• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yogi Adityanath-Mandya: ‘ಡಬಲ್​​ ಇಂಜಿನ್​ ಸರ್ಕಾರದಲ್ಲಿ ಅಭಿವೃದ್ಧಿ ಹೆಚ್ಚು’ -ದಳಪತಿಗಳ ಕೋಟೆಯಲ್ಲಿ ಯೋಗಿ ಅಬ್ಬರದ ಭಾಷಣ!

Yogi Adityanath-Mandya: ‘ಡಬಲ್​​ ಇಂಜಿನ್​ ಸರ್ಕಾರದಲ್ಲಿ ಅಭಿವೃದ್ಧಿ ಹೆಚ್ಚು’ -ದಳಪತಿಗಳ ಕೋಟೆಯಲ್ಲಿ ಯೋಗಿ ಅಬ್ಬರದ ಭಾಷಣ!

ಮಂಡ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಭಾಷಣ

ಮಂಡ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಭಾಷಣ

ಮಂಡ್ಯದಲ್ಲಿ ನಡೆದಿದ್ದ ಕುಂಭಮೇಳದ ಸಮಯದಲ್ಲಿ ನಾನು ಭಾಗಿ ಆಗಬೇಕಿತ್ತು. ಆದರೆ ತೀವ್ರ ಅತಿವೃಷ್ಠಿಯಿಂದ ಬರಲು ಸಾಧ್ಯವಾಗಲಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

  • Share this:

ಮಂಡ್ಯ: ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್​ನಲ್ಲಿ (Silver Jubilee Park)  ನಡೆಯುತ್ತಿರುವ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ಭಾಗಿಯಾಗಿದ್ದು, ವೇದರಿಕೆ ಮೇಲೆ ಸಿಎಂ ಯೋಗಿ ಭಾಷಣ ಶುರು ಮಾಡುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕನ್ನಡದಲ್ಲೇ (Kannada) ಭಾಷಣ ಆರಂಭಿಸಿದ ಯೋಗಿ, ಆದಿ ಚುಂಚನಗಿರಿಗೆ (Adichunchanagiri ) ನನ್ನ ನಮಸ್ಕಾರಗಳು ಎಂದರು. ಕರ್ನಾಟಕದ (Karnataka) ಕಾರ್ಯಕರ್ತರಿಗೆ ಉತ್ತರ ಪ್ರದೇಶದವನಾದ ನಾನು ನಮಸ್ಕರಿಸುತ್ತೇನೆ. ಇಂದು ಮಂಡ್ಯದಲ್ಲಿ (Mandya) ನಾನು ಬಂದಿರುವುದು ಸಂತಸ ತಂದಿದೆ‌. ನಿಮ್ಮ ಬಳಿ ಬಂದು ದರ್ಶನ ಮಾಡಲು, ಮಾತನಾಡಲು ಬಂದಿರುವೆ. ಮಂಡ್ಯ ಹಾಗೂ ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದಲೂ (Treta Yuga) ಇದೆ. ಉತ್ತಮ ಪುರುಷ ಶ್ರೀರಾಮ ಹಾಗೂ ಆಂಜನೇಯ ವನವಾಸದ ಕುರುಹುಗಳು ಮಂಡ್ಯದಲ್ಲಿದೆ ಎಂದು ಹೇಳಿದರು.


ಮಂಡ್ಯದಲ್ಲಿ ನಡೆದಿದ್ದ ಕುಂಭಮೇಳದ ಸಮಯದಲ್ಲಿ ನಾನು ಭಾಗಿ ಆಗಬೇಕಿತ್ತು. ಆದರೆ ತೀವ್ರ ಅತಿವೃಷ್ಠಿಯಿಂದ ಬರಲು ಸಾಧ್ಯವಾಗಲಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರು ಭಾರತೀಯರನ್ನು ಗೌರವದಿಂದ ಕಾಣುತ್ತಾರೆ. ವಿಶ್ವದ ಅತಿ ಶಕ್ತಿಯುತ ದೇಶಗಳ ಪೈಕಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಯೋಗಿ ಹೇಳಿದರು.


ಇದನ್ನೂ ಓದಿ: Karnataka Election 2023: ಕೊನೆಯ ಹಂತದ ಚುನಾವಣೆ ಪ್ರಚಾರ ಯಾರಿಗೆ? ಎಷ್ಟು ನಿರ್ಣಾಯಕ?


ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಆತ್ಮಹತ್ಯೆ ನಿಂತಿದೆ


ಇನ್ನು, ತಮ್ಮ ಭಾಷಣದ ವೇಳೆ ರಾಜಧಾನಿ ಬೆಂಗಳೂರನ್ನು ನೆನೆದ ಯೋಗಿ, ಬೆಂಗಳೂರು ಐಟಿ ಹಬ್ ಆಗಿ ಬೆಳೆಯುತ್ತಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬುಲ್ಡೋಜರ್ ಬಾಬ ಟಾಂಗ್ ನೀಡಿ, ಕಾಂಗ್ರೆಸ್ ಅಭಿವೃದ್ಧಿ ಅಂತಾರೆ ಆದರೆ ಅವರು ಏನು ಮಾಡಿದ್ದಾರೆ. ಪ್ರತಿಯೊಂದು ಸೆಕ್ಟರ್ ನಲ್ಲಿ ಅಭಿವೃದ್ಧಿ ಪಥದತ್ತ ಈಗ ಭಾರತ ಸಾಗುತ್ತಿದೆ.




ಮೋದಿ ಸರ್ಕಾರ ಬಂದ ಬಳಿಕ ಅಭಿವೃದ್ಧಿಗಳು ನಡೆಯುತ್ತಿದೆ. ರೈತರು ಬಡವರ್ಗದವರು ಮೋದಿ ಸರ್ಕಾರದಿಂದ ಅನುಕೂಲವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಆತ್ಮಹತ್ಯೆ ನಿಂತಿದೆ. ನನಗೆ ಕೇಳುತ್ತಾರೆ ಯುಪಿ ಅಭಿವೃದ್ಧಿ ಹೇಗೆ ಸಾಧ್ಯ ಅಂತ. ಇದಕ್ಕೆ ಡಬಲ್ ಇಂಜಿನ್ ಸರ್ಕಾರವೇ ಕಾರಣ. ಯುಪಿಯಲ್ಲಿ ಕರ್ಫ್ಯೂ ಇಲ್ಲ, ದಂಗೆ ಇಲ್ಲ ಏನಿದ್ದರೂ ಬರಿ ಚಂಗಾ (ಚೆನ್ನಾಗಿದೆ) ಎಂದರು.


ಉಜ್ವಲ ಭವಿಷ್ಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಅವಶ್ಯಕತೆ


ಪಿಎಫ್ಐ ಬ್ಯಾನ್ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ರಾಜ್ಯದಲ್ಲಿಯೂ ಪಿಎಫ್​​ಐ ಬ್ಯಾನ್ ಮಾಡಲಾಗಿದೆ. ಆದರೆ ಕಾಂಗ್ರೆಸ್ ನವರು ಅವರಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದಲೇ ಆಭಿವೃದ್ಧಿ ಸಾಧ್ಯ. ದೇಶದ ಉಜ್ವಲ ಭವಿಷ್ಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಅವಶ್ಯಕತೆಯಿದೆ. ನಾವು ಟೀಂ ಇಂಡಿಯಾ ತರ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ದು ಪೇ ಇಂಜಿನ್ ಸರ್ಕಾರವಾಗಿದೆ. ಟೀಂ ಇಂಡಿಯಾದ ಕಪ್ತಾನನಾಗಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕಮಲವನ್ನು ಅರಳಿಸಿ ಶಕ್ತಿ ತುಂಬಿ. ಇಲ್ಲಿ ಡಬಲ್ ಇಂಜಿನ್ ಸರ್ಕಾರ ಬರಲು ಸಹಕರಿಸಿ.




ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲು ಬಂದಿದ್ದೇನೆ


ಮುಂಬರುವ ಜನವರಿಯಲ್ಲಿ ಶ್ರೀರಾಮ ಮಂದಿರ ಸಿದ್ದವಾಗಲಿದೆ. ಅಯೋದ್ಯೆಯಲ್ಲಿ ಕರ್ನಾಟಕದವರಿಗಾಗಿ ಗೆಸ್ಟ್ ಹೌಸ್ ನಿರ್ಮಾಣ ಮಾಡಲಿದ್ದೇವೆ. ನಿಮಗೆಲ್ಲರಿಗೂ ಅಯೋಧ್ಯೆಗೆ ಆಮಂತ್ರಣ ಮಾಡಲಿಕ್ಕೆ ಹಾಗೂ ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನ ಗೆಲ್ಲಿಸೋಕೆ ಬಂದಿದ್ದೇನೆ.


ನಾನು ಇಲ್ಲಿನ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸೋಕೆ ಬಂದಿದ್ದೇನೆ ಎಂದು ಕನ್ನಡದಲ್ಲೇ ಹೇಳಿದರು. ಇನ್ನೂ, ಮಂಡ್ಯಗೆ ಆಗಮಿಸಿದ ಯೋಗಿಗೆ ಪಂಚ ಲೋಹಗಳ ಕಂಚಿನ ವಿಗ್ರಹ ಕಾಲಭೈರವನ ವಿಗ್ರಹ ಗಿಫ್ಟ್ ನೀಡಲಾಗಿದೆ. ಆದಿತ್ಯನಾಥ್ ಅವರಿಗೆ ವಿಶೇಷವಾಗಿ ಸಿದ್ಧಪಡಿಸಿರುವ ಕಾಲಭೈರವನ್ನ ವಿಗ್ರಹ ನೀಡಲಾಗಿದೆ.

First published: