ಚನ್ನಪಟ್ಟಣ: ಕರ್ನಾಟಕದಲ್ಲಿ (Karnataka) ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಅಬ್ಬರದ ಪ್ರಚಾರ ಮುಂದುವರೆದಿದ್ದು, ಕೋಲಾರದಲ್ಲಿ (Kolar) ಪ್ರಚಾರದ ನಡೆಸಿದ ಬಳಿಕ ಚನ್ನಪಟ್ಟಣದಲ್ಲಿ ಮೋದಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ ಮೋದಿ, ಕರ್ನಾಟಕದಲ್ಲಿ ಬಹುಮತದ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಶ್ರೀರಾಮ ಜನಿಸಿದ ರಾಮನಗರ (Ramanagara) ಜಿಲ್ಲೆಯ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಶುರು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸಿದ್ದಗಂಗಾ ಮಠ, ಆದಿ ಚುಂಚನಗಿರಿ ಸ್ವಾಮೀಜಿ ಜನ್ಮ ಇದೇ ಸ್ಥಳದಲ್ಲಿ ಆಗಿದೆ ಎಂದು ಎಲ್ಲಾ ಸಾಧು ಸಂತರಿಗೂ ಸ್ಮರಿಸಿ ನಮಸ್ಕರಿಸ್ತೇನೆ ಎಂದು ಹೇಳಿದರು.
ದೇಶದಲ್ಲಿ ಕರ್ನಾಟಕವನ್ನು ನಂಬರ್ ಮಾಡಲು ಈ ಚುನಾವಣೆ ನಡೆಯುತ್ತಿದೆ. ಮುಂದಿನ 25 ವರ್ಷ ಕರ್ನಾಟಕ ವಿಕಾಸ ನಿರ್ಧರಿಸುವ ಚುನಾವಣೆ ಇದಾಗಿದ್ದು, ಈ ಸಂಕಲ್ಪವನ್ನು ಬಿಜೆಪಿ ಮಾತ್ರ ಮಾಡಲಿದೆ. ಕಾಂಗ್ರೆಸ್ ಮತ್ತು ಪಕ್ಷಗಳಿಗೆ ಕರ್ನಾಟಕ ಒಂದು ಎಟಿಎಂ ಮಾತ್ರ, ದೀರ್ಘ ಸಮಯ ಇಲ್ಲಿ ಅಸ್ಥಿರತೆಯ ನಾಟಕ ನಡೆದಿದೆ. ಅಸ್ಥಿರ ಸರ್ಕಾರದಲ್ಲಿ ಅಭಿವೃದ್ಧಿ ಹೆಸರಲ್ಲಿ ಲೂಟಿ ನಡೆಯುತ್ತೆ.
ಒಳಗಿಂದ ಕಾಂಗ್ರೆಸ್- ಜೆಡಿಎಸ್ ಎರಡೂ ಒಂದೇ, ಎರಡೂ ಪರಿವಾರವಾದ ಪಕ್ಷಗಳು. ಜೆಡಿಎಸ್ ಘೋಷಣೆ ಮಾಡಿ ಹೇಳುತ್ತೆ, 15-20 ಸೀಟ್ ಸಿಕ್ಕಿದ್ರೆ ಕಿಂಗ್ ಮೇಕರ್ ಆಗೋದಾಗಿ ಹೇಳುತ್ತೆ. ಜೆಡಿಎಸ್ಗೆ ಕೊಡುವ ಒಂದು ಒಂದು ವೋಟು ಕಾಂಗ್ರೆಸ್ ಖಾತೆಗೆ ಹೋಗುತ್ತೆ. ಇದರ ಪರಿಣಾಮ ಮತ್ತೆ ರಾಜ್ಯದಲ್ಲಿ ಅಸ್ಥಿರ ಸರ್ಕಾರ ಬರಬಹುದು. ಹೀಗಾಗಿ ಈ ಬಾರಿ ಬಿಜೆಪಿ ಸರ್ಕಾರ ತನ್ನಿ ಎಂದು ಮೋದಿ ಮನವಿ ಮಾಡಿದರು.
ಇದನ್ನೂ ಓದಿ: Crime News: ಕೈ ಹಿಂದಕ್ಕೆ ಕಟ್ಟಿ, ನೇಣು ಬಿಗಿದು ಕೊಲೆ! ಬೆಂಗಳೂರಿನಲ್ಲಿ ತಾಯಿ-ಮಗಳ ಡಬಲ್ ಮರ್ಡರ್
ಕಾಂಗ್ರೆಸ್ ಪಕ್ಷಕ್ಕೆ ಸ್ವತಃ ವಾರಂಟಿ ಮುಗಿದಿದೆ, ಹೀಗಾಗಿ ಅದರ ಎಲ್ಲಾ ಸುಳ್ಳು ಗ್ಯಾರೆಂಟಿ ನೀಡುತ್ತಿದೆ. ಹಿಮಾಚಲ ಪ್ರದೇಶದಲ್ಲೂ ಇವೇ ಗ್ಯಾರೆಂಟಿ ಕೊಟ್ಟಿದ್ದರು. ಅಲ್ಲಿ ಸರ್ಕಾರ ಬಂದಾಗ ಗ್ಯಾರೆಂಟಿ ಈಡೇರಿಸಲಿಲ್ಲ. ಹಿಮಾಚಲ ಪ್ರದೇಶದ ಸಹೋದರಿಯರು ಒಂದೂವರೆ ಸಾವಿರ ರೂಪಾಯಿ ಗ್ಯಾರೆಂಟಿಗಾಗಿ ಕಾಯುತ್ತಿದ್ದಾರೆ.
ಅಲ್ಲಿನ ಸಹೋದರಿಯರಿಗೆ ಕಾಂಗ್ರೆಸ್ ವಿಶ್ವಾಸ ದ್ರೋಹ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಮೊದಲ ಸಂಪುಟದಲ್ಲಿ ಡೀಸೆಲ್ ದರ ಹೆಚ್ಚಿಸಿದ್ದರೂ, ಬಿಜೆಪಿ ಜನಪರ ಯೋಜನೆಗಳನ್ನು ರದ್ದು ಮಾಡಿದ್ದರು. ಇದೇ ಕಾಂಗ್ರೆಸ್- ಮುಖವಾಡ ಎಂದು ವಾಗ್ದಾಳಿ ನಡೆಸಿದರು.
ರಾಮನಗರದ ಯುವಕರಿಗೆ ಇದರಡಿ 3 ಸಾವಿರ ಕೋಟಿ ರೂಪಾಯಿ ಫಲ ದೊರೆತಿದೆ. ಕಾಂಗ್ರೆಸ್ ಈ ಪರಂಪರೆಯ ಉದ್ಯೋಗವನ್ನೂ ಹಾಳು ಮಾಡಿತು, ಕಮ್ಮಿ ದರದ ಕಳಪೆ ವಿದೇಶಿ ಗೊಂಬೆಗಳನ್ನು ಮಾರುಕಟ್ಟೆಗೆ ಬರುವಂತೆ ಮಾಡಿದ್ದೇ ಕಾಂಗ್ರೆಸ್, ಮನ್ ಕಿ ಬಾತ್ ನಲ್ಲಿ ಇಲ್ಲಿನ ಗೊಂಬೆಗಳ ಬಗ್ಗೆ ಮಾತಾಡಿದ್ದೆ. ಭಾರತದ ಗೊಂಬೆಗಳನ್ನು ಖರೀದಿಲು ನಾವು ಪ್ರೋತ್ಸಾಹ ನೀಡಿದ್ದೆವು. ಇದುವರೆಗೂ 1,000 ಕೋಟಿ ರೂಪಾಯಿ ಮೌಲ್ಯದ ಗೊಂಬೆಗಳ ರಪ್ತು ಆಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ