Karnataka Elections 2023: ಜನತಾ ದಳ-JDS (ಜಾತ್ಯತೀತ) ಕರ್ನಾಟಕದಲ್ಲಿ ಸ್ವಂತವಾಗಿ ಸರ್ಕಾರ ರಚಿಸಲು ಸಿದ್ದವಾಗಿದೆ ಮತ್ತು 224 ಸಂಸದೀಯ ಸ್ಥಾನಗಳಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಆದರೆ ಮುಂಬರುವ ಚುನಾವಣಾ ಸಮರಕ್ಕೆ (Karnataka Assembly Elections 2023) ಪಕ್ಷ ಸಜ್ಜಾಗುತ್ತಿರುವಾಗಲೇ ಪಕ್ಷದ ಅಡಿಪಾಯ ಹೆಚ್.ಡಿ.ದೇವೇಗೌಡರ (HD Devegowda) ಕುಟುಂಬದಲ್ಲಿನ ಬಿರುಕುಗಳಿಂದ ಅವರೇ ಕಟ್ಟಿ ಬೆಳಸಿದ ಪಕ್ಷದಲ್ಲಿ (Party) ರಣಕಹಳೆ ಶುರುವಾಗಿದೆ.
ಒಕ್ಕಲಿಗ ರಾಜಕೀಯದ ಕೇಂದ್ರವಾಗಿರುವ ಹಾಸನದಿಂದ ಸ್ಪರ್ಧಿಸಲು ಹಠ ಹಿಡಿದಿರುವ ಪಕ್ಷದ ವರಿಷ್ಠ ದೇವೇಗೌಡರ ಹಿರಿಯ ಪುತ್ರ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕೌಟುಂಬಿಕ ಕಲಹದ ಕೇಂದ್ರಬಿಂದುವಾಗಿದ್ದಾರೆ.
ಸಹೋದರ Vs ಸಹೋದರವ
ಆದರೆ ಅಚ್ಚರಿಯೆಂದರೆ, ಭವಾನಿ ಅವರ ಅಭ್ಯರ್ಥಿತನಕ್ಕೆ ಕುಟುಂಬದಿಂದಲೇ ವಿರೋಧ ವ್ಯಕ್ತವಾಗಿದ್ದು, ಪ್ರಮುಖವಾಗಿ ಎಚ್‌ಡಿ ಕುಮಾರಸ್ವಾಮಿ ಅವರು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ರೇವಣ್ಣನವರ ಪ್ರಭುತ್ವವೆಂದು ಪರಿಗಣಿಸಲಾಗಿದ್ದ ಹಾಸನದಲ್ಲಿ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ರೇವಣ್ಣನವರ ಪತ್ನಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಪ್ರಕಟಿಸಿದೆ.
2018 ರಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಸೋತಿದ್ದ ಹಾಸನದಿಂದ ನಾಲ್ಕು ಬಾರಿ ಜೆಡಿಎಸ್ ಶಾಸಕರಾಗಿದ್ದ ದಿವಂಗತ ಎಚ್‌ಡಿ ಪ್ರಕಾಶ್ ಅವರ ಪುತ್ರ ಎಚ್‌ಪಿ ಸ್ವರೂಪ್‌ಗೆ ಕುಮಾರಸ್ವಾಮಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿರುವುದಾಗಿ ವರದಿಗಳ ಮೂಲಕ ತಿಳಿದುಬಂದಿದೆ. ಭವಾನಿ ಮಾತ್ರ ಜೆಡಿಎಸ್‌ನ ಟಿಕೆಟ್ ನನಗೆ ಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಪಕ್ಷದಲ್ಲಿ ಬಿರುಕುಗಳು ಉಂಟಾಗಿದೆ.
ಸಹೋದರರ ನಡುವೆ ಶಾಂತಿ ಕದಡುವ ದೇವೇಗೌಡರ ಪ್ರಯತ್ನಗಳು ಇದುವರೆಗೆ ಫಲ ನೀಡಿಲ್ಲ, ಎರಡೂ ಕಡೆಯವರು ತಮ್ಮ ನಿಲುವಿನಿಂದ ಮಣಿಯಲು ನಿರಾಕರಿಸಿದ್ದಾರೆ. ಇಲ್ಲಿಯವರೆಗೂ ಕುಟುಂಬದವರು ಸದಾ ಒಗ್ಗಟ್ಟಿನೊಂದಿಗೆ ಇರುತ್ತಿದ್ದರು, ಸದ್ಯದ ಕಿಚ್ಚು, 90ರ ಆಸುಪಾಸಿನಲ್ಲಿರುವ ಹಿರಿಯಣ್ಣ ಗೌಡರ ಆರೋಗ್ಯ ಹದಗೆಟ್ಟಿರುವ ಕಾರಣ ಪಕ್ಷದಲ್ಲಿ ಉತ್ತರಾಧಿಕಾರದ ಸಮರ ಶುರುವಾಗಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.
ಪಕ್ಷದಲ್ಲಿರುವವರೆಲ್ಲಾ ಕುಟುಂಬ ಸದಸ್ಯರೇ
ಆಂತರಿಕವಾಗಿ ನೋಡಿದರೆ ಕೇವಲ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಭವಾನಿ, ಅತ್ತಿಗೆ ಅನಿತಾ ಕುಮಾರಸ್ವಾಮಿ ಅವರು ಎರಡು ಬಾರಿ ಸಂಸದೀಯ ಚುನಾವಣೆಯಲ್ಲಿ ಮತ್ತು ರಾಮನಗರದಿಂದ ಒಮ್ಮೆ ಗೆದ್ದು ಬಂದಿದ್ದನ್ನು ಮರೆತಿಲ್ಲ. 2018 ಚುನಾವಣೆಯಲ್ಲಿ ಭವಾನಿಯವರನ್ನು ಪಕ್ಷ ಕಡೆಗಣಿಸಿತ್ತು. ಆದರೆ ಅವರ ಪತಿ ರೇವಣ್ಣ ಹೊಳೆನರಸೀಪುರದಿಂದ ಶಾಸಕರಾಗಿದ್ದಾರೆ, ಅವರ ಮಗ ಪ್ರಜ್ವಲ್ ಹಾಸನದಿಂದ ಸಂಸದರಾಗಿದ್ದಾರೆ ಮತ್ತು ಅವರ ಇನ್ನೊಬ್ಬ ಮಗ ಸೂರಜ್ ಎಂಎಲ್‌ಸಿಯಾಗಿದ್ದಾರೆ.
ಗೌಡರು ತಮ್ಮ ಕುಟುಂಬದ ಹಿತಾಸಕ್ತಿಯನ್ನು ಕಾಪಾಡಲು ಬಹಳಷ್ಟು ಶ್ರಮವಹಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ, ಉದಾಹರಣೆಗೆ, 2019 ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ, ದೇವೇಗೌಡರು ಹಾಸನದ ಸ್ಥಾನವನ್ನು ಅವರ ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟಿದ್ದರು ಹಾಗೂ ಅವರು ತುಮಕೂರಿನಿಂದ ಸ್ಪರ್ಧಿಸಿದರು.
ಮತ್ತೊಬ್ಬ ಮೊಮ್ಮಗ ನಿಖಿಲ್ ಜೆಡಿಎಸ್ ಭದ್ರಕೋಟೆಯಾದ ಮಂಡ್ಯದಿಂದ ಸ್ಪರ್ಧಿಸಿ, ಪಕ್ಷದ ಆಗಿನ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಬದಲಿಗೆ ಸ್ಪರ್ಧಿಸಿದರು. ಪ್ರಜ್ವಲ್ ಗೆದ್ದರೂ ದೇವೇಗೌಡ ಮತ್ತು ನಿಖಿಲ್ ಇಬ್ಬರೂ ಸೋತರು. ಅನಿತಾ ಈಗ ತಮ್ಮ ರಾಮನಗರ ಸ್ಥಾನವನ್ನು ತಮ್ಮ ಮಗ ನಿಖಿಲ್‌ಗೆ ಬಿಟ್ಟುಕೊಟ್ಟಿದ್ದಾರೆ. ಎರಡೂ ಸಂದರ್ಭಗಳಲ್ಲಿ, ಸೀಟುಗಳನ್ನು ಯಾವುದೇ "ನಿಷ್ಠಾವಂತ ಕಾರ್ಯಕರ್ತರಿಗೆ" ನೀಡಲಾಗಿಲ್ಲ, ಆದರೆ ಕುಟುಂಬ ಸದಸ್ಯರಿಗೆ ನೀಡಲಾಯಿತು.
ಅಪ್ಪಮಕ್ಕಳ ಪ್ರಬಲ ರಾಜಕೀಯ ಪಕ್ಷ ಜೆಡಿಎಸ್
ಜೆಡಿ (ಎಸ್) ಜನತಾ ಪಕ್ಷದ ಒಂದು ಭಾಗ, ಇದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ 1983 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು. ನಂತರ 1994 ಹೊಸ ಉರುಪಿನೊಂದಿಗೆ ಜನತಾ ಪಕ್ಷ ಜೆಡಿ (ಎಸ್) ಆಗಿ ಮಾರ್ಪಟ್ಟಿತು, ಹೊಸ ಪಕ್ಷಕ್ಕೆ ದೇವೆಗೌಡರು ಸಾರಥಿಯಾದರು. ವಿಧಿಯ ತಿರುವಿನಿಂದ, ಅವರು ಜೂನ್ 1996 ರಲ್ಲಿ ಪ್ರಧಾನ ಮಂತ್ರಿಯಾದರು ಮತ್ತು ಅವರು ಅಧಿಕಾರ ವಹಿಸಿಕೊಂಡಾಗ ಅವರು ಮಾಡಿದ ಮೊದಲ ಕೆಲಸವೆಂದರೆ ಹೆಗಡೆ ಅವರನ್ನು ಪಕ್ಷದಿಂದ ಹೊರಹಾಕುವುದು.
ಮುಂದಿನ ಕೆಲವು ವರ್ಷಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಗೌಡರಿಗೆ ಅಥವಾ ಅವರ ಕುಟುಂಬಕ್ಕೆ ಯಾರೇ ಬೆದರಿಕೆ ಒಡ್ಡಿದರೂ ಅವರನ್ನು ವ್ಯವಸ್ಥಿತವಾಗಿ ಹೊರಹಾಕಲಾಯಿತು. 1999 ರಲ್ಲಿ ಜನತಾ ದಳವು ವಿಭಜನೆಯಾಯಿತು, ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಜನತಾ ದಳದ (ಯು) ಸಾರಥಿಯನ್ನು ಮುಂದುವರಿಸಿಕೊಂಡು ಹೋದರು ಮತ್ತು ಗೌಡರೊಂದಿಗೆ ಜೆಡಿ (ಎಸ್) ಅನ್ನು ಪ್ರಾರಂಭಿಸಿದರು.
ನೆರೆಯ ರಾಜ್ಯಗಳಲ್ಲಿ ತನ್ನ ಸಹವರ್ತಿಗಳಿಗೆ ಸರಿಸಮಾನವಾಗಿ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲ ಪ್ರಾದೇಶಿಕ ಸಂಸ್ಥೆಯಾಗಿ ಹೊರಹೊಮ್ಮಬಹುದಿತ್ತು, ಆದರೆ ಅದು ಚಿನ್ನದ ತಟ್ಟೆಯಲ್ಲಿ ಸಿಕ್ಕ ಅವಕಾಶವನ್ನು ಕಳೆದುಕೊಂಡಿದೆ. ತನ್ನ ಸ್ಥಾನಮಾನ ಕಳೆದುಕೊಂಡ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿತು.
ಪಕ್ಷವು ಉಳಿಯಬೇಕಾದರೆ ಸುಧಾರಣೆಯ ಅಗತ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ. ಕುಮಾರಸ್ವಾಮಿ ಅವರು ಬಹುತೇಕ ಒಂಟಿಯಾಗಿ ಪಕ್ಷವನ್ನು ಪುನರುಜ್ಜೀವನಗೊಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವಾಗ, ಇದು ಕುದುರೆಗಳು ಉರುಳಿದ ನಂತರ ಲಾಯಕ್ಕೆ ಬೀಗ ಹಾಕುವ ಸಂದರ್ಭವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ