• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಯತ್ನಾಳ್​​, ಪ್ರಿಯಾಂಕ್​​ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್​ ನೋಟಿಸ್​

Karnataka Election: ಯತ್ನಾಳ್​​, ಪ್ರಿಯಾಂಕ್​​ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್​ ನೋಟಿಸ್​

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಸೇರಿದಂತೆ ಬಿಜೆಪಿ ನಾಯಕರು ಬಳಸಿರುವ ಪದಗಳ ಕುರಿತಂತೆ ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಸದ್ಯ ಪ್ರಿಯಾಂಕ್ ಖರ್ಗೆ ಹಾಗೂ ಯತ್ನಾಳ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಕೊಪ್ಪಳ: ಪಿಯೂಷ್ ಗೋಯಲ್ (Piyush Goyal) ಅವರು ನೀಡಿದ ದೂರಿನ ಅನುಸಾರ ಪರಿಶೀಲಿಸಿ ನೋಡಿದಾಗ ಕಲಬುರಗಿಯಲ್ಲಿನ (Kalaburagi ) ಭಾಷಣದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅವರ ಮೇಲೆ ಭಾರತ ಚುನಾವಣಾ ಆಯೋಗವು ಶೋ ಕಾಸ್ (Show Cause) ನೋಟಿಸ್ ನ್ನು ಜಾರಿಗೊಳಿಸಿದೆ. ಇದೇ ವೇಳೆ ಕೊಪ್ಪಳ (Koppala) ಜಿಲ್ಲೆಯ ಯಲಬುರ್ಗ ದಲ್ಲಿ ಮಾಡಿದ ಭಾಷಣದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal ) ಅವರ ಮೇಲೆ ಭಾರತ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.


ವಿಷಕನ್ಯೆ ಎಂಬ ಪದವನ್ನು ಬಳಕೆ ಮಾಡಿದ್ದ ಯತ್ನಾಳ್​


ಏಪ್ರಿಲ್​​ 28ರಂದು ಯಲಬುರ್ಗಾದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್​​ ಅವರು, ಭಾಷಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್​ ಗಾಂಧಿ ಅವರಿಗೆ ಅರೆಹುಚ್ಚ ಎಂಬ ಪದವನ್ನು ಬಳಕೆ ಮಾಡಿದ್ದರು. ಅಲ್ಲದೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ವಿಷಕನ್ಯೆ ಎಂಬ ಪದವನ್ನು ಬಳಕೆ ಮಾಡಿದ್ದರು.




ಇದನ್ನೂ ಓದಿ: Vote From Home: ಮತದಾನ ಮಾಡಿದ ಅರ್ಧ ಗಂಟೆ ಬಳಿಕ ವೃದ್ಧೆ ಸಾವು!


ನಾಲಾಯಕ್​​ ಬೇಟಾ ಪದ ಬಳಕೆ ಮಾಡಿದ್ದ ಖರ್ಗೆ


ವೈಯುಕ್ತಿಕ ನಿಂದನೆ ಹಿನ್ನೆಯಲ್ಲಿ ಕೊಪ್ಪಳ‌ ಜಿಲ್ಲಾ ಚುನಾವಣಾಧಿಕಾರಿಗಳು ಯತ್ನಾಳ್​ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಮೇ 4 ರೊಳಗೆ ಸ್ಪಷ್ಠನೆ ನೀಡಲು ಸೂಚನೆ ನೀಡಿದ್ದಾರೆ. ಅಲ್ಲದೆ, ನೋಟಿಸ್​​ಗೆ ಉತ್ತರಿಸದಿದ್ದರೆ ಕಾನೂನು ಕ್ರಮ ಎಂದು ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ. ಇನ್ನು ಪ್ರಿಯಾಂಕ್​ ಖರ್ಗೆ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ನಾಲಾಯಕ್​​ ಬೇಟಾ ಎಂಬ ಪದ ಬಳಕೆ ಮಾಡಿದ್ದರು.


ಡಿಕೆ ಶಿವಕುಮಾರ್ ವಿರುದ್ಧವೂ ದೂರು


ಕಾಂಗ್ರೆಸ್ ಸೇರಿದಂತೆ ಬಿಜೆಪಿ ನಾಯಕರು ಬಳಸಿರುವ ಪದಗಳ ಕುರಿತಂತೆ ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಇನ್ನು ಏಪ್ರಿಲ್​​ 28 ರಂದು ಮಲ್ಲಿಕಾರ್ಜುನ ಖರ್ಗೆ ಅವರ ವಿಷಪೂರಿತ ಹಾವು ಹೇಳಿಕೆಯ ಬಗ್ಗೆಯೂ ಬಿಜೆಪಿ ನಾಯಕರು ದೂರು ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ ಕಾಂಗ್ರೆಸ್​ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧವೂ ದೂರುಗಳನ್ನು ಸಲ್ಲಿಕೆ ಮಾಡಿದ್ದಾರೆ.


ಇಂದು ಕೂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಡಿಕೆ ಶಿವಕುಮಾರ್ ಅವರು ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ. ಇತ್ತ ಶಾಸಕ ಜಮೀರ್ ಅಹ್ಮದ್​ ಅವರು ಭಾರತದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಇದೇ ವೇಳೆ ದೂರು ದಾಖಲು ಮಾಡಿದ್ದರು.

top videos
    First published: