• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections 2023: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಶೋಭಾ ಕರಂದ್ಲಾಜೆ

Karnataka Elections 2023: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್/ ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್/ ಶೋಭಾ ಕರಂದ್ಲಾಜೆ

ಏಪ್ರಿಲ್ 27ರಂದು ಸಂವಾದದ ಮೂಲಕ ಕಾರ್ಯಕರ್ತರಿಗೆ ಮೋದಿ ಶಕ್ತಿ ಕೊಡಲಿದ್ದಾರೆ. ಕಾರ್ಯಕರ್ತರ ಜೊತೆ ನೇರವಾಗಿ ಪ್ರಧಾನಿ ಅವರು ಮಾತನಾಡುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

  • Share this:

ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದ್ದಾರೆ. ಪತ್ರಕರ್ತರ ವಿರುದ್ದ ಡಿಕೆ ಶಿವಕುಮಾರ್​ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿ, ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ಯಾರು ಯಾರು ಸುದ್ದಿಗೋಷ್ಠಿಗೆ ಬಂದಿಲ್ಲ , ಅವರ ಹೆಸರು ಕೊಡಿ ಮ್ಯಾನೇಜ್‌ಮೆಂಟ್ (Management) ಜೊತೆ ಮಾತನಾಡುತ್ತೇವೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಮಾಡಿದ ಅವಮಾನ. ಪತ್ರಕರ್ತರ ಜೊತೆ ನಾವಿದ್ದೇವೆ, ಮ್ಯಾನೇಂಜ್‌ಗಳಿಂದ ತೊಂದರೆ ಮಾಡುವುದನ್ನ ಜನ ಒಪ್ಪಲ್ಲ. ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೆ (Freedom of Press) ಮಾಡಿದ ಅವಮಾನ, ಅವಹೇಳ ಮಾಡಿದ್ದಾರೆ. ತಕ್ಷಣವೇ ಡಿಕೆ ಶಿವಕುಮಾರ್​ ಅವರಿಗೆ ನೋಟಿಸ್​ ನೀಡಿ ಕ್ರಮಕೈಗೊಳ್ಳಬೇಕು, ಈ ಸಂಬಂಧ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.


ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ


ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ 58 ಲಕ್ಷ ಬೂತ್ ನ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ಆಯಾ ಭಾಗದಲ್ಲಿ ಎಲ್ಇಡಿ ಪರದೆ ಅಳವಡಿಕೆಯ ಮೂಲಕ ಸಂವಾದ ನಡೆಸಲಿದ್ದಾರೆ.


ಇದನ್ನೂ ಓದಿ: Karnataka Elections 2023: ಕಾಂಗ್ರೆಸ್​ 85 ಪರ್ಸೆಂಟ್ ಸರ್ಕಾರ, ರಾಜೀವ್ ಗಾಂಧಿಯೇ ಹೇಳಿದ್ದರು; ಸಿಎಂ ಬೊಮ್ಮಾಯಿ ಆರೋಪ


24 ಲಕ್ಷ ಕಾರ್ಯಕರ್ತರಿಗೆ ಮೋದಿ ಆ್ಯಪಿನ್​ ಲಿಂಕ್ ಕಳುಹಿಸಿದ್ದೇವೆ. ಎಲ್ಇಡಿ ಪರದೆ ಹಾಕುವ ಸ್ಥಳದಲ್ಲಿ 1,500 ಕಾರ್ಯಕರ್ತ ರನ್ನು ಸೇರಿಸಲು ಪ್ಲಾನ್ ಮಾಡಲಾಗಿದೆ. ಬೂತ್ ಗಳಲ್ಲಿ ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ, ಅಭ್ಯರ್ಥಿಗಳು ಎಲ್ಲರ ಮನೆಗೆ ಹೋಗೋಕೆ ಆಗುವುದಿಲ್ಲ. ಆದರೆ ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಹೋಗುತ್ತಾರೆ ವಿವರಿಸಿದರು.


ಏಪ್ರಿಲ್ 27ರಂದು ಸಂವಾದದ ಮೂಲಕ ಕಾರ್ಯಕರ್ತರಿಗೆ ಮೋದಿ ಶಕ್ತಿ


ಅತಿ ದೊಡ್ಡ ಕಾರ್ಯಕರ್ತರ ಪಾರ್ಟಿ ಅಂದರೆ ಬಿಜೆಪಿ, ಕಾರ್ಯಕರ್ತರ ಶ್ರಮದಲ್ಲೇ ಗೆಲ್ಲುವ ಪಕ್ಷ. ಕರ್ನಾಟಕದಲ್ಲಿ ಪೂರ್ಣಪ್ರಮಾಣದ ಸರ್ಕಾರ ಬರಬೇಕು ಎಂದುಬುದು ಮೋದಿಯವರ ಆಶಯ, ಸರ್ಕಾರ ತರಲು ಕಾರ್ಯಕರ್ತರು ಶ್ರಮ ಪಡಬೇಕು. ನರೇಂದ್ರ ಮೋದಿಯವರು ಕಾರ್ಯಕರ್ತರ ಜೊತೆಗೆ ಬೆರೆಯಲು ಸಿದ್ಧರಿದ್ದಾರೆ. ಅವರು ಕೂಡ ಪ್ರವಾಸ ಮಾಡಲು ಸಿದ್ಧರಿದ್ದಾರೆ.


top videos



    ಏಪ್ರಿಲ್ 27ರಂದು ಸಂವಾದದ ಮೂಲಕ ಕಾರ್ಯಕರ್ತರಿಗೆ ಮೋದಿ ಶಕ್ತಿ ಕೊಡಲಿದ್ದಾರೆ. ಜಯನಗರ, ಮಹದೇವಪುರ ಬೇರೆ ಬೇರೆ ಬೇರೆ ವಿಭಾಗಗಳಲ್ಲಿ ನಡೆಯಲಿದೆ. ಕಾರ್ಯಕರ್ತರ ಜೊತೆ ನೇರವಾಗಿ ಪ್ರಧಾನಿ ಅವರು ಮಾತನಾಡುತ್ತಾರೆ. 58 ಸಾವಿರ ಬೂತ್ ಗಳಲ್ಲಿ ಈ ಸಂವಾದ ನಡೆಯಲಿದೆ. ಪೂರ್ಣಪ್ರಮಾಣದಲ್ಲಿ ಸರ್ಕಾರ ಬರಲು ಕಾರ್ಯಕರ್ತರ ಸಹಕಾರವನ್ನು ಮೋದಿವರು ಸಂವಾದದ ಮೂಲಕ ಕೇಳುತ್ತಾರೆ ಎಂದು ತಿಳಿಸಿದ್ದಾರೆ.

    First published: