ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿ ನಟ ಸುದೀಪ್ (Actor Sudeep) ಮೂರು ತಾಸಿನ ನಾಯಕ, ಸುದೀಪ್ ನೋಡಲು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ನೋಡಬೇಕಿತ್ತು. ಆದರೆ ಈಗ ನೀವೆಲ್ಲ ಪುಕ್ಕಟ್ಟೆಯಾಗಿ ನೋಡಿದ್ದೀರಿ. ಅವರು ಅಳೋಕೆ, ನಗೋಕೆ ದುಡ್ಡು (Money) ತೆಗೆದುಕೊಳ್ಳುತ್ತಾರೆ. ಅವರು ಮೂರು ತಾಸಿನ ನಾಯಕರಷ್ಟೇ. ನಾವು ನಿರಂತರವಾಗಿ ನಿಮ್ಮ ಸೇವೆ (Service) ಮಾಡ್ತೇವೆ. ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಹೇಳಿದ್ದಾರೆ.
ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸತೀಶ್ ಜಾರಕಿಹೊಳಿ ಅವರು, ನಿಮ್ಮ ಜೊತೆ ಇರುವ ಗಣೇಶ್ ಪ್ರಸಾದ್, ಮಹದೇವ ಪ್ರಸಾದ್ ಕೆಲಸ ನೆನೆಸಿಕೊಂಡು ಮತ ಹಾಕಿ. ಸುಮ್ಮನೆ ನಟ ಬಂದ ಕಣ್ಣೀರು ಹಾಕಿ ಹೋದ ಅಂದರೆ ಪರಿಹಾರವಲ್ಲ ಎಂದು ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಮತಕ್ಷೇತ್ರದಲ್ಲಿ ಸುದೀಪ್ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: Shobha Karandlaje: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ: ಶೋಭಾ ಕರಂದ್ಲಾಜೆ
ಯಮಕನಮರಡಿ ಮತಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚನೆ ಮಾಡಿದ್ದರು. ಅಲ್ಲದೆ, ಬರಿ ಜನ ಸೇರುವುದು ಅಲ್ಲ, ಬಸವರಾಜ ಹುಂದ್ರಿ ಅವರಿಗೆ ಆಶೀರ್ವಾದ ಮಾಡಬೇಕು. ನಾನು ಬಂದಾಗ ನೋಡಿದೆ ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ