ಬೆಂಗಳೂರು: ಮೈಸೂರು ಬೆಂಗಳೂರು ಹೈವೇ (Mysuru Bengaluru Highway) ಮಾರ್ಚ್ 11ಕ್ಕೆ ಲೋಕಾರ್ಪಣೆಯಾಗುತ್ತಿದೆ. ಚುನಾವಣೆಯ (Karnataka Election) ಸಮಯದಲ್ಲೇ ಉದ್ಘಾಟನೆಗೆ ಬಿಜೆಪಿ (BJP) ಹೆದ್ದಾರಿ ಮಾಡಿಕೊಂಡಿದ್ದು, ಪ್ರಧಾನಿ ಮೋದಿ (PM Modi) ಅವರ ರೋಡ್ಶೋ (Roadshow) ಕೂಡ ಫೈನಲ್ ಆಗಿದೆ. ಫೆಬ್ರವರಿ 27ಕ್ಕೆ ಶಿವಮೊಗ್ಗ ಏರ್ಪೋರ್ಟ್ (Shivamogga Airport) ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಬಿಜೆಪಿಗೆ ಶಕ್ತಿ ತುಂಬಿಸುವ ಭರ್ಜರಿ ಸಮಾವೇಶವನ್ನೂ ಆಯೋಜಿಸಲಾಗಿದೆ. ಶಿವಮೊಗ್ಗ ಜೊತೆ ಬೆಳಗಾವಿಯಲ್ಲೂ (Belagavi) ಮೋದಿ ಮಿಂಚಿನ ಸಂಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಬೆಳಗಾವಿ ಉತ್ತರ, ದಕ್ಷಿಣ ಮತ ಕ್ಷೇತ್ರದಲ್ಲಿ 8 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ.
ಬಿಜೆಪಿಗೆ ಹಳೇ ಮೈಸೂರು ‘ಹೆದ್ದಾರಿ
ಟಾರ್ಗೆಟ್ - 1; ಹೈವೇ ಲೋಕಾರ್ಪಣೆ ಮೂಲಕ 10 ಜಿಲ್ಲೆಗಳಲ್ಲಿ ಮತಬೇಟೆ
ಟಾರ್ಗೆಟ್ - 2; ಮೈಸೂರು-ಕೊಡಗು ಚತುಷ್ಪಥ ರಸ್ತೆಗೆ ಅಡಿಗಲ್ಲಿಟ್ಟು ಮತಬೇಟೆ
ಟಾರ್ಗೆಟ್ - 3; ರೋಡ್ ಶೋ ಮೂಲಕ ಬೆಂಗಳೂರು,ರಾಮನಗರ, ಮಂಡ್ಯ ಮತಬೇಟೆ
ಟಾರ್ಗೆಟ್ - 4; ಸಮಾವೇಶದ ಮೂಲಕ ಜೆಡಿಎಸ್-ಕಾಂಗ್ರೆಸ್ಗೆ ಟಕ್ಕರ್ ಕೊಡುವುದು
ಟಾರ್ಗೆಟ್ - 5; ಮತ್ತೆ ಕಮಲ ಅರಳಿದ್ರೆ ರಾಜ್ಯದ ಅಭಿವೃದ್ಧಿ ಅಸ್ತ್ರ ಪ್ರಯೋಗಿಸುವುದು
ಇದನ್ನೂ ಓದಿ: Bengaluru: ಅಕ್ರಮವಾಗಿ ಯುವತಿಯ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹ; ಅಧೀಕ್ಷಕ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಅಮಾನತು
ಹಳೇ ಮೈಸೂರು ಭಾಗವನ್ನು ವಶಕ್ಕೆ ಪಡೆದುಕೊಳ್ಳಲು ಕೇಸರಿ ಪಡೆಗೆ ‘ಹೆದ್ದಾರಿ’ಯೇ ರಹದಾರಿಯಾಗಿದೆ ಅಂತ ಹೇಳಬಹುದು. ಹೌದು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಚ್ 11ಕ್ಕೆ ಲೋಕಾರ್ಪಣೆ ಆಗುವುದು ಫೈನಲ್ ಆಗಿದೆ. NHAI ಅಧಿಕಾರಿ ವಿವೇಕ್ ಜೈಸ್ವಾಲ್ ಜೊತೆ ಸಂಸದ ಪ್ರತಾಪ್ ಸಿಂಹ ಸಭೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜೆಡಿಎಸ್ ಭದ್ರಕೋಟೆ ಭೇದಿಸಲು ಬಿಜೆಪಿ ಅಸ್ತ್ರ
ಅದೇ ದಿನ ಮೈಸೂರು ಮತ್ತು ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಕೂಡ ಭೂಮಿ ಪೂಜೆಯನ್ನು ಮೋದಿ ನೆರವೇರಿಸಲಿದ್ದಾರೆ. ಆ ಮೂಲಕ ಜೆಡಿಎಸ್ ಭದ್ರಕೋಟೆ ಭೇದಿಸಲು ನರೇಂದ್ರ ಮೋದಿಯವರನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದ್ದು ಬಿಡದಿಯಿಂದ ಮದ್ದೂರುವರೆಗೆ 40 ಕಿಲೋ ಮೀಟರ್ ರೋಡ್ ಶೋ ನಡೆಸಿ ಬಳಿಕ ನಿಡಘಟ್ಟ ಬಳಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: Bengaluru: ಅತ್ತೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಅಳಿಯ; ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು
ಇದು ಬಿಜೆಪಿ ಹಾಕಿರುವ ಐದು ಪ್ರಮುಖ ಟಾರ್ಗೆಟ್ ಆಗಿದ್ದು, ಚುನಾವಣೆ ಸಮಯದಲ್ಲಿ ಹೆದ್ದಾರಿ ಉದ್ಘಾಟನೆ ಆಗುತ್ತಿದೆ, ಹೈವೇ ಕಾಮಗಾರಿ ತರಾತುರಿಯಲ್ಲಿ ಆಗುತ್ತಿದೆ. ಇನ್ನು ಹಲವು ಕೆಲಸಗಳು ಬಾಕಿ ಉಳಿದಿದೆ. ಅಲ್ಲದೇ ಕಳಪೆ ಕೆಲಸ ಆಗುತ್ತಿದೆ ಎಂಬ ಆರೋಪಗಳು ಕೇಳು ಬರುತ್ತಿದೆ. ಇಂತಹ ಯಾವುದೇ ಟೀಕೆಗಳಿಗೂ ಕಿವಿಕೊಡದ ಕೇಸರಿ ಪಡೆ ಮುನ್ನುಗುತ್ತಿದೆ.
ಇತ್ತ 117 ಕಿಲೋ ಮೀಟರ್ ಹೈವೆಗೆ 8,066 ಕೋಟಿ ರೂಪಾಯಿ ವೆಚ್ಚ ಆಗಿದೆ. 3 ಗಂಟೆ ಪ್ರಯಾಣ 90 ನಿಮಿಷಕ್ಕೆ ಇಳಿಸಿದ್ದಾರೆ ಅನ್ನೋದು ಸಾರ್ವಜನಿಕರ ಖುಷಿಯಾಗಿದೆ. ಅಲ್ಲದೆ ಪ್ರಧಾನಿ ಮೋದಿ ಅವರೇ ಉದ್ಘಾಟಿಸುತ್ತಿದ್ದಾರೆ ಅನ್ನೋದು ಹಲವರಿಗೆ ಹೆಮ್ಮೆಯ ವಿಚಾರವಾಗಿದೆ.
ಮಾರ್ಚ್ 1ರಿಂದ ರಾಜ್ಯದಲ್ಲಿ ಬಿಜೆಪಿ ರಥಯಾತ್ರೆ ಶುರು
ಇತ್ತ ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ ಶುರುವಾಗಲಿದ್ದು, ಈ ಕುರಿತು ಸಚಿವ ಸಿಸಿ ಪಾಟೀಲ್, ಎಂಎಲ್ಸಿ ರವಿಕುಮಾರ್ ರಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಗೆಲ್ಲಲು ಮಾಡಬೇಕಾದ ತಂತ್ರಗಳ ಬಗ್ಗೆ ನಾವು ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ತಂಡಗಳಲ್ಲಿ ನಾವು ರಥಯಾತ್ರೆಗೆ ರೆಡಿ ಆಗಿದ್ದೇವೆ. ನಾಲ್ಕು ರಥಯಾತ್ರೆಗಳನ್ನು ಮಾಡಿ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರ ಮೂಲಕ ರಥಯಾತ್ರೆ ಉದ್ಘಾಟನೆ ಆಗಲಿದ್ದು, ಮೊದಲ ರಥಯಾತ್ರೆ, ಜೆಪಿ ನಡ್ಡಾ ರಿಂದ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ