• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pralhad Joshi: ಈ ಸಲ ಕಪ್‌ ನಮ್ದೇ ಎಂದ ಪ್ರಹ್ಲಾದ್ ಜೋಶಿ! ಪರೋಕ್ಷವಾಗಿ ಶೆಟ್ಟರ್‌ಗೆ ಕೇಂದ್ರ ಸಚಿವರ ಟಾಂಗ್

Pralhad Joshi: ಈ ಸಲ ಕಪ್‌ ನಮ್ದೇ ಎಂದ ಪ್ರಹ್ಲಾದ್ ಜೋಶಿ! ಪರೋಕ್ಷವಾಗಿ ಶೆಟ್ಟರ್‌ಗೆ ಕೇಂದ್ರ ಸಚಿವರ ಟಾಂಗ್

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯದವರು, ವೀರಶೈವ ಲಿಂಗಾಯತರು ಬಿಜೆಪಿಯನ್ನ ಕೈ ಬಿಡಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ಲಿಂಗಾಯತ (Lingayat ) ಸಿಎಂ ಕುರಿತಂತೆ ಸಿದ್ದರಾಮಯ್ಯ (Siddaramaiah) ಅವರು ನೀಡಿರುವ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಕ್ಷಮೆ ಕೇಳಿಲ್ಲ, ಅವರು ಕೇಳಬೇಕು. ಈಗಾಗಲೇ ಚುನಾವಣೆ ಆಯೋಗಕ್ಕೆ (Election Commission) ದೂರು ಕೊಡಲಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ (Hubballi Dharwad Central Constituency) ವಿಧಾನಸಭಾ ಕ್ಷೇತ್ರದಲ್ಲಿ ಬಹಳ‌ ಬಹುಮತದಿಂದ ಗೆಲ್ಲಲಿದೆ. ಗದಗ, ಹಾವೇರಿ, ಧಾರವಾಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಭೆ ನಡೆಯಲಿದ್ದು, ಏಪ್ರಿಲ್​ 29 ರಂದು ಕುಡಚಿಗೆ ಮೋದಿ (PM Modi) ಬರಲಿದ್ದಾರೆ. ಇದಾದ ಮೇಲೆ ಇನ್ನೊಂದು ಕಾರ್ಯಕ್ರಮ ಕೊಡಲು ನಾನು ವಿನಂತಿ ಮಾಡಿದ್ದೇನೆ. ಬೆಳಗಾವಿ (Belagavi) ಜಿಲ್ಲೆಗೆ ಮೋದಿ ಇನ್ನೊಂದು ಕಾರ್ಯಕ್ರಮ ಕೊಡಲು ವಿನಂತಿ ಮಾಡಿದ್ದೇನೆ, ಯೋಗಿ ಆದಿತ್ಯನಾಥ ಕೂಡಾ ಬರಲಿದ್ದಾರೆ ಎಂದು ಕೇಂದ್ರ ಸಚಿವ  ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.


ಕಿತ್ತೂರ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಉತ್ತರಾಖಂಡದಲ್ಲಿ ಇತಿಹಾಸ ಬ್ರೇಕ್ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಈ ಬಾರಿ ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದೇವೆ.




ಕಳೆದ ಎರಡು ಬಾರಿ ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ. ಜಗದೀಶ್ ಶೆಟ್ಟರ್ ಕಾಂಗ್ರೆಸ್​ಗೆ ಹೋಗಿದ್ದು ಏನೂ ಎಫೆಕ್ಟ್ ಆಗಲ್ಲ, ಹಳೇ ಪ್ಲೇಯರ್ ರಿಟೈರ್ಡ್ ಆಗಿ ಅಂದ್ವಿ, ಆದರೆ ಅವರು ಮತ್ತೊಂದು ಟೀಮ್ ನಲ್ಲಿ ಆಡೋಕೆ ಹೋಗಿದ್ದಾರೆ. ಈ ಸಲ ಕಪ್ ನಮ್ದೇ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.


ವೀರಶೈವ ಲಿಂಗಾಯತರು ಬಿಜೆಪಿಯನ್ನ ಕೈ ಬಿಡಲ್ಲ


ಇನ್ನು, ನ್ಯೂಸ್‌18 ಕನ್ನಡದೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಡಿಯೂರಪ್ಪನವರ ಬಳಿಕ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ.


ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯದವರು, ವೀರಶೈವ ಲಿಂಗಾಯತರು ಬಿಜೆಪಿಯನ್ನ ಕೈ ಬಿಡಲ್ಲ. ಶೆಟ್ಟರ್, ಸವದಿ ಹೋದರೂ ಬಿಜೆಪಿಯಲ್ಲಿ ಸಮರ್ಥ ಲಿಂಗಾಯತ ನಾಯಕರು ಇದ್ದಾರೆ. ಡಬ್ಬಲ್‌ ಇಂಜಿನ್ ಸರ್ಕಾರ ಉತ್ತಮ ಆಡಳಿತ ನೀಡಿದ ಕಾರಣ ಜನಸ್ತೋಮ ಸೇರುತ್ತಿದ್ದಾರೆ. ಹೀಗಾಗಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರ್ತೇವೆ ಎಂದರು.

First published: