ಬೆಂಗಳೂರು: ಉಡುಪಿ (Udupi) ಹಾಗೂ ಚಿಕ್ಕಮಗಳೂರಲ್ಲಿ (Chikkamagaluru) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ (Chikkamagaluru) ಶೃಂಗೇರಿ ಅಭ್ಯರ್ಥಿ ಜೀವರಾಜ್ ಪರ ಯೋಗಿ ಮತಯಾಚನೆ ಮಾಡಿದರು. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ಪುತ್ತೂರಿನಲ್ಲೂ (Puttur) ಯೋಗಿ ಆದಿತ್ಯನಾಥ್ ಅಬ್ಬರದ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್, ಕರ್ನಾಟಕ (Karnataka) ಆಂಜನೇಯನ ಪುಣ್ಯ ಭೂಮಿ, ಬಜರಂಗದಳ (Bajrang Dal) ಬ್ಯಾನ್ ಮಾಡ್ತೀವಿ ಅಂತಿದೆ ಕಾಂಗ್ರೆಸ್, ಬಜರಂಗಬಲಿ ಮಹಾಪುರುಷ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ, ಕಾಂಗ್ರೆಸ್ವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ಬಜರಂಗಿ ಅಂದರೆ ಯಾಕೆ ಕೋಪ?
ಹೊನ್ನಾವರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಯೋಗಿ, ಕಾಂಗ್ರೆಸ್ ನವರಿಗೆ ಬಜರಂಗಿ ಅಂದರೆ ಯಾಕೆ ಕೋಪ? ಹನುಮಾನ್ ಜಪ ಮಾಡಿದರೆ ಭೂತ ಪಿಶಾಚಿಗಳ ಕಾಟ ನಿವಾರಣೆ ಆಗುತ್ತವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನ್ನು ಭೂತಕ್ಕೆ ಹೋಲಿಸಿದರು.
ಇದನ್ನೂ ಓದಿ: 2023 Karnataka Elections: ಬಾದಾಮಿ ಕ್ಷೇತ್ರವನ್ನು ಬಿಟ್ಟು ಸಿದ್ದು ಓಡಿ ಹೋಗಿದ್ದಾರೆ! ಪ್ರಧಾನಿ ಮೋದಿ ವ್ಯಂಗ್ಯ
ಕಾಂಗ್ರೆಸ್ ಅವರಿಗೆ ಬಜರಂಗಿ ಅಂದರೆ ಯಾಕೆ ಕೋಪ? ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ನಿಮ್ಮನ್ನ ಆಹ್ವಾನಿಸಲು ಬಂದಿದ್ದೇನೆ. ಅಯೋಧ್ಯೆ ರಾಮನ ಊರಿನಿಂದ ಪರಶುರಾಮನ ಊರಿಗೆ ಬಂದಿದ್ದೇನೆ. ಬಜರಂಗ ದಳ ನಿಷೇಧಿಸಿದರೆ ಪಿಎಫ್ಐ ಆಹ್ವಾನ ಮಾಡಿದಂತೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ನ ಅಧರ್ಮ ಹೋಗಲಾಡಿಸಬೇಕು
ಕಾರ್ಕಳದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಯೋಗಿ, ಪರಶುರಾಮನ ಭೂಮಿಗೆ ಬಂದು ಆನಂದವಾಗಿದೆ. ಅಯೋಧ್ಯೆ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ನಾನು ಹನುಮನ ಜನ್ಮಭೂಮಿಗೆ ಬಂದಿದ್ದೇನೆ. ವನವಾಸ ಕಾಲದಲ್ಲಿ ಕರ್ನಾಟಕದಲ್ಲೇ ರಾಮನಿಗೆ ಹನುಮನ ಸಾಂಗತ್ಯ ದೊರಕಿತು.
ಹನುಮಂತ ರಾವಣನ ಲಂಕೆಯನ್ನು ನಾಶ ಮಾಡಿ ಅಧರ್ಮ ಹೋಗಲಾಡಿಸಲು ಸಹಕರಿದ್ದ. ಅದೇ ರೀತಿ ನೀವು ರಾಷ್ಟ್ರಭಕ್ತ ಜನರು ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ನ ಅಧರ್ಮ ಹೋಗಲಾಡಿಸಬೇಕು. ಪಿಎಫ್ ಐ ಗೆ ಬೆಂಬಲ ನೀಡುವವರನ್ನು ಸೋಲಿಸಬೇಕು. ಮತ್ಯೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ ಮನವಿ ಮಾಡಿದರು.
ನಿಮ್ಮ ಉತ್ಸಾಹ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಬರುವುದರ ಸೂಚನೆಯಾಗಿದೆ. ಈಗ ಭಾರತದ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಐಟಿ ಹಬ್ ಆಗಿ ಕರ್ನಾಟಕ, ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಭಾರತದ ವಿಕಾಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಟೀಂ ಇಂಡಿಯಾಗೆ ಮೋದಿ ಕ್ಯಾಪ್ಟನ್ ಆಗಿದ್ದಾರೆ, ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವತ್ತೂ ಇರಬೇಕು.
ನೀವು ಯಾವತ್ತೂ ರಾಷ್ಟ್ರವಾದಕ್ಕೆ ಸಹಕಾರ ನೀಡಿದ್ದೀರಿ. ರಾಷ್ಟವಾದದ ಕಿಡಿ ಮನೆ ಮನೆ ತಲುಪಬೇಕು. ಸುನೀಲ್ ಕುಮಾರ್ ನಿಮ್ಮ ಅಭ್ಯರ್ಥಿ ಅವರನ್ನು ಗೆಲ್ಲಿಸಬೇಕು. ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾಗುತ್ತೆ, ರಾಮಮಂದಿರದಲ್ಲಿಕರ್ನಾಟಕ ಕರಸೇವಕರ ಕೊಡುಗೆ ದೊಡ್ಡದು. ಭವ್ಯಮಂದಿರ ನಿರ್ಮಾಣದ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ