• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 2023 Karnataka Election: ತನ್ನದೇ ಕ್ಷೇತ್ರದ ಪ್ರಭಾವಿ ನಾಯಕನ ಸೋಲಿಗಾಗಿ ತಿರುಪತಿ ತಿಮ್ಮಪ್ಪನ ಮೊರೆ ಹೋದ್ರಾ ಬಿಜೆಪಿ ಹಿರಿಯ ನಾಯಕ?

2023 Karnataka Election: ತನ್ನದೇ ಕ್ಷೇತ್ರದ ಪ್ರಭಾವಿ ನಾಯಕನ ಸೋಲಿಗಾಗಿ ತಿರುಪತಿ ತಿಮ್ಮಪ್ಪನ ಮೊರೆ ಹೋದ್ರಾ ಬಿಜೆಪಿ ಹಿರಿಯ ನಾಯಕ?

ಬಿಜೆಪಿ

ಬಿಜೆಪಿ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮೇಲೆ ರಾಷ್ಟ್ರೀಯ ನಾಯಕರು ಕೂಡ ಗಮನಹರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳಲು ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರವನ್ನ ಬಿಜೆಪಿ ಗೆಲ್ಲಬೇಕಿದೆ. 

  • Share this:

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ (Hubblli Dharwad Central Assembly Constituency) ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಕ್ಷೇತ್ರದ ಗೆಲುವಿಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ತಿರುಪತಿ ತಿಮ್ಮಪ್ಪನ ಮೊರೆ ಹೋದರ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ. ಈ ನಡುವೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮೇಲೆ ಬಾವುಟ ಹಾರಿಸುವುವರು ಯಾರು? ಮೂವತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಹಾರಾಡುತ್ತಿದ್ದ ಬಿಜೆಪಿ (BJP) ಬಾವುಟವನ್ನು ಜಗದೀಶ್​ ಶೆಟ್ಟರ್ (Jagadish Shettar) ಇಳಿಸುತ್ತಾರಾ? ಬಿಜೆಪಿ ಭದ್ರಕೋಟೆ ಕಾಂಗ್ರೆಸ್ (Congress) ಪಾಲಾಗುತ್ತಾ ಎಂಬ ಪ್ರಶ್ನೆಗಳು ಕ್ಷೇತ್ರದ ಜನತೆಯನ್ನು ಕಾಡುತ್ತಿದೆ. ಸೆಂಟ್ರಲ್ ಕ್ಷೇತ್ರದ ಫಲಿತಾಂಶ ರಾಜ್ಯದ ಜನರು ಮಾತ್ರವಲ್ಲ, ಇಡೀ ಕೇಂದ್ರ ನಾಯಕರಿಗೂ ಪ್ರಮುಖವಾಗಿದೆ.


ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಶಿ


ಇದರ ನಡುವೆಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿರುಮಲ ಮೆಟ್ಟಿಲುಗಳನ್ನು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ಹೈವೋಲ್ಟೆಜ್ ಕ್ಷೇತ್ರವಾಗಿರುವ ಸೆಂಟ್ರಲ್ ಕ್ಷೇತ್ರದ ಗೆಲುವಿಗಾಗಿ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಂಬ ಚರ್ಚೆ ಜೋರಾಗಿದೆ.




ಇದನ್ನೂ ಓದಿ: Karnataka Elections: ಮತಯಂತ್ರ ಒಡೆದು ಆತಂಕ ಸೃಷ್ಟಿಸಿದ ವ್ಯಕ್ತಿ; ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ, ಅಸಲಿಗೆ ಆಗಿದ್ದೇನು?


ಜೋಶಿ ವಿರುದ್ಧ ತೊಡೆ ತಟ್ಟಿದ ಪ್ರಹ್ಲಾದ್ ಜೋಶಿ


ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರು ಬಿಜೆಪಿ ತೊರೆದಾಗಿನಿಂದಲೂ ಪ್ರಹ್ಲಾದ್ ಜೋಶಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಇದು ಸೆಮಿಫೈನಲ್ಸ್, ಮುಂದೆ ಫೈನಲ್‌ ಇದೆ ಎಂದು ಜಗದೀಶ್​ ಶೆಟ್ಟರ್​ ಎಚ್ಚರಿಕೆ ನೀಡಿದ್ದರು.


ಆ ಮೂಲಕ ಪರೋಕ್ಷವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಜೋಶಿ ವಿರುದ್ಧ ತೊಡೆ ತಟ್ಟುವ ಮುನ್ಸೂಚನೆ ನೀಡಿದ್ದರು. ಈ ಚುನಾವಣೆಯಲ್ಲಿ ಶೆಟ್ಟರ್ ಗೆದ್ದರೆ ಅವರ ವರ್ಚಸ್ಸು ಮತ್ತಷ್ಟು ಹೆಚ್ಚುತ್ತದೆ, ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದ್ದು, ಜಾತಿ ಲೆಕ್ಕಾಚಾರದವೂ ಪ್ರಮುಖವಾಗುತ್ತದೆ. ಹೀಗಾಗಿ ಇದೇ ಚುನಾವಣೆಯಲ್ಲಿಯೇ ಶೆಟ್ಟರ್ ಅವರನ್ನ ಸೋಲಿಸಲೇಬೇಕೆಂದು ಬಿಜೆಪಿ ನಾಯಕರು ಪಣ ತೆಟ್ಟಿದ್ದರು.




ಇತ್ತ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮೇಲೆ ರಾಷ್ಟ್ರೀಯ ನಾಯಕರು ಕೂಡ ಗಮನಹರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳಲು ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರವನ್ನ ಬಿಜೆಪಿ ಗೆಲ್ಲಬೇಕಿದೆ.

First published: