೇತೃತ್ವದ ಲ್ಲಿ ಬಿಜೆಪಿ ಸರ್ಕಾರವಿದೆ. ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ. ರಿವರ್ಸ್ ಗೇರ್ ಸರ್ಕಾರ ಬಯಸ್ತಿರಾ..? ರಿವರ್ಸ್ ಗೇರ್ ಸರ್ಕಾರದಿಂದ ಯಾರ ಅಭಿವೃದ್ಧಿಯೂ ಸಾಧ್ಯವಿಲ್ಲ. ರೈತರ ಮೇಲೆ ಗೋಲಿಬಾರ್ ಮಾಡಿದ್ದು ಇದೇ ಕಾಂಗ್ರೆಸ್. ರೈತರ ಮೇಲೆ ಲಾಠಿ, ಗುಂಡೇಟು ಹೊಡೆದ ಕಾಂಗ್ರೆಸ್ ಗೆ ಮತ ಕೇಳುವ ನೈತಿಕತೆಯಿಲ್ಲ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ