• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election News: ಸಿದ್ದು, ಡಿಕೆಶಿ ರಾಮ-ಲಕ್ಷ್ಮಣರ ರೀತಿ, ಭ್ರಷ್ಟ ಸರ್ಕಾರವನ್ನ ಸಂಹಾರ ಮಾಡ್ತಾರೆ! -ಸುರ್ಜೇವಾಲಾ

Karnataka Election News: ಸಿದ್ದು, ಡಿಕೆಶಿ ರಾಮ-ಲಕ್ಷ್ಮಣರ ರೀತಿ, ಭ್ರಷ್ಟ ಸರ್ಕಾರವನ್ನ ಸಂಹಾರ ಮಾಡ್ತಾರೆ! -ಸುರ್ಜೇವಾಲಾ

ಡಿಕೆ ಶಿವಕುಮಾರ್/ ಸಿದ್ದರಾಮಯ್ಯ

ಡಿಕೆ ಶಿವಕುಮಾರ್/ ಸಿದ್ದರಾಮಯ್ಯ

ಈ ಭ್ರಷ್ಟ ಸರ್ಕಾರವನ್ನು ತೆಗೆಯಬೇಕು, ಸಂಹಾರ ಮಾಡಲು ನಾವು ಬಂದಿದ್ದೇವೆ. ಯುವಕರಿಂದಲೇ ಸುಡುಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

  • Share this:

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ರಾಮ-ಲಕ್ಷ್ಮಣ (Ram Lakshman) ರೀತಿ. ಭ್ರಷ್ಟಾಚಾರದ ಸರ್ಕಾರವನ್ನು ಸಂಹಾರ ಮಾಡುತ್ತಾರೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ (Surjewala) ಹೇಳಿದ್ದಾರೆ. ಇಂದು ಬೆಂಗಳೂರಿನ (Bengaluru) ಟಿ.ನರಸೀಪುರ ವಿದೋದಯ ಕಾಲೇಜು ಮುಂಭಾಗದಲ್ಲಿ ಕಾಂಗ್ರೆಸ್ (Congress)​ ಪಕ್ಷ ನಾಯಕರು, 40% ಭ್ರಷ್ಟಾಚಾರ ಸಂಹಾರಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್, ಉಸ್ತುವಾರಿ ಸುರ್ಜೇವಾಲಾ, ಮಾಜಿ‌ ಸಚಿವ ಡಾ.ಎಚ್.ಸಿ ಮಹದೇವಪ್ಪ ಸೇರಿದಂತೆ ಹಲವು ಕೈ ಮುಖಂಡರು ಭಾಗಿಯಾಗಿದ್ದರು.


ಭ್ರಷ್ಟಾಚಾರದ ಅಸುರಾ ಪ್ರತಿಕೃತಿ ದಹನ ಮಾಡುತ್ತಿದ್ದೇವೆ


ಪ್ರತಿಭಟನೆಯಲ್ಲಿ ಹಲವು ಕೈ ಕಾರ್ಯಕರ್ತರು ಭಾಗಿಯಾಗಿದ್ದರು, ಪ್ರತಿಭಟನೆ ಕಾಂಗ್ರೆಸ್​ ನಾಯಕರು ನಂತರ ಭೂತ ದಹನ ಕೂಡ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರದ ಅಸುರಾ ಪ್ರತಿಕೃತಿ ದಹನ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ಹೇಳಿದರು.


ಇದನ್ನೂ ಓದಿ: Karnataka Assembly Elections: ನಾನು ಶಿವಣ್ಣನ ಅಭಿಮಾನಿ, ಅವರಿಗೆ ಧನ್ಯವಾದ ಹೇಳುತ್ತೇನೆ! ಹೀಗ್ಯಾಕೆ ಹೇಳಿದ್ರು ಪ್ರತಾಪ್​ ಸಿಂಹ?


ಅಲ್ಲದೆ, ಡಿಕೆ ಶಿವಕುಮಾರ್​ ಮಾತನಾಡಿ, ಈ ಭ್ರಷ್ಟ ಸರ್ಕಾರವನ್ನು ತೆಗೆಯಬೇಕು, ಸಂಹಾರ ಮಾಡಲು ನಾವು ಬಂದಿದ್ದೇವೆ. ಯುವಕರಿಂದಲೇ ಸುಡುಸುತ್ತೇವೆ. 10ರಂದು ಬಟನ್ ಒತ್ತಿದ ತಕ್ಷಣ ಕ್ಯೂ ಅಂತ ದೆಹಲಿಗೆ ಕೇಳಿಸಬೇಕು ಎಂದರು.
ಕೈ ಎತ್ತಿ ಒಗ್ಗಟ್ಟು ಪ್ರದರ್ಶನ


ಇನ್ನು, ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದರು. ರಸ್ತೆ ಮಧ್ಯದಲ್ಲೇ ಭ್ರಷ್ಟಾಚಾರದ ಅಸುರನಿಗೆ ಕೈ ಕಾರ್ಯಕರ್ತರು ಬೆಂಕಿ ಹಚ್ಚಿದರು. ಕೇವಲ ಅರ್ಧ ಗಂಟೆಯಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.
ಬಿಲ್ಲು ಬಾಣ ಬಿಡುವ ಮೂಲಕ ಭ್ರಷ್ಟಾಚಾರ ಅಸರು ಸಂಹಾರ ಮಾಡಲು ಕೈ ನಾಯಕರು ಮುಂದಾದರು. ಈ ವೇಳೆ ಬಿಲ್ಲು ಬಾಣ ಬಿಡಲು ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಪರದಾಡಿದರು. ಅಂತಿಮವಾಗಿ ಮೂರನೇ ಬಾರಿಗೆ ಡಿ.ಕೆ ಶಿವಕುಮಾರ್ ಬಾಣವನ್ನ ಸರಿಯಾಗಿ ಗುರಿ ತಲುಪಿಸಿದರು.

First published: