ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತುಮಕೂರಿನಲ್ಲಿ (Tumakuru) ಭರ್ಜರಿ ಪ್ರಚಾರ ನಡೆಸಿದರು. ಜೈ ಬಜರಂಗ ಬಲಿ ಎಂದು ಮಾತು ಆರಂಭಿಸಿದ ಮೋದಿ ಅವರು, ಕಲ್ಪತರು ನಾಡಿನ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ (Kannada) ಭಾಷಣ ಶುರು ಮಾಡಿದರು. ಅಲ್ಲದೆ, ಬಿಜೆಪಿ (BJP) ಸರ್ಕಾರ ಪೂರ್ಣ ಬಹುಮತದಿಂದ ಗೆಲುವುದು ನಿಶ್ಚಯವಾಗಿದೆ. ನಾನು ರೋಡ್ ಶೋ ಮೂಲಕ ಬಂದೆ, ಜನರ ಘೋಷಣೆ, ಉತ್ಸಾಹ ನೋಡಿದೆ. ಆಂಜನೇಯನ ಬಗ್ಗೆ ಕುವೆಂಪು (Kuvempu) ಬರೆದ ಕವಿತೆ ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ (Congress) ನಿಂದ ಜೈ ಬಜರಂಗಿ ಎನ್ನೋದು ಕಷ್ಟ ಆಗಿದೆ. ಕಾಂಗ್ರೆಸ್ ತುಷ್ಟೀಕರಣದ ಗುಲಾಮಿ ಆಗಿದೆ ಎಂದು ಟೀಕೆ ಮಾಡಿದರು.
ಕಾಂಗ್ರೆಸ್ ಜೆಡಿಎಸ್ ಅತಿ ಹೆಚ್ಚು ಲೂಟಿ ಮಾಡಿದೆ
ತುಮಕೂರು ಸಿದ್ಧಗಂಗಾ ಮಠ ನೆನದ ಮೋದಿ ಅವರು, ಅನ್ನ ,ಅಕ್ಷರ ಆರೋಗ್ಯ ನೀಡಿದೆ. ಅನ್ನ ಅಕ್ಷರ ಆರೋಗ್ಯ ಅಭಿವೃದ್ಧಿ ಆದಾಯ ಬಿಜೆಪಿ ಸರ್ಕಾರ ಮಾಡಲಿದೆ. ಕಾಂಗ್ರೆಸ್- ಜೆಡಿಎಸ್ ಅತಿ ಹೆಚ್ಚು ಲೂಟಿ ಮಾಡಿವೆ. ಕಾಂಗ್ರೆಸ್ ಜೆಡಿಎಸ್ ಅತಿ ಹೆಚ್ಚು ಲೂಟಿ ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 18 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗಿದೆ.
ತುಮಕೂರಿನ 3 ಲಕ್ಷ ರೈತರಿಗೆ ಇದರ ಲಾಭ ಆಗಿದೆ. ಐವತ್ತು ರೂಪಾಯಿಗೆ ಯೂರಿಯಾ ಖರೀದಿ ಮಾಡಿ ಐದು ರೂಪಾಯಿಗೆ ರೈತರಿಗೆ ನೀಡುತ್ತಿದ್ದೇವೆ. ಅಂಗಡಿ, ಗಾಡಿ, ಮನೆ ಎಲ್ಲಾವೂ ಪುರುಷನ ಹೆಸರಲ್ಲಿ ಇತ್ತು. ಮೋದಿ ಅದನ್ನು ಬದಲಾಯಿಸಿದ್ದಾರೆ, ಮಹಿಳೆ ಹೆಸರಿಗೆ ಏನು ಇರಲಿಲ್ಲ ಇದು ಸರಿಯಾ? ಈಗ 3 ಕೋಟಿ ಮನೆಯನ್ನು ಮಹಿಳೆಯರಿಗೆ ನೀಡಿದ್ದೇವೆ. ಈಗ ತಾಯಂದಿರು ಇದರಿಂದ ಲಕ್ಷಪತಿ ಆಗಿದ್ದಾರೆ.
ಬಿಜೆಪಿ ಸರ್ಕಾರ ಇಷ್ಟೆಲ್ಲಾ ಮಾಡುತ್ತಿದೆ, ಆದರೆ ಕಾಂಗ್ರೆಸ್ ಹಳ್ಳಿಯ ಮಕ್ಕಳನ್ನು ದುಷ್ಮನ್ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಮಾಡಿರುವ NEPಯನ್ನು ಕಾಂಗ್ರೆಸ್ ತೆಗೆಯುತ್ತೆ ಎಂದಿದೆ. ಕಸ್ತೂರಿ ರಂಗನ್ ಎಲ್ಲಾ ಸೇರಿ ಮಾಡಿರುವ NEP ಶಿಕ್ಷಣ ನೀತಿ ಅನೇಕ ತಜ್ಞರ ಅಭಿಪ್ರಾಯ ಪಡೆದು NEP ಮಾಡಲಾಗಿದೆ. NEPಯಲ್ಲಿ ಮಾತೃ ಭಾಷೆ ಇದೆ. ನಾವು ಅಧಿಕಾರಕ್ಕೆ ಬಂದರೆ ನಿಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ನಾನು ಅವರಿಗೆ ಕೇಳ್ತೇನೆ, ಬಡವರ ಮಕ್ಕಳು ಇಂಗ್ಲೀಷ್ ಶಾಲೆಗೆ ಹೋಗೋಕೆ ಆಗದವರು, ಈ ದೇಶದ ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬಾರದಾ? ಅವರ ಭವಿಷ್ಯ ಉಜ್ವಲ ಆಗಬಾರದಾ? ಕಾಂಗ್ರೆಸ್ ಬಡವರ ಮಕ್ಕಳಿಗೆ ಡಾಕ್ಟರ್ ಆಗದಂತೆ ಮಾಡಲು ಶಿಕ್ಷೆ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ