ತುಮಕೂರು: ಪ್ರಚಾರದ ನೆಪದಲ್ಲಿ ಮಹಿಳೆಯರನ್ನು (Woman) ಮಂಚಕ್ಕೆ ಕರೆದಿದ್ದಾರೆ ಎಂದು ಮಹಿಳೆಯರು ತುಮಕೂರು (Tumakuru) ನಗರ ಜೆಡಿಎಸ್ (JDS) ಅಭ್ಯರ್ಥಿ ಗೋವಿಂದರಾಜು (Govindaraju) ವಿರುದ್ದ ಮಹಿಳೆಯರು ಸಿಡಿದೆದಿದ್ದಾರೆ. ಇಂದು ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ (Town Hall Circle) ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಗೋ ಬ್ಯಾಕ್ (Go back) ಗೋವಿಂದರಾಜು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಜೆಡಿಎಸ್ ಪಕ್ಷಕ್ಕೆ ತುಮಕೂರಿನ ಹೆಣ್ಣು ಮಕ್ಕಳ ಮೇಲೆ ಗೌರವ ಇದ್ದರೆ ಗೋವಿಂದರಾಜುವನ್ನು ವಜಾಗೊಳಿಸುವಂತೆ ಆಗ್ರಹ ಮಾಡಿದ್ದು, ಪಕ್ಷದಿಂದ ಬಿ ಫಾರಂ (B Farm) ಕೊಡದಂತೆ ಆಗ್ರಹಿಸಿದ್ದಾರೆ. ನಗರದ ಮಹಿಳೆಯೊಬ್ಬರು ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ದೂರು ಸಹ ನೀಡಿದ್ದಾರೆ. ಇದರ ನಡುವೆ ಗೋವಿಂದರಾಜು ಮಾತನಾಡಿದ ಪೋಲಿ ಆಡಿಯೋ (Audio) ಕೂಡ ಬಿಡುಗಡೆಯಾಗಿತ್ತು.
ಮಹಿಳೆಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ
ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೊಸ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು. ಒಂದು ವೇಳೆ ಅವರನ್ನೇ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನ; ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಅಖಂಡ ಶ್ರೀನಿವಾಸಮೂರ್ತಿ
ಜೆಡಿಎಸ್ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರು ಈ ಬಗ್ಗೆ ಕೂಡಲೇ ಗಮನಹರಿಸಬೇಕು. ಮಹಿಳೆಯೊಬ್ಬರು ಬಹಿರಂಗವಾಗಿ ಎಲ್ಲರ ಎದುರು ಬಂದು ತನಗೆ ಅನ್ಯಾವಾಗಿದೆ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ, ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಆಗ್ರಹಿಸಿದ್ದಾರೆ.
ಆರೋಪ ನಿರಾಕರಿಸಿದ ಜೆಡಿಎಸ್ ಅಭ್ಯರ್ಥಿ
ಇನ್ನು, ದೂರು ನೀಡಿದ ಮಹಿಳೆ ಜೆಡಿಎಸ್ ಅಭ್ಯರ್ಥಿ ಮಾತನಾಡಿದ್ದಾರೆ ಎನ್ನಲಾದ ಕೆಲವು ಆಡಿಯೋ ಸಾಕ್ಷ್ಯಗಳನ್ನು ನೀಡಿದ್ದರು. ಅಲ್ಲದೆ ಗೋವಿಂದರಾಜು ಮನೆಯ ಎದುರು ಗಲಾಟೆ ನಡೆಸಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದರು. ಆಡಿಯೋದಲ್ಲಿ ಮಹಿಳೆ ಜೊತೆ ಅಶ್ಲೀಲವಾಗಿ ಮಾತನಾಡಿರುವುದು ಕಂಡು ಬಂದಿದೆ. ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಗೋವಿಂದರಾಜು, ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ನಾನು ಅಲ್ಲ, ಆ ಮಹಿಳೆ ಯಾರು ಅಂತನೇ ನನಗೆ ಗೊತ್ತಿಲ್ಲ. ಎದುರಾಳಿ ಕಾಂಗ್ರೆಸ್ ಪಕ್ಷದವರು ನನ್ನ ವಿರುದ್ಧ ಅಪಪ್ರಚಾರ ನಡೆಸಲು ಕುತಂತ್ರದಿಂದ ಆಡಿಯೋ ಹೊರಬಿಟ್ಟಿದ್ದಾರೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ