• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಮಂಡ್ಯದಲ್ಲಿ JDS​​​, ಕೈ ಕಾರ್ಯಕರ್ತರ ನಡುವೆ ಡಿಶುಂ ಡಿಶುಂ; ಕಲ್ಲು ತೂರಾಟ, ವಾಹನದ ಗಾಜು ಪುಡಿ ಪುಡಿ

Karnataka Election 2023: ಮಂಡ್ಯದಲ್ಲಿ JDS​​​, ಕೈ ಕಾರ್ಯಕರ್ತರ ನಡುವೆ ಡಿಶುಂ ಡಿಶುಂ; ಕಲ್ಲು ತೂರಾಟ, ವಾಹನದ ಗಾಜು ಪುಡಿ ಪುಡಿ

ಕಾಂಗ್ರೆಸ್​​/ಜೆಡಿಎಸ್​ ಪ್ರಚಾರ ವಾಹನಕ್ಕೆ ಕಲ್ಲು

ಕಾಂಗ್ರೆಸ್​​/ಜೆಡಿಎಸ್​ ಪ್ರಚಾರ ವಾಹನಕ್ಕೆ ಕಲ್ಲು

ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಲ್ಲದೇ, ಎರಡು ಪಕ್ಷಗಳ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • Share this:

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಬಹಿರಂಗ ಪ್ರಚಾರದ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು (Candidates) ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಈ ನಡುವೆ ಮಂಡ್ಯದ (Mandya) ನಾಗಮಂಗಲ ಪಟ್ಟಣದಲ್ಲಿ ಜೆಡಿಎಸ್ (JDS) ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಎರಡು ಪಕ್ಷಗಳ ಪ್ರಚಾರದ ವಾಹನಗಳ ಮೇಲೆ ಕಲ್ಲು ತೂರಾಟ (Stone Pelting) ಮಾಡಲಾಗಿದೆ. ಪರಿಣಾಮ ವಾಹನದ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ. ನಾಗಮಂಗಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ (Congress) ಕಾರ್ಯಕರ್ತರ ರೋಡ್ ಶೋ ವೇಳೆ ಘಟನೆ ನಡೆದಿದೆ.


ಕಾಂಗ್ರೆಸ್​ ಅಭ್ಯರ್ಥಿ ಚಲುವರಾಯಸ್ವಾಮಿ ರೋಡ್​ ಶೋ


ಇಂದು ಆಯೋಜಿಸಿದ್ದ ರೋಡ್​​ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಮತ್ತು ಪತ್ನಿ ಧನಲಕ್ಷ್ಮಿ ಚಲುವರಾಯಸ್ವಾಮಿ ಭಾಗಿಯಾಗಿದ್ದರು. ರೋಡ್ ಶೋ ನಂತರ ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರು ತಮ್ಮ ಪ್ರಚಾರ ವಾಹನಗಳೊಂದಿಗೆ ಮುಖಾಮುಖಿಯಾಗಿದ್ದರು.


ಇದನ್ನೂ ಓದಿ: 2023 Karnataka Elections: ನಟ ಸುದೀಪ್ ಮೂರು ತಾಸಿನ ನಾಯಕ! ಕಿಚ್ಚನ ವಿರುದ್ಧ ಜಾರಕಿಹೊಳಿ ವಾಗ್ದಾಳಿ


ಈ ವೇಳೆ ನಾಗಮಂಗಲ ಪಟ್ಟಣದ ಎಸ್ ಎಲ್ ವಿ ನರ್ಸಿಂಗ್ ಹೋಂ ಮುಂಭಾಗದ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿದ್ದು, ಜೆಡಿಎಸ್ ಪ್ರಚಾರದ ವಾಹನಕ್ಕೆ ಕಲ್ಲೇಟು ಬೀಳುತ್ತಿದ್ದಂತೆ, ಕಾಂಗ್ರೆಸ್ ಪ್ರಚಾರದ ವಾಹನದ ಗಾಜಿಗೆ ಕಲ್ಲು ಬೀಸಿರುವ ಮಾಹಿತಿ ಲಭ್ಯವಾಗಿದೆ.
ಈ ಹಂತದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಟಿ ಪ್ರಹಾರ ನಡೆಸಲಾಗಿದೆ.
ಸದ್ಯಕ್ಕೆ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಲ್ಲದೇ, ಎರಡು ಪಕ್ಷಗಳ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿ ದೂರು ದಾಖಲಿಸಲು ಎರಡು ಪಕ್ಷಗಳ ಮುಖಂಡರು ಮುಂದಾಗಿದ್ದಾರೆ. ಪಟ್ಟಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅರೆ ಸೇನಾ ತುಕಡಿ ಹಾಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

First published: