ಮೈಸೂರು: ವರುಣಾದಲ್ಲಿ (Varuna) ಇಂದು ಸಿದ್ದರಾಮಯ್ಯ (Siddaramaiah) ಅವರು ಇಂದು ಭರ್ಜರಿ ಪ್ರಚಾರ ನಡೆಸಿದ್ದಾರೆ. ಎರಡು ದಿನಗಳ ಕಾಲ ಪ್ರಚಾರ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಇಂದು ಮತ್ತು ನಾಳೆ ವರುಣಾದಲ್ಲಿ ಪ್ರಚಾರ ಮಾಡಲಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ನಟ ಶಿವರಾಜ್ಕುಮಾರ್ (Shiva Rajkumar) ಹಾಗೂ ನಟಿ ನಿಶ್ವಿಕಾ ನಾಯ್ಡು (Nishvika Naidu ), ಮಾಜಿ ಸಂಸದೆ ರಮ್ಯಾ (Ramya) ಸಾಥ್ ನೀಡಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ನಿಶ್ವಿಕಾ ಅವರು, ವರುಣಾದಲ್ಲಿ ಪ್ರಚಾರಕ್ಕೆ ಮೊದಲ ಬಾರಿಗೆ ಬಂದಿದ್ದೇನೆ. ಬಹಳ ಸಂತೋಷ ಆಗುತ್ತಿದೆ. ರಾಕೇಶ್ ಅಂಕಲ್ ನನಗೆ ಚಿಕ್ಕಪ್ಪ ಆಗಬೇಕು. ಆದ್ದರಿಂದ ಅಪ್ಪಾಜಿ ಅವರಿಗೆ ಬೆಂಬಲ ಕೊಡಲು ಬಂದಿದ್ದೇನೆ. ಜನರು ಅವರ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಸಂಸದೆ ರಮ್ಯಾ ಮಾತನಾಡಿ, ಭಾರೀ ಅಂತರದೊಂದಿಗೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಬೇಕು ಅಂತ ಮನವಿ ಮಾಡುತ್ತೇನೆ ಎಂದರು. ಅಲ್ಲದೆ, ಅಭಿಮಾನಿಗಳಿಗಾಗಿ ಹಾಡನ್ನು ಹಾಡಿದರು.
ಇದನ್ನೂ ಓದಿ: Karnataka Election News: ಸುದೀಪ್ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು!
ಎಲ್ಲಾ ವರ್ಗದ ಜನರು ಆಶೀರ್ವಾದ ಮಾಡಿ, ವರುಣಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೀನಿ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನ ಮರೆತು ಆಶೀರ್ವಾದ ಮಾಡಿ, ಬೇರೆಯವರು ಬಂದು ಇಲ್ಲಿ ಅಭಿವೃದ್ದಿ ಮಾಡಲು ಆಗೋದಿಲ್ಲ ಎಂದು ಮನವಿ ಮಾಡಿದರು.
ಇತ್ತ, ಸಿದ್ದರಾಮಯ್ಯ ಅವರ ಪರ ಶಿವರಾಜ್ಕುಮಾರ್ ಅವರು ಪ್ರಚಾರ ಮಾಡಿದ್ದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಗ ಅಸಮಾಧಾನ ಹೊರಹಾಕಿದ್ದಾರೆ. ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ