ಮೈಸೂರು: ವರುಣಾದಲ್ಲಿ (Varuna) ಒಂದು ಲಕ್ಷ ಮತದಲ್ಲಿ ಗೆಲ್ಲುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ (Pratap Simha), ಸಿದ್ದರಾಮಯ್ಯಗೆ ಪುಕ್ಕಲತನ ಭಯ ಕಾಡುತ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ (Grandson) ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ತಿರಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೋಡಿದರೆ ನಗು ಬರುತ್ತೆ. ಒಂದು ಲಕ್ಷ ಮತದಲ್ಲಿ ಗೆಲ್ಲುವ ವಿಶ್ವಾಸ ಇರುವ ಸಿದ್ದರಾಮಯ್ಯ 17 ವರ್ಷದ ಮೊಮ್ಮಗ, ಕುಟುಂಬದವರನ್ನ ಕರೆದುಕೊಂಡು ಪೂಜೆ ಪುನಸ್ಕಾರ ಮಾಡಿ ಭಾವನಾತ್ಮಕವಾಗಿ ಮತ (Vote) ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮಲ್ಲಿರುವ ನೈತಿಕತೆ ಸಿದ್ಧಾಂತ ಸತ್ತು ಹೋಗಿದೆಯೇ?
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯ ಅವರಿಗೆ ಭಯ ಮತ್ತು ಪುಕ್ಕಲತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ನಿಮಗೆ ಕುಟುಂಬ ರಾಜಕಾರಣದ ಬಗ್ಗೆಮಾತನಾಡುವ ನೈತಿಕತೆ ಇಲ್ಲ.
ನಿಮ್ಮ ಮೊಮ್ಮಗನನ್ನ ಉತ್ತರಾಧಿಕಾರಿ ಅಂತ ಸಂದೇಶ ನೀಡುತ್ತಾ ಇದ್ದೀರಾ? ಕಾಂಗ್ರೆಸ್ಗೆ ಹೋದ ಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ಧಾಂತ ಸತ್ತು ಹೋಗಿದೆಯೇ? ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ ಬೋಧನೆ ಮಾಡುತ್ತಿದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದರೂ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಆಗಿದ್ದಾಗಲೇ ಒಂದು ಲಕ್ಷ ಮತದಲ್ಲಿ ಗೆಲ್ಲಲು ಆಗಲಿಲ್ಲ
ಅಲ್ಲದೆ, ಕಾಂಗ್ರೆಸ್ ಗೆ ಹೋದ ಮೇಲೆ ನಿಮ್ಮ ಸಿದ್ಧಾಂತ, ನೈತಿಕತೆಯನ್ನ ಕಾಂಗ್ರೆಸ್ ಗೆ ಅಡವಿಟ್ಟರಾ? ಮೊಮ್ಮಗನನ್ನ ಕರೆದುಕೊಂಡು ಹೋಗಿ ಮತ ಕೇಳೋದನ್ನು ನೋಡಿದರೆ ಸೋಲು ನಿಶ್ಚಿತ ಅಂತ ತಿಳಿಯುತ್ತಿದೆ. ನೀವು ಸಿಎಂ ಆಗಿದ್ದಾಗಲೇ ಒಂದು ಲಕ್ಷ ಮತದಲ್ಲಿ ವರುಣಾದಲ್ಲಿ ಗೆಲ್ಲಲು ಆಗಲಿಲ್ಲ. ಆಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದೀರಿ. ನಾವು ಪ್ರಬಲ ಅಭ್ಯರ್ಥಿ ಹಾಕುತ್ತಿದ್ದಂತೆ ಮೊಮ್ಮಗ, ಕುಟುಂಬ ಆದಿಯಾಗಿ ಪ್ರಚಾರಕ್ಕೆ ಇಳಿಯುತ್ತಿದ್ದೀರಿ.
ಕರ್ನಾಟಕ ಇತಿಹಾಸದಲ್ಲಿ ಯಾರಾದರೂ ಒಂದು ಲಕ್ಷ ಮತದಲ್ಲಿ ಗೆದ್ದಿದ್ದರೆ ಹೇಳಿ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ 36 ಸಾವಿರ ಅಂತರದಿಂದ ಸೋಲುಂಡಿದ್ರಿ. ಮೇ 13ಕ್ಕೆ ಚಾಮುಂಡೇಶ್ವರಿ ತಾಯಿ ತೀರ್ಪು ಕೊಡ್ತಾಳೆ, ಅಲ್ಲಿ ತನಕ ಆದರು ಬಡಾಯಿಕೊಚ್ಚಿ ಕೊಳ್ಳದೇ ಇರಿ ಎಂದು ಸಿದ್ದರಾಮಯ್ಯ ಅವರಿಗೆ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ