• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka CM? ‘ಕಳಂಕ ಹೊತ್ತವರು ಸಿಎಂ ಆಗಬಾರದು!’ ಸಿದ್ದು ಪರ ಕುರುಬ ಸಮಾಜದ ಶ್ರೀಗಳ ಪರೋಕ್ಷ ಬ್ಯಾಟಿಂಗ್

Karnataka CM? ‘ಕಳಂಕ ಹೊತ್ತವರು ಸಿಎಂ ಆಗಬಾರದು!’ ಸಿದ್ದು ಪರ ಕುರುಬ ಸಮಾಜದ ಶ್ರೀಗಳ ಪರೋಕ್ಷ ಬ್ಯಾಟಿಂಗ್

ತಿಂಥಣಿ ಕಾಗಿನೆಲೆ ಶಾಖಾಮಠದ ಸಿದ್ದರಾಮಾನಮನಂದಪುರಿ ಸ್ವಾಮೀಜಿ

ತಿಂಥಣಿ ಕಾಗಿನೆಲೆ ಶಾಖಾಮಠದ ಸಿದ್ದರಾಮಾನಮನಂದಪುರಿ ಸ್ವಾಮೀಜಿ

ಅತಿಯಾದ ಭ್ರಷ್ಟ ಸರ್ಕಾರ ಬೇಡವೆಂದು ಬಹುಮತ ಸರ್ಕಾರ ನೀಡಿದ್ದಾರೆ. ರಾಜ್ಯದ ಘನತೆ ಎತ್ತಿ ಹಿಡಿಯುವ ಸಿಎಂ ರಾಜ್ಯಕ್ಕೆ ಬೇಕು, ಕಳಂಕ ಹೊತ್ತವರು ಸಿಎಂ ಆಗಬಾರದೆಂಬುದು ಜನಾಭಿಪ್ರಾಯ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ಅವರು ಸಿಎಂ ಆಗಬೇಕು. ಇದು ಒಕ್ಕಲಿಗ ಸಮುದಾಯದವರ ಒಕ್ಕೊರಲ ಕೂಗು. ಬರೀ ಕೂಗಷ್ಟೇ ಅಲ್ಲ, ಬೆಂಗಳೂರಿನ (Bengaluru) ವಿಜಯನಗರದ ಅದಿಚುಂಚನಗಿರಿ ಮಠದಲ್ಲಿ (Adichunchanagiri Mutt) ಸಭೆನೂ ನಡೆಯಿತು. ಸ್ವಾಮೀಜಿಗಳು ಒಕ್ಕಲಿಗರು ಸಂಘದ ಪದಾಧಿಕಾರಿಗಳು, ಒಕ್ಕಲಿಗ ಸಂಘಟನೆಗಳು, ಸರ್ಕಾರಿ ನಿವೃತ್ತ ಅಧಿಕಾರಿಗಳು ಸಭೆ ಮಾಡಿದ್ದರು. ಒಕ್ಕಲಿಗ ಸಮುದಾಯಕ್ಕೆ (Vokkaliga Community) ಸಿಎಂ ಸ್ಥಾನ ನೀಡುವಂತೆ ಒತ್ತಡ ಹೇರಲು ನಿರ್ಧಾರ ಮಾಡಲಾಯಿತು. ಎಸ್.ಎಂ.ಕೃಷ್ಣ (SM Krishna) ನಂತರ ಒಕ್ಕಲಿಗೆ ಸಮುದಾಯಕ್ಕೆ ಸಿಎಂ ಆಗುವ ಅವಕಾಶವಿದ್ದು, ಡಿಕೆ ಶಿವಕುಮಾರ್​​ಗೆ ಪಟ್ಟ ಕಟ್ಟುವಂತೆ ಆಗ್ರಹಿಸಲಾಯಿತು.


ಇತ್ತ ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯದ ಶ್ರೀಗಳು ಬ್ಯಾಟಿಂಗ್ ಮಾಡುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಪರ ಕುರುಬ ಸಮಾಜದ ಶ್ರೀಗಳಿಂದ ಬ್ಯಾಟಿಂಗ್ ನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನ ಸಿಎಂ‌ ಮಾಡುವಂತೆ ತಿಂಥಣಿ ಕಾಗಿನೆಲೆ ಶಾಖಾ ಮಠ ಶ್ರೀಗಳ ಒತ್ತಾಯ ಮಾಡಿದ್ದಾರೆ.


ಇದನ್ನೂ ಓದಿ: Who is Next CM: ಸಿಎಂ ಸ್ಥಾನಕ್ಕೆ ಸಿದ್ದು-ಡಿಕೆಶಿ ಬಿಗಿಪಟ್ಟು! ಹೈಕಮಾಂಡ್ ಅಂಗಳಕ್ಕೆ ತಲುಪಿದ ಕಾಂಗ್ರೆಸ್ ಹೈಡ್ರಾಮಾ




ಸಿಎಂ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಿಂಥಣಿ ಕಾಗಿನೆಲೆ ಶಾಖಾಮಠದ ಸಿದ್ದರಾಮಾನಮನಂದಪುರಿ ಸ್ವಾಮೀಜಿ , ಮಠಾಧೀಶರು ಹೊರಗೆ ಬಂದು ನಮ್ಮ ಸಮುದಾಯದವರೇ ಸಿಎಂ ಆಗಬೇಕಂದಿದ್ದು ಪ್ರಜಾಪ್ರಭುತ್ವ, ಧಾರ್ಮಿಕ ವ್ಯವಸ್ಥೆಗೆ ಕಳಂಕ, ರಾಜ್ಯದ ಜನ ಅತ್ಯಂತ ಸಂಕಷ್ಟ ಜೀವನ ಮಾಡುತ್ತಿದ್ದಾರೆ.

top videos


    ಅತಿಯಾದ ಭ್ರಷ್ಟ ಸರ್ಕಾರ ಬೇಡವೆಂದು ಬಹುಮತ ಸರ್ಕಾರ ನೀಡಿದ್ದಾರೆ. ರಾಜ್ಯದ ಘನತೆ ಎತ್ತಿ ಹಿಡಿಯುವ ಸಿಎಂ ರಾಜ್ಯಕ್ಕೆ ಬೇಕು, ಕಳಂಕ ಹೊತ್ತವರು ಸಿಎಂ ಆಗಬಾರದೆಂಬುದು ಜನಾಭಿಪ್ರಾಯ. ರಾಜ್ಯದ ಹಿತ ಗಮನಿಸಿ ಘನತೆ ಎತ್ತಿಹಿಡಿಯುವವರು ಸಿಎಂ ಆಗಲಿ. ಕಳಂಕ ತರುವ ವ್ಯಕ್ತಿಗಳು ಸಿಎಂ ಆಗಬಾರದೆಂಬುದು ಅಭಿಪ್ರಾಯಪಟ್ಟಿದ್ದಾರೆ.

    First published: