• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗಿಲ್ಲ ಅವಕಾಶ; ಅರ್ಜಿ ವಜಾಗೊಳಿಸಿ ಹೈಕೋರ್ಟ್​ ಆದೇಶ

Karnataka Election 2023: ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗಿಲ್ಲ ಅವಕಾಶ; ಅರ್ಜಿ ವಜಾಗೊಳಿಸಿ ಹೈಕೋರ್ಟ್​ ಆದೇಶ

ವಿನಯ್ ಕುಲಕರ್ಣಿ

ವಿನಯ್ ಕುಲಕರ್ಣಿ

ನಮ್ಮ ಕಾನೂನಿನ ಹೋರಾಟ ಮುಂದುವರೆಸುತ್ತೇವೆ. ವಿನಯ್​ ಕುಲಕರ್ಣಿ ಅವರು ಬರದಿದ್ದರೂ ನಾನೇ ಮುಂದೆ ನಿಂತು ಚುನಾವಣೆ ಪ್ರಚಾರ ಮಾಡುವೆ ಎಂದು ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಧಾರವಾಡ (Dharwad) ಕ್ಷೇತ್ರದ ಕಾಂಗ್ರೆಸ್ (Congress)​ ಪಕ್ಷದ ಅಭ್ಯರ್ಥಿಯಾಗಿರುವ ವಿನಯ್​​ ಕುಲಕರ್ಣಿ (Vinay Kulkarni) ಅವರಿಗೆ ಧಾರವಾಡ ಭೇಟಿಗೆ ಕರ್ನಾಟಕ ಹೈಕೋರ್ಟ್ (High Court)​​ ನಿರಾಕರಿಸಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ (Yogesh Gowda) ಹತ್ಯೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ (Supreme Court) ಜಾಮೀನು ನೀಡುವಾಗ ಧಾರವಾಡ ಭೇಟಿಗೆ ತಡೆ ನೀಡಿತ್ತು. ಆದರೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಾರಣ ಧಾರವಾಡ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿ ಹೈಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​ ಅನುಮತಿ ನೀಡಲು ನಿರಾಕರಿಸಿ ಅರ್ಜಿ (Application) ವಜಾಗೊಳಿಸಿದೆ. ಇದೇ ವೇಳೆ ವಿನಯ್​ ಕುಲಕುರ್ಣಿ ಪರ ವಕೀಲರಿಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.


ಸುಪ್ರೀಂ ಕೋರ್ಟ್ ಧಾರವಾಡಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿತ್ತು, ಕಾಂಗ್ರೆಸ್​​ ಹೈಕಮಾಂಡ್ ವಿನಯ್​ ಕುಲಕರ್ಣಿಗೆ ಟಿಕೆಟ್​ ಕೊಟ್ಟಿದ್ದ ಕಾರಣ ಧಾರವಾಡಕ್ಕೆ ಹೋಗಲು ಅನುಮತಿ ಕೋರಿ ಮನವಿ ಮಾಡಿದ್ದರು. ಅರ್ಜಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿರುವುದರಿಂದ 50 ದಿನಗಳ ಕಾಲ ಧಾರವಾಡಕ್ಕೆ ಭೇಟಿ ನೀಡಲು ಎರಡು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು.


ಇದನ್ನೂ ಓದಿ: Siddaramaiah: ಮೋದಿ ಆಶೀರ್ವಾದ ಬೇಕಿದ್ದರೆ ಬಿಜೆಪಿಗೆ ಮತ ಹಾಕಿ ಎಂದಿದ್ದ ಜೆಪಿ ನಡ್ಡಾಗೆ ಸಿದ್ದರಾಮಯ್ಯ ಟಾಂಗ್‌!


ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಿಬಿಐ ಪರ ಎಸ್​​ ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಸುಪ್ರೀಂ ಕೋರ್ಟ್ ಜಾಮೀನು ಷರತ್ತು ಕೂಡ ಸಡಿಲಿಸಿಲ್ಲ. ಆದರೂ ಕಾಂಗ್ರೆಸ್ ಅವರಿಗೆ ಏಕೆ ನೀಡಿದೆ ಎಂದು ಪ್ರಸನ್ನ ಕುಮಾರ್ ಹೈಕೋರ್ಟಿಗೆ ಮಾಹಿತಿ ನೀಡಿದ್ದರು. ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿ. ಎಚ್. ಜಾಧವ್ ವಾದ ಮಂಡಿಸಿದದ್ದರು.




ಸದ್ಯ ವಿನಯ್ ಕುಲಕರ್ಣಿ ಸಲ್ಲಿಸಿದ ಎರಡೂ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇತ್ತೀಚೆಗಷ್ಟೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡ ಅರ್ಜಿ ವಿನಯ್​​ ಕುಲಕರ್ಣಿ ಅವರ ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.


ಇನ್ನು, ವಿನಯ್​ ಕುಲಕರ್ಣಿ ಅನುಪಸ್ಥಿತಿಯಲ್ಲಿ ನಿನ್ನೆ ಪತ್ನಿ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್​ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದರು.


ಶಿವಲೀಲಾ ಕುಲಕರ್ಣಿ


ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಿವಲೀಲಾ ಕುಲಕರ್ಣಿ, ನಮ್ಮ ಮನೆಯವರು ಬರುತ್ತಾರೆ ಅಂತಾ ವಿಶ್ವಾಸ ಇತ್ತು, ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ. ಆದರೆ ನಮಗೆ ಹಿನ್ನೆಡೆ ಆಗಿದೆ. ಮುಂದೆಯೂ ಕಾನೂನಿನ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ.


ಕಾನೂನಿನ ಹೋರಾಟ ಮುಂದುವರೆಸುತ್ತೇವೆ. ಅವರು ಬರದಿದ್ದರೂ ನಾನೇ ಮುಂದೆ ನಿಂತು ಚುನಾವಣೆ ಪ್ರಚಾರ ಮಾಡುವೆ. ನಾನೇ ಪ್ರತಿ ಮನೆಗೆ ಹೋಗಿ ಮತ ಯಾಚನೆ ಮಾಡುವೆ. ಹತ್ತು ವರ್ಷದಿಂದ ನಮ್ಮ ಮನೆಯವರನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಕ್ಷೇತ್ರದಲ್ಲಿ ಏನೇ ಕೆಟ್ಟದಾದರೂ ವಿನಯ್ ಕುಲಕರ್ಣಿಗೆ ಹಣೆಪಟ್ಟಿ ಹಚ್ಚುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನ ಉತ್ತರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

First published: