• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಎಚ್‌ಡಿಕೆ ಮಗನಿಗೆ ಒಂದು ನ್ಯಾಯ, ಬೇರೆಯವರ ಮಕ್ಕಳಿಗೆ ಒಂದು ನ್ಯಾಯನಾ? ಕುಮಾರಸ್ವಾಮಿ ವಿರುದ್ಧ ಸುಮಲತಾ ನಿಗಿನಿಗಿ ಕೆಂಡ!

Karnataka Election 2023: ಎಚ್‌ಡಿಕೆ ಮಗನಿಗೆ ಒಂದು ನ್ಯಾಯ, ಬೇರೆಯವರ ಮಕ್ಕಳಿಗೆ ಒಂದು ನ್ಯಾಯನಾ? ಕುಮಾರಸ್ವಾಮಿ ವಿರುದ್ಧ ಸುಮಲತಾ ನಿಗಿನಿಗಿ ಕೆಂಡ!

ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

ನಿಖಿಲ್ ಕುಮಾರಸ್ವಾಮಿಗೆ ರಾಮನಗರದ ಟಿಕೆಟ್ ನೀಡಿದ್ದಾರೆ. ಅವರ ಮಕ್ಕಳಿಗೆ ಒಂದು ನ್ಯಾಯ, ಬೇರೆಯವರ ಮಕ್ಕಳಿಗೆ ಒಂದು ನ್ಯಾಯನಾ ಎಂದು ಹೆಚ್​​​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

  • Share this:

ಮಂಡ್ಯ: ಜಿಲ್ಲೆಯ ಜೆಡಿಎಸ್‌ಗೆ (JDS) ಮತ್ತೊಂದು ಸ್ವಾಭಿಮಾನಿ ಶಾಕ್ ಎದುರಾಗಿದೆ. ಜೆಡಿಎಸ್ ನಾಯಕರಿಂದಲೇ ಜೆಡಿಎಸ್ ವಿರುದ್ಧ ಅಸ್ತ್ರ ಪ್ರಯೋಗವಾಗಿದೆ. ಪಕ್ಷ ಟಿಕೆಟ್​ ಆಕಾಂಕ್ಷಿಯಾಗಿದ್ದ ಎಂ.ಶ್ರೀನಿವಾಸ್ (M Srinivas ) ನೇತೃತ್ವದಲ್ಲಿ ಮೂವರು ಪಕ್ಷೇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರ ನಡುವೆಯೇ ಜೆಡಿಎಸ್​ ಬಂಡಾಯ ಬಿಜೆಪಿ (BJP) ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅವರು, ಮುಂದಿನ ದಿನಗಳಲ್ಲಿ ನಮ್ಮ‌ ಪ್ರಚಾರ ಜೋರಾಗಿರುತ್ತದೆ. ಬಿಜೆಪಿ ಪರ ಜನರ ಒಲವಿದೆ. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ವಾತವರಣ ಇದೆ. ಜೆಡಿಎಸ್‌ ಬಂಡಾಯ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.


ರಾಜಕಾರಣಕ್ಕೆ ಒಳ್ಳೆಯ ಜನರು ಬರಬೇಕು


ನೂರಾರು ವರ್ಷಗಳ ಸಾಮ್ರಾಜ್ಯಗಳೇ ನೆಲಕ್ಕುರುಳಿವೆ. ಹಾಗಾಗಿ ಭದ್ರಕೋಟೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ. ರಾಜಕೀಯದಲ್ಲಿ ಯಾರಿಗೂ ಯಾವುದು ಭದ್ರಕೋಟೆ ಅಲ್ಲ. ನಿಮ್ಮ ಕೆಲಸ‌ ಮಾತ್ರ ಜನರ ಮನಸ್ಸಲ್ಲಿ ಶಾಶ್ವತ, ಅಶೋಕ್ ಜಯರಾಂಗೆ ಜೆಡಿಎಸ್‌ ಮೋಸ ಮಾಡಿದೆ. ಇದು ಮಂಡ್ಯ ಜನರಿಗೆ ಗೊತ್ತಿದೆ. ಈ ಬಾರಿ ಮಂಡ್ಯದಲ್ಲಿ ಅಶೋಕ್ ಗೆಲ್ಲಲಿದ್ದಾರೆ.


ಇದನ್ನೂ ಓದಿ: Gift Politics: ವಾಹನದೊಳಗಿತ್ತು ₹6.93 ಕೋಟಿ ಮೌಲ್ಯದ 11 ಕೆಜಿ ಚಿನ್ನ, 74 ಕೆಜಿ ಬೆಳ್ಳಿ! ಅತ್ತ 60 ಲಕ್ಷ ನೋಟ್ ಸೀಜ್!


ನಮ್ಮ‌ ಟಾರ್ಗೆಟ್ ಭ್ರಷ್ಟ ರಾಜಕಾರಣಿಗಳು. ಮಂಡ್ಯದ 6 ಕ್ಷೇತ್ರಗಳ ಶಾಸಕರು
ಅದರಲ್ಲೂ ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ಅದು ಪ್ರೂವ್ ಆಗಿದೆ. ರಾಜಕಾರಣಕ್ಕೆ ಒಳ್ಳೆಯ ಜನರು ಬರಬೇಕು. ವ್ಯವಸ್ಥೆ ಬದಲಾಗಬೇಕು, ಮಂಡ್ಯ ರಾಜಕಾರಣ ಸ್ವಚ್ಛವಾಗಬೇಕು ಎಂಬುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.




ಪಾಂಡವಪುರ ವಿಷಯದಲ್ಲಿ ದರ್ಶನ್ ನನ್ನ ಪರವಾಗಿ ನಿಂತಿದ್ದರು


ಮಂಡ್ಯದ ಜನರು ಈ ಬಾರಿ ಜನರು ಸರಿಯಾದ ನಿರ್ಧಾರ ಮಾಡಲಿದ್ದಾರೆ. ಮೇಲುಕೋಟೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಷ್ಟೇ ನಮ್ಮ ಟಾರ್ಗೆಟ್. ನನ್ನ ಬೆಂಬಲ ಬಿಜೆಪಿಗೆ ಸೂಚಿಸಿದ್ದೇನೆ. ಪಾಂಡವಪುರ ವಿಷಯದಲ್ಲಿ ದರ್ಶನ್ ನನ್ನ ಪರವಾಗಿ ನಿಂತಿದ್ದರು. ಅವರಿಗೂ ಒಳ್ಳೆಯದಾಗಬೇಕು ಎಂಬುದು ನನ್ನ ಭಾವನೆ ಎಂದು ಶಾಸಕ ಸಿಎಸ್ ಪುಟ್ಟರಾಜು ವಿರುದ್ಧ ಕಿಡಿಕಾರಿದರು.




ಕುಮಾರಸ್ವಾಮಿ ಸಿಎಂ ಆದಾಗ ನಮ್ಮ‌ ಮನೆಗೆ ಬಂದು ಊಟ ಮಾಡಿದ್ದರು


ಇದೇ ವೇಳೆ ಹೆಚ್​ಡಿಕೆ ವಿರುದ್ಧವೂ ಕಿಡಿಕಾರಿದ ಸುಮಲತಾ, ನಿಖಿಲ್ ಕುಮಾರಸ್ವಾಮಿ ಅವರ ಪಕ್ಷದಲ್ಲಿ ರಾಜ್ಯದ ಯುವ ಅಧ್ಯಕ್ಷರು. ಅವರು ಎಷ್ಟು ಸಭೆ ಮಾಡಿದ್ದಾರೆ, ಇಲ್ಲಿಯವರೆಗೆ ಒಂದು ಸಭೆಯನ್ನು ಮಾಡಿಲ್ಲ. ಆದರೆ ಅವರಿಗೆ ರಾಮನಗರದ ಟಿಕೆಟ್ ನೀಡಿದ್ದಾರೆ. ಅವರ ಮಕ್ಕಳಿಗೆ ಒಂದು ನ್ಯಾಯ, ಬೇರೆಯವರ ಮಕ್ಕಳಿಗೆ ಒಂದು ನ್ಯಾಯನಾ?


ಕುಮಾರಸ್ವಾಮಿ ಕಳೆದ ಬಾರಿ ಸಿಎಂ ಆದಾಗ ನಮ್ಮ‌ ಮನೆಗೆ ಬಂದು ಊಟ ಮಾಡಿ, ಅಭಿನಂದನೆ ತಿಳಿಸಿದ್ದರು. ಅಂಬರೀಶ್ ರವರಿಗೆ ಅವರು ಅಭಿನಂದನೆ ತಿಳಿಸಿದ್ದರು. ಆದರೆ ಅವರು ಈಗ ನನ್ನ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಅದನ್ನ ಅವರನ್ನೇ ನೀವು ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.

top videos
    First published: