• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಅಮೆರಿಕಾಗೆ ಹೋಗಲು ನಾನು ಹೇಳಿದ್ನಾ? ಎಚ್​ಡಿಕೆಗೆ ಸಿದ್ದು ಗುದ್ದು!

Karnataka Election: ಅಮೆರಿಕಾಗೆ ಹೋಗಲು ನಾನು ಹೇಳಿದ್ನಾ? ಎಚ್​ಡಿಕೆಗೆ ಸಿದ್ದು ಗುದ್ದು!

ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಜೆಡಿಎಸ್ ನವರು ಹೋಮ ಹವನ ಮಾಡಿಸುತ್ತಿರುತ್ತಾರೆ. ದೇವರ ಬಳಿ ಯಾವ ಪಾರ್ಟಿಗೂ ಬಹುಮತ ಬರಬಾರದು ಎಂದು ಪ್ರಾರ್ಥನೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

  • Share this:

ಮಂಡ್ಯ: ದಳಪತಿಗಳ ಭದ್ರಕೋಟೆ ಮಂಡ್ಯದಲ್ಲಿ (Mandya)  ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ (Nagamangala) ನಡೆದ ಕಾಂಗ್ರೆಸ್ (Congress)​ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಸಿದ್ದು, ಆಸಾಮಿ ನನ್ನ ಮೇಲೆ ಗೂಬೆ ಕೂರಿಸಿ ಹೋಗಿಬಿಟ್ಟ, ತಾಜ್ ವೆಸ್ಟೆಂಡ್ ಹೋಟೆಲ್​​​ನಲ್ಲಿ (Taj Wst End) ಉಳಿದಿದ್ದರು. ಶಾಸಕರು ಭೇಟಿ ಮಾಡಲು ಆಗಲಿಲ್ಲ, ಅಧಿಕಾರಿಗಳು ಭೇಟಿ ನೀಡುವುದಕ್ಕೆ ಆಗಲಿಲ್ಲ. ಅಲ್ಲದೆ, ಅಮೆರಿಕಾಗೆ (America) ಹೋಗಬೇಡಿ ಎಂದು ಕುಮಾರಸ್ವಾಮಿಗೆ ನಾನು ಹೇಳಿದ್ದೆ, ಆದರೆ ಕುಮಾರಸ್ವಾಮಿ ನನ್ನ ಮಾತು ಕೇಳಲಿಲ್ಲ, 9 ದಿನ ಅಮೆರಿಕಾ ಹೋಗಿಬಿಟ್ಟರು ಎಂದು ಆರೋಪಿಸಿದ್ದಾರೆ.


ಬಿಜೆಪಿ ಸರ್ಕಾರ ನಡೆಸುತ್ತಿದ್ದರೆ ಎಂದರೆ ಕಾರಣ ಅದಕ್ಕೆ ಕುಮಾರಸ್ವಾಮಿ


ಎಚ್​ಡಿಕೆ ಅಮೆರಿಕಾ ಪ್ರವಾಸ ಹೋಗುತ್ತಿದ್ದಂತೆ ಯಡಿಯೂರಪ್ಪ ದುಡ್ಡು ಕೊಟ್ಟು ಶಾಸಕರನ್ನು ಕೊಂಡು ಕೊಂಡರೂ, ಇದಕ್ಕೆ ನಾನೇನು ಮಾಡಲಿ. ಕಳೆದ ನಾಲ್ಕು ವರ್ಷ ಬಿಜೆಪಿ ಸರ್ಕಾರ ನಡೆಸುತ್ತಿದ್ದರೆ ಎಂದರೆ ಕಾರಣ ಅದಕ್ಕೆ ಕುಮಾರಸ್ವಾಮಿ. ನಿನಗೆ ತಾಜ್ ವೆಸ್ಟೆಂಡ್ ಹೋಟೆಲ್​ಗೆ ಹೋಗಿ ಕೂರು ಅಂದಿದ್ವಾ, ಅಮೆರಿಕಾಗೆ ಹೋಗಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದಾರೆ. ಇವೇ  ವೇಳೆ ಇವರ ಮನೆ ಹಾಳಾಗ ಎಂದು ಮತ್ತೆ ಬಿಜೆಪಿ ಸರ್ಕಾರವನ್ನು ನಿಂಧಿಸಿದ್ದಾರೆ.


ಇದನ್ನೂ ಓದಿ: Karnataka Election: ಉತ್ತರ ಕರ್ನಾಟಕದಲ್ಲಿ JDS 30 ರಿಂದ 35 ಸ್ಥಾನಗಳಲ್ಲಿ ಗೆಲುವು ಪಡೆಯುತ್ತೆ; ಕುಮಾರಸ್ವಾಮಿ ವಿಶ್ವಾಸ


ಬಿಜೆಪಿ ಸರ್ಕಾರ ನಡೆಸುತ್ತಿದ್ದರೆ ಎಂದರೆ ಕಾರಣ ಅದಕ್ಕೆ ಕುಮಾರಸ್ವಾಮಿ


ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಿ ಕೊಟ್ಟಿಲ್ಲ, ನಾನು ಮುಖ್ಯಮಂತ್ರಿ ಆದಾಗ 15 ಲಕ್ಷ ಮನೆ ಕಟ್ಟಿಸಿದ್ದೆ. ಜೆಡಿಎಸ್ ನವರು ಹೋಮ ಹವನ ಮಾಡಿಸುತ್ತಿರುತ್ತಾರೆ. ದೇವರ ಬಳಿ ಯಾವ ಪಾರ್ಟಿಗೂ ಬಹುಮತ ಬರಬಾರದು ಎಂದು ಪ್ರಾರ್ಥನೆ ಮಾಡುತ್ತಾರೆ. ನಮ್ಮ ಬಳಿ ಎರೆಡು ಪಾರ್ಟಿಯವರು ಬಂದು ಸಹಕಾರ ನೀಡಲೆಂದು ಪ್ರಾರ್ಥಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಚಲುವರಾಯಸ್ವಾಮಿಯನ್ನ ಯಾಕೆ ಸೋಲಿಸಿದ್ರಿ?


ನನಗೆ ನಂಬಿಕೆ ಇದೆ, ನಾಗಮಂಗಲದ ಜನತೆ ನನ್ನ ಮಾತನ್ನು ಕೇಳುತ್ತಾರೆ. ಮೇ 13ರಂದು ಚಲುವರಾಯಸ್ವಾಮಿ ಗೆದ್ದೆ ಗೆಲ್ಲುತ್ತಾರೆ. ಪೂರ್ವದಲ್ಲಿ ಸೂರ್ಯ ಹೇಗೆ ಉದಯಿಸುತ್ತಾನೋ ಅದೇ ರೀತಿ ಚಲುವಣ್ಣ ಗೆಲುತ್ತಾನೆ. ಚಲುವರಾಯಸ್ವಾಮಿಗೆ ಲೀಡರ್ ಶಿಪ್ ಕ್ವಾಲಿಟಿ ಇದೆ, ಅವರೊಬ್ಬರೆ ಬೆಳೆಯುವುದಿಲ್ಲ ಎಲ್ಲರನ್ನ ಬೆಳೆಸುತ್ತಾರೆ. ಆದರೆ ಕಳೆದ ಚುನಾವಣೆಯಲ್ಲಿ ಚಲುವರಾಯಸ್ವಾಮಿಯನ್ನ ಯಾಕೆ ಸೋಲಿಸಿದ್ರಿ ನನಗೆ ಗೊತ್ತೆ ಆಗುತ್ತಿಲ್ಲ. ಬಹುಶಃ ಅವರ ಸೋಲಿಗೆ ಕಣ್ಣಿರೇ ಕಾರಣ ಎಂದು ಪರೋಕ್ಷವಾಗಿ ಸಿದ್ದು ಟಾಂಗ್ ಕೊಟ್ಟಿದ್ದಾರೆ.

First published: