• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಚುನಾವಣೆಯಲ್ಲಿ ಝಣ ಝಣ ಕಾಂಚಾಣ; ಬೆಂಗಳೂರಿನಲ್ಲಿ ಇದುವರೆಗೂ ₹10 ಕೋಟಿ ಹಣ, 24 ಕೋಟಿ ಮೌಲ್ಯದ ಮದ್ಯ ವಶಕ್ಕೆ

Karnataka Elections: ಚುನಾವಣೆಯಲ್ಲಿ ಝಣ ಝಣ ಕಾಂಚಾಣ; ಬೆಂಗಳೂರಿನಲ್ಲಿ ಇದುವರೆಗೂ ₹10 ಕೋಟಿ ಹಣ, 24 ಕೋಟಿ ಮೌಲ್ಯದ ಮದ್ಯ ವಶಕ್ಕೆ

ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಹಣ

ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಹಣ

ನಗರದ ಹಲವು ಭಾಗದಲ್ಲಿ ದಾಳಿ ನಡೆಸಿ ಮತದಾರರಿಗೆ ಕೊಡಲು ತಂದಿದ್ದ 5 ಕೋಟಿ 47 ಲಕ್ಷದ 52 ಸಾವಿರದ 71 ರೂಪಾಯಿ ಮೌಲ್ಯದ ಉಡುಗೊರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ವಿಧಾನಸಭಾ ಚುನಾವಣೆ (Assembly Elections) ಹತ್ತಿರ ಬರುತ್ತಿದ್ದಂತೆ ರಾಜ್ಯದಾದ್ಯಂತ ಮತದಾರರಿಗೆ ಹಣ (Money), ಉಡುಗೊರೆ (Gift) ನೀಡುವ ಪ್ರಕರಣಗಳು ಸಾಕಷ್ಟು ವರದಿಯಾಗುತ್ತಿದ್ದು, ಚುನಾವಣಾ ಅಧಿಕಾರಿಗಳು ಸೇರಿದಂತೆ ಪೊಲೀಸರು (Police) ಚುನಾವಣಾ ಆಕ್ರಮಕ್ಕೆ ಬ್ರೇಕ್​​ ಹಾಕಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಚುನಾವಣಾ ನೀತಿ ಸಂಹಿತೆ (Code of Conduct) ಜಾರಿಯಾಗದ ದಿನಾಂಕದಿಂದ ಇಂದಿನವರೆಗೂ ಕೋಟಿ ಕೋಟಿ ನಗದು, ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ಸೇರಿದಂತೆ ಡ್ರಗ್ಸ್​​, ನೂರಾರು ಕೆಜಿ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಈ ಕುರಿತ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.


25 ಪ್ರಕರಣದಲ್ಲಿ ಒಟ್ಟು 10.6 ಕೋಟಿ ರೂಪಾಯಿ ಸೀಜ್ 


ಚುನಾವಣೆ ನೀತಿ ಸಂಹಿತೆ ಜಾತಿಯಾದ ದಿನದಿಂದ ಈವರೆಗೂ 67 ಕೋಟಿ 76 ಲಕ್ಷದ 73 ಸಾವಿರದ 338 ರೂಪಾಯಿ ಮೌಲ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟಾರೆ ಈವರೆಗೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಬೆಂಗಳೂರಲ್ಲಿ 2,466 ಎಫ್​​ಐಆರ್​ ದಾಖಲು ಮಾಡಲಾಗಿದೆ. ಒಟ್ಟು 25 ಪ್ರಕರಣದಲ್ಲಿ 10 ಕೋಟಿ 6 ಲಕ್ಷ 5 ಸಾವಿರದ 680 ರೂಪಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.


ಇದನ್ನೂ ಓದಿ: Yadgir Viral News: 1 ವರ್ಷ ಭಿಕ್ಷೆ ಬೇಡಿದ ಹಣದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!


ಲಕ್ಷ ಲಕ್ಷ ಲೀಟರ್ ಗಟ್ಟಲೇ ಮದ್ಯ, ಕೆಜಿ ಗಟ್ಟಲೇ ಬೆಳ್ಳಿ-ಚಿನ್ನದ ವಸ್ತು ಸೀಜ್​


24 ಕೋಟಿ 37 ಲಕ್ಷದ 13 ಸಾವಿರ 932 ರೂಪಾಯಿ ಮೌಲ್ಯದ 5 ಲಕ್ಷಕ್ಕೂ ಅಧಿಕ ಲೀಟರ್ ಮದ್ಯ ಸೀಜ್, 9 ಕೋಟಿ 71 ಲಕ್ಷದ 71 ಸಾವಿರದ 663 ರೂಪಾಯಿ ಮೌಲ್ಯದ ಗಾಂಜಾ, ಡ್ರಗ್ಸ್ ಸೀಜ್ ಮಾಡಲಾಗಿದೆ. 11 ಕೋಟಿ 87 ಲಕ್ಷದ 88 ಸಾವಿರದ 952 ರೂಪಾಯಿ ಮೌಲ್ಯದ ಒಟ್ಟು 236 ಕೆಜಿ ಚಿನ್ನ, ಬೆಳ್ಳಿ ಸೇರಿದ ಲೋಹದ ವಸ್ತುಗಳು ಸೀಜ್ ಮಾಡಲಾಗಿದೆ.




354 ವಾಹಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು


ನಗರದ ಹಲವು ಭಾಗದಲ್ಲಿ ದಾಳಿ ನಡೆಸಿ ಮತದಾರರಿಗೆ ಕೊಡಲು ತಂದಿದ್ದ 5 ಕೋಟಿ 47 ಲಕ್ಷದ 52 ಸಾವಿರದ 71 ರೂಪಾಯಿ ಮೌಲ್ಯದ ಉಡುಗೊರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಹಲವು ಚೆಕ್ ಪೋಸ್ಟ್ ನಲ್ಲಿ ತಪಸಾಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ 354 ವಾಹನಗಳು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಮೌಲ್ಯ 5 ಕೋಟಿ 72 ಲಕ್ಷದ 41 ಸಾವಿರದ 40 ರೂಪಾಯಿ ಎಂದು ಅಂದಾಜಿಸಲಾಗಿದೆ.

First published: