ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಹಿನ್ನೆಲೆಯಲ್ಲಿ ಅಮಿತ್ ಶಾ (Amit Shah) ರಾಜ್ಯಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಗೆ ಅಮಿತ್ ಶಾ ಭೇಟಿ ನೀಡಲಿದ್ದು, ಶಾಸಕ ಪ್ರೀತಂ ಗೌಡ (Preetham Gowda) ಸೇರಿದಂತೆ ಬಿಜೆಪಿ (BJP) ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ನಡೆಸಲಿದ್ದಾರೆ. ಸದ್ಯ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಚ್ಡಿ ರೇವಣ್ಣ (HD Revanna) ಅವರು, ಅಮೆರಿಕಾ (America) ಪ್ರೆಸಿಡೆಂಟ್ ಅಥವಾ ರಷ್ಯಾ (Russia) ಪ್ರೆಸಿಡೆಂಟ್ ಆದರೂ ಕರೆದುಕೊಂಡು ಬರಲಿ. ನಮಗೆ ದೇವೇಗೌಡರು (HD Devegowda), ಕುಮಾರಣ್ಣ ಸಾಕು ಇನ್ಯಾರು ಬೇಡ. 123 ಟಾರ್ಗೆಟ್ ಇಟ್ಟಿದ್ದೀವಿ, ಒಂದು ಭಾರೀ ಬಹುಮತ ಕೊಡಿ ಎಂದು ಮನವಿ ಮಾಡಿದರು.
ಜನರ ಆಶೀರ್ವಾದ ಇರೋವರೆಗೂ ನಮಗೇನು ತೊಂದರೆಯಿಲ್ಲ
ಬೇಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ದೇವೇಗೌಡರು ಸಾಮಾನ್ಯ ರೈತನ ಮಗ. ನಮ್ಮ ಬಳಿ ಚಾಣುಕ್ಯರು ಯಾರೂ ಇಲ್ಲ. ದೇವೇಗೌಡರೇ ನಮಗೆ ಚಾಣುಕ್ಯರು, ಕುಮಾರಣ್ಣನೇ ಚಾಣುಕ್ಯ, ನಮ್ಮ ಜನರೇ ಚಾಣುಕ್ಯರು. ಜನರ ಆಶೀರ್ವಾದ ಇರೋವರೆಗೂ ನಮಗೇನು ತೊಂದರೆಯಿಲ್ಲ.
ಜನ ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿದ್ದಾರೆ. ಇವೆರಡು ಪಕ್ಷಗಳನ್ನು ಸ್ವಲ್ಪ ದಿನ ರೆಸ್ಟ್‌ಗೆ ಕಳುಹಿಸಬೇಕೆಂದು ಜನರು ತೀರ್ಮಾನ ಮಾಡಿದ್ದಾರೆ. ಕುಮಾರಣ್ಣ, ದೇವೇಗೌಡರ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ ಎಂದರು.
ಹಾಸನದಲ್ಲಿ ಎಚ್.ಎಸ್.ಪ್ರಕಾಶ್ ಅವರ ಮಗನನ್ನು ನಿಲ್ಲಿಸಿದ್ದೇವೆ. ಭವಾನಿ ಅವರೇ ಕೈ ಎತ್ತಿ ಹೇಳಿದ್ದಾರಲ್ಲಾ ಇನ್ನೇನು ಬೇಕು. ನಮಗೆ ಬೇಕಿರುವುದು ಪಕ್ಷ, ಜನ ಉಳಿಯಬೇಕು ರಾಜ್ಯ ಉಳಿಯಬೇಕು ಎಂದರು. ಇನ್ನು, ಪ್ರೀತಂ ಗೌಡ ಅವರ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರೇವಣ್ಣ, ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ನನಗೆ ಮಾತನಾಡುವ ಶಕ್ತಿ ಇಲ್ಲ. ಅವರು ದೊಡ್ಡವರಿರುವಾಗ ಆ ಲೆವೆಲ್‌ಗೆ ನಾವು ಬೆಳೆದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ