• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ಮತ್ತೆ ಮೌಢ್ಯಕ್ಕೆ ಸೆಡ್ಡು ಹೊಡೆದ ಸತೀಶ್ ಜಾರಕಿಹೊಳಿ! 4ನೇ ಬಾರಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಕೆ

Karnataka Election 2023: ಮತ್ತೆ ಮೌಢ್ಯಕ್ಕೆ ಸೆಡ್ಡು ಹೊಡೆದ ಸತೀಶ್ ಜಾರಕಿಹೊಳಿ! 4ನೇ ಬಾರಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಕೆ

ಶಾಸಕ ಸತೀಶ್ ಜಾರಕಿಹೊಳಿ

ಶಾಸಕ ಸತೀಶ್ ಜಾರಕಿಹೊಳಿ

ಕರ್ನಾಟದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ 10 ಅತ್ಯಂತ ಲೀಡ್ ಮತಗಳನ್ನು ಪಡೆಯುವ ಕ್ಷೇತ್ರಗಳಲ್ಲಿ ಯಮಕನಮರಡಿಯೂ ಸಹ ಒಂದಾಗಿರುತ್ತೆ ಎಂದು ಸತೀಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • News18 Kannada
 • 4-MIN READ
 • Last Updated :
 • Belgaum, India
 • Share this:

ಚಿಕ್ಕೋಡಿ: ಕಾಂಗ್ರೆಸ್ (Congress)​ ಪಕ್ಷದ ಹಿರಿಯ ನಾಯಕ, ಯಮಕನಮರಡಿ (Yemkanmardi Assembly constituency) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್​ ಜಾರಕಿಹೊಳಿ (Satish Jarkiholi) ಇಂದು ರಾಹುಕಾಲದಲ್ಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಮತ್ತೆ ಮೌಢ್ಯಕ್ಕೆ ಸೆಡ್ಡು ಹೊಡೆಯುವ ಕೆಲಸವನ್ನು ಸತೀಶ್ ಜಾರಕಿಹೊಳಿ ಮಾಡಿದ್ದಾರೆ. ಮೌಢ್ಯದ ವಿರುದ್ಧವಾಗಿ ರಾಹುಕಾಲದಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ (Nomination) ಸಲ್ಲಿಸಿದ್ದು, ರಾಹುಕಾಲ ಶುರುವಾಗುವರೆಗೆ ಕಾದು ರಾಹುಕಾಲ ಶುರುವಾದ ಬಳಿಕ ನಾಮಪತ್ರ ಸಲ್ಲಿಕೆ ಪ್ರತಿಕ್ರಿಯೆ ಆರಂಭಿಸಿದ್ದರು. ಪ್ರತಿ ಬಾರಿಯೂ ರಾಹುಕಾಲದಲ್ಲೇ ಸತೀಶ್​ ಅವರು ನಾಮಪತ್ರ ಸಲ್ಲಿಸುವುದು ವಿಶೇಷ ಸಂಗತಿಯಾಗಿದೆ.


ಯಮಕನಮರಡಿ ವಿಧಾಸಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸತೀಶ್​ ಜಾರಕಿಹೊಳಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆರಂಭದಿಂದಲೂ ಅವರು ಮೌಢ್ಯದ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ. ಹುಕ್ಕೇರಿ ತಹಶೀಲ್ದಾರ್​​ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.


ಕರ್ನಾಟಕದಲ್ಲಿ ಟಾಪ್ ಟೆನ್ ನಲ್ಲಿ ಗೆಲುವು ಪಡೆಯುವ ವಿಶ್ವಾಸ


ಈ ವೇಳೆ ನೀವು ಮೌಢ್ಯ ವಿರೋಧ ಮಾಡಿದರೆ ಬಿಜೆಪಿಯವರು ನಿಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸ್ವಾಭಾವಿಕ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಲೇಬೇಕಾಗುತ್ತದೆ. ಅವರು ಬೇರೆಯವರಿಗೂ ವಿರೋಧ ಮಾಡುತ್ತಾರೆ, ನಮಗೊಬ್ಬರಿಗೆ ವಿರೋಧ ಮಾಡಲ್ಲ ಎಂದರು.


ಇದೇ ವೇಳೆ ಕರ್ನಾಟಕದಲ್ಲಿ ಟಾಪ್ ಟೆನ್ ನಲ್ಲಿ ಗೆಲುವು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಸತೀಶ್​​ ಜಾರಕಿಹೊಳಿ, ತಮ್ಮನ್ನು ಹಿಂದೂ ವಿರೋಧಿ ಎಂದು ಕರೆದ ಯತ್ನಾಳ್​ ಅವರ ಹೇಳಿಕೆಗೂ ತಿರುಗೇಟು ನೀಡಿದರು. ಈ ಬಾರಿ ಎಷ್ಟು ವೋಟ್ ಬರುತ್ತೆ ಎಂದು ಗೊತ್ತಾಗುತ್ತದೆ. ನಮ್ಮ ಪರವಾಗಿ ಎಷ್ಟು ಹಿಂದುಗಳಿದ್ದಾರೆ ಎಂದು ಗೊತ್ತಾಗುತ್ತದೆ. ಮೇ 13ರಂದು ಬೆಳಗ್ಗೆ 11 ಗಂಟೆ ವೇಳೆಗೆ ಅವರ ಟೀಕೆಗೆ ಮತಗಳ ಮೂಲವೇ ಉತ್ತರ ಕೊಡುತ್ತೇನೆ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: Karnataka Election 2023: ರೌಡಿಗಳಿಗೆ ಬಿಗ್​ ಶಾಕ್​; ಬೆಂಗಳೂರು ಪೊಲೀಸರಿಂದ 500ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ


ಅಶೋಕ್ ಪೂಜಾರಿ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರೂ ಸಹ ಪಕ್ಷದ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಎಲ್ಲಾ ಕಡೆ ಸಂಧಾನ ಮಾಡುತ್ತಿದ್ದೇವೆ. ಅಥಣಿ ಮತ್ತು ಕಾಗವಾಡಕ್ಕೆ ಹೋಗಿ ಪ್ರಚಾರ ಮಾಡುತ್ತೇವೆ. 19 ಕ್ಷೇತ್ರಗಳಲ್ಲಿ ನಮ್ಮ ಜವಾಬ್ದಾರಿ‌ ಇದೆ ಎಂದರು.


ಜಾರಕಿಹೊಳಿ ಸಹೋದರರ ನಡುವೆ ಹೊಂದಾಣಿಕೆ ಆಗಿ ಟಿಕೆಟ್​ ಕೈ ತಪ್ಪಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರು ತಮ್ಮ ಪಕ್ಷದ ಅವರನ್ನೇ ಈ ಪ್ರಶ್ನೆ ಕೇಳಬೇಕು. ಅಮಿತ್ ಶಾ ನನ್ನ ಮಾತು ಕೇಳಲ್ಲ. ಅವರದ್ದೇ ಆದ ಆರ್​​ಎಸ್​​ಎಸ್ ಪಡೆ ಇದೆ, ಲೆಕ್ಕಾಚಾರ ಇದೆ. ನಮಗೆ ಕೇಳಿ ಅವರಿಗೆ ಟಿಕೆಟ್ ಕೊಡುವುದಾದರೆ ಎಲ್ಲಾ ಕಡೆಗೂ ಚುನಾವಣೆ ಇಲ್ಲದೆ ಗೆದ್ದು ಬರುತ್ತಿದ್ದೇವು ಎಂದರು.


ಕರ್ನಾಟದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ 10 ಅತ್ಯಂತ ಲೀಡ್ ಮತಗಳನ್ನು ಪಡೆಯುವ ಕ್ಷೇತ್ರಗಳಲ್ಲಿ ಯಮಕನಮರಡಿಯೂ ಸಹ ಒಂದಾಗಿರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

top videos
  First published: