• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Elections: ಇಂದು ರಾಜ್ಯದಲ್ಲಿ ಧೂಳೆಬ್ಬಿಸಲಿದೆ ‘ನಮೋ’ ಸುನಾಮಿ; ಬೆಂಗಳೂರಲ್ಲಿ ಮೋದಿ ರ್‍ಯಾಲಿ, 5 ಕ್ಷೇತ್ರದಲ್ಲಿ ಮತಬೇಟೆ!

Karnataka Elections: ಇಂದು ರಾಜ್ಯದಲ್ಲಿ ಧೂಳೆಬ್ಬಿಸಲಿದೆ ‘ನಮೋ’ ಸುನಾಮಿ; ಬೆಂಗಳೂರಲ್ಲಿ ಮೋದಿ ರ್‍ಯಾಲಿ, 5 ಕ್ಷೇತ್ರದಲ್ಲಿ ಮತಬೇಟೆ!

ಪ್ರಧಾನಿ ಮೋದಿ ರೋಡ್​ ಶೋ

ಪ್ರಧಾನಿ ಮೋದಿ ರೋಡ್​ ಶೋ

ಮೋದಿ ಆಗಮನದ ಹಿನ್ನೆಲೆಯಲ್ಲಿ ಹುಮ್ನಾಬಾದ್​​ನಲ್ಲಿ ಎಸ್​ಪಿಜಿ ಟೀಂ ಭದ್ರತೆ ಪರಿಶೀಲನೆ ನಡೆಸಿದೆ. ಕುಡಚಿಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್​​ ಆಮಂತ್ರಣ ಪತ್ರಿಕೆ ಮುದ್ರಿಸಿ ಮೋದಿ ಕಾರ್ಯಕ್ರಮಕ್ಕೆ ಬನ್ನಿ ಅಂತ ಮನೆಮನೆಗೂ ಹಂಚಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಪ್ರಧಾನಿ ಮೋದಿ (PM Modi) ಬಿಜೆಪಿ ಪಾಲಿಗೆ ಪ್ರತಿದಿನವೂ ಆಪ್ತರಕ್ಷಕ. ಕರ್ನಾಟಕ (Karnataka) ಬಿಜೆಪಿ ನಾಯಕರ ಪಾಲಿಗೆ ವಿಶ್ವನಾಯಕ. ಎಲೆಕ್ಷನ್​ ಟೈಂಗೂ ಇದೇ ಅಗ್ರನಾಯಕನ್ನ ಕರೆಸಿ ಮತಬೇಟೆ ನಡೆಸುತ್ತಿದ್ದು, ಇಂದು ರಾಜ್ಯದಲ್ಲಿ ಮೋದಿ ಕೇಸರಿ ಧೂಳೆಬ್ಬಿಸಲು ಬರುತ್ತಿದ್ದಾರೆ. ಇಂದು ಪ್ರಧಾನಿ ಮೋದಿ ಹುಮ್ನಾಬಾದ್ (Humnabad), ವಿಜಯಪುರ, ಕುಡಚಿ, ಬೆಂಗಳೂರು (Bengaluru) ಉತ್ತರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ರಾಜ್ಯದ 3 ಕಡೆ ಸಭೆ ನಡೆಸಲಿರೋ ಮೋದಿ ಇಂದು ಸಂಜೆ 6 ಗಂಟೆಗೆ ರಾಜ್ಯ ರಾಜಧಾನಿಯಲ್ಲಿ ಮೆಗಾ ರೋಡ್ ಶೋ (Mega Road Show) ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹುಮ್ನಾಬಾದ್​​ ಸಮಾವೇಶ ನಡೆಯಲಿದ್ದು, ಇಲ್ಲಿ ಬೀದರ್ (Bidar) ಜಿಲ್ಲೆಯ ಒಟ್ಟು 6 ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸದ್ಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್​​ 3, ಬಿಜೆಪಿ 2, ಜೆಡಿಎಸ್​ ಪಕ್ಷದ ಓರ್ವ ಶಾಸಕರಿದ್ದಾರೆ.


ಬೀದರ್​, ಕುಡಚಿ ವಿಜಯಪುರದಲ್ಲಿ ಮೋದಿ ಹವಾ!


ಹುಮ್ನಾಬಾದ್​​ ಸಮಾವೇಶ ಬಳಿಕ ಪ್ರಧಾನಿ ಮೋದಿ ವಿಜಯಪುರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ವಿಜಯಪುರದ ಒಟ್ಟು 8 ಕ್ಷೇತ್ರಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಎಂಟು ಕ್ಷೇತ್ರಗಳಲ್ಲಿ 2018ರಲ್ಲಿ ಬಿಜೆಪಿ 3, ಕಾಂಗ್ರೆಸ್​ 3, ಜೆಡಿಎಸ್​ 2 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಆ ಬಳಿಕ ನಡೆದ ಸಿಂದಗಿ ಬೈ ಎಲೆಕ್ಷನ್ ಗೆದ್ದು ಬಿಜೆಪಿ ಸದ್ಯ 4 ಕ್ಷೇತ್ರ ಉಳಿಸಿಕೊಂಡಿದೆ. ಆ ಬಳಿಕ 2:45ಕ್ಕೆ ಕುಡಚಿ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ.


ಪ್ರಧಾನಿ ಮೋದಿ ರೋಡ್​ ಶೋ


ಬೆಂಗಳೂರಲ್ಲಿ ಮೋದಿ ರ್ಯಾಲಿ, ಖಾಕಿ ಹದ್ದಿನ ಕಣ್ಣು!


ಸಂಜೆ 6:15 ವೇಳೆಗೆ ಬೆಂಗಳೂರಿನ ಗೊಲ್ಲರಹಟ್ಟಿ-ಸುಮನಹಳ್ಳಿ ನಡುವೆ 5.3 ಕಿ.ಮೀ ರೋಡ್ ​ಶೋ ನಡೆಸಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಲಹಂಕ, ಯಶವಂತಪುರ, ದಾಸರಹಳ್ಳಿ ರಾಜರಾಜೇಶ್ವರಿನಗರ, ಮಹಾಲಕ್ಷ್ಮಿಲೇಔಟ್ 5 ಕ್ಷೇತ್ರಗಳ ಕಾರ್ಯಕರ್ತರು ಈ ವೇಳೆ ಹಾಜರಾಗುವ ಸಾಧ್ಯತೆ ಇದೆ. ಇನ್ನು, ದಾಸರಹಳ್ಳಿ ಕ್ಷೇತ್ರ ಹೊರತು ಪಡಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.


5.3 ಕಿ.ಮೀ ರೋಡ್ ​ಶೋ, 5 ಕ್ಷೇತ್ರ ಮತಬೇಟೆ!


ಮಾಗಡಿ ರಸ್ತೆ ಬ್ಯಾಡರಹಳ್ಳಿ ಬಳಿಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿ ಜಂಕ್ಷನ್ ತನಕ ರೋಡ್​​ ಶೋ ನಡೆಯಲಿದ್ದು, ಮೋದಿ ಚುನಾವಣಾ ರೋಡ್​ ಶೋಗೆ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ. ಮೋದಿ ನಾಳೆ ಸಂಜೆ 5.25ಕ್ಕೆ ಆಗಮಿಸಲಿದ್ದು, ಸಂಜೆ 6 ಗಂಟೆಗೆ ನೈಸ್ ರಸ್ತೆ ಜಂಕ್ಷನ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಸುಮನಹಳ್ಳಿ ಜಂಕ್ಷನ್ ತನಕ ಸುಮಾರು 5.3 ಕಿ. ಮೀ. ರೋಡ್​ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 3 ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಮೋದಿ ರೋಡ್ ಶೋ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಮಾಗಡಿ ರಸ್ತೆ ಬಂದ್ ಆಗಲಿದ್ದು, ಆ ನಂತರ ಪೊಲೀಸರು ರಸ್ತೆಯನ್ನ ತಮ್ಮ ಸುಪರ್ದಿಗೆ ಪಡೆದು ಭದ್ರತೆ ಕಲ್ಪಿಸಲಿದ್ದಾರೆ. ಸುಮಾರು 5.3 ಕಿಮೀ ರ್ಯಾಲಿ ಬಳಿಕ ಪ್ರಧಾನಿ ಮೋದಿ ಸುಮನಹಳ್ಳಿಯಿಂದ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಆಗಮಿಸಲಿದ್ದಾರೆ.


ಇನ್ನು, ಮೋದಿ ಆಗಮನದ ಹಿನ್ನೆಲೆಯಲ್ಲಿ ಹುಮ್ನಾಬಾದ್​​ನಲ್ಲಿ ಎಸ್​ಪಿಜಿ ಟೀಂ ಭದ್ರತೆ ಪರಿಶೀಲನೆ ನಡೆಸಿದೆ. ಕುಡಚಿಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್​​ ಆಮಂತ್ರಣ ಪತ್ರಿಕೆ ಮುದ್ರಿಸಿ ಮೋದಿ ಕಾರ್ಯಕ್ರಮಕ್ಕೆ ಬನ್ನಿ ಅಂತ ಮನೆಮನೆಗೂ ಹಂಚಿದ್ದಾರೆ. ವಿಜಯಪುರದ ಸೈನಿಕ್​ ಶಾಲೆಯಲ್ಲೂ ಸಮಾವೇಶಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

First published: