• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • PM Modi: ಪದ್ಮಶ್ರೀ ಪುರಸ್ಕೃತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮೋದಿ; ಪ್ರಧಾನಿಗಳನ್ನ ಕಂಡು ಖುಷಿಯಿಂದ ಕಣ್ಣೀರಿಟ್ಟ ವೃದ್ಧೆ

PM Modi: ಪದ್ಮಶ್ರೀ ಪುರಸ್ಕೃತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮೋದಿ; ಪ್ರಧಾನಿಗಳನ್ನ ಕಂಡು ಖುಷಿಯಿಂದ ಕಣ್ಣೀರಿಟ್ಟ ವೃದ್ಧೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ (Election) ಕಾವು ರಂಗೇರುತ್ತಿದ್ದು ಪ್ರಚಾರವೂ ಅಬ್ಬರದಿಂದ ಸಾಗುತ್ತಿದೆ. ಪ್ರಧಾನಿ ಮೋದಿ (PM Modi) ಇಂದು ಬೆಳಗಾವಿಯ (Belagavi) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು. ಬೈಲಹೊಂಗಲಕ್ಕೆ ಆಗಮಿಸಿದ್ದ ಪ್ರಧಾನಿ ನೋಡಲು ಲಕ್ಷಾಂತರ ಜನ ರಸ್ತೆಯುದ್ದಕ್ಕೂ ನಿಂತು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಪ್ರಧಾನಿಗೆ ಚೆನ್ನಮ್ಮ ಪುತ್ಥಳಿ ನೀಡಿ, ಕಂಬಳಿ ಹೊದಿಸಿ ಗೌರವ ಅರ್ಪಿಸಲಾಯಿತು. ಭಜರಂಗಿ ನಾಮಸ್ಮರಣೆ ಮೂಲಕ ನಮೋ ಕನ್ನಡದಲ್ಲಿ ಮಾತು ಆರಂಭಿಸಿದರು. ಅಂಕೋಲದಲ್ಲಿ (Ankola ) ಪ್ರಧಾನಿ ಮೋದಿ ಅಬ್ಬರ ಪ್ರಚಾರ ನಡೆಸಿ ಬಿಜೆಪಿಗೆ (BJP) ಬಹುಮತ ನೀಡಿ ಸ್ಥಿರ ಸರ್ಕಾರ (Govt) ನೀಡಿ ಎಂದು ಮನವಿ ಮಾಡಿದರು. ಈ ವೇಳೆ ಮಾತಾನಾಡಿ ಕಾಂಗ್ರೆಸ್​ನದ್ದು ಶಾರ್ಟ್​ಕಟ್​ ರಾಜಕೀಯ, ಜಾತಿ ಜಾತಿಗಳನ್ನ ಎತ್ತಿಕಟ್ತಾರೆ ಎಂತಾ ಕಿಡಿಕಾರಿದರು.


ಮೋದಿಯನ್ನ ಭೇಟಿ ಮಾಡಿದ ದೇಹದಾ‌ನ ಮಾಡಿದ್ದ ಶಿಲ್ಪಾ ಸಾಲ್ಯಾನ್​


ಪುತ್ತೂರಿನಲ್ಲೂ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ಮಾಡಿದರು. ಪ್ರಧಾನಿ ನೋಡಲು ಸಾವಿರಾರು ಜನ ಮುಗಿಬಿದ್ದಿದ್ದರು. ಈ ವೇಳೆ ಮಹಿಳಾಮಣಿಗಳು ಮೋದಿಯನ್ನು ನೋಡಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.


ಮೋದಿಯನ್ನು ಹತ್ತಿರದಿಂದ ನೋಡಿದ್ದೇ ನಮ್ಮ ಪುಣ್ಯ. ಮೋದಿ ಜನ್ಮದಿನದ ಕಾರಣಕ್ಕೆ ದೇಹದಾ‌ನ ಮಾಡಿದ್ದ ಶಿಲ್ಪಾ ಸಾಲ್ಯಾನ್​ನಿಂದ ಮೋದಿಯನ್ನ ಭೇಟಿಯಾಗಿದ್ದು, ಇವತ್ತಿಗೆ ಪ್ರಧಾನಿ ನೋಡುವ ಆಸೆ ತೀರಿತು. ಜನ್ಮ ಸಾರ್ಥಕವಾಯಿತು ಎಂದು ಭಾವುಕರಾದರು.


ಇದನ್ನೂ ಓದಿ: Kichcha Sudeepa: ಬಿಜೆಪಿ ಅಭ್ಯರ್ಥಿಗೆ ಅಚ್ಚರಿಯ ಸಲಹೆ ಕೊಟ್ಟ ಸುದೀಪ್​​; ಕಿಚ್ಚನ ಮಾತಿಗೆ ಅಭಿಮಾನಿಗಳು ಫಿದಾ!


ಖುಷಿಯಿಂದ ಕಣ್ಣೀರಿಟ್ಟ ವೃದ್ಧೆ


ಇತ್ತ ಮೂಲ್ಕಿಯಿಂದ ಅಂಕೋಲಕ್ಕೆ ಮೋದಿಯಿದ್ದ ಹೆಲಿಕಾಪ್ಟರ್ ಹೊರಟಾಗ ಪ್ರಧಾನಿ ಮೋದಿಯವರನ್ನ ನೋಡಿ ವೃದ್ಧೆಯೊಬ್ಬಳ ಖುಷಿಯಿಂದ ಕಣ್ಣೀರಿಟ್ಟರು. ಅಂಕೋಲ ಸಮಾವೇಶದಲ್ಲಿ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ.


ಅಂಕೋಲದ ಸಮಾವೇಶಕ್ಕೆ ಬಳಿಕ ಪದ್ಮಶ್ರೀ ಪುರಸ್ಕೃತರಾದ ತುಳಸಿಗೌಡ ಮತ್ತು ಸುಕ್ರಿಬೊಮ್ಮನಗೌಡ ಅವರ ಭೇಟಿಯಾದರು. ಇಬ್ಬರ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದರು.
ಇಬ್ಬರೂ ಸಾಧಕಿಯರನ್ನ ಭೇಟಿಯಾದ ಮೋದಿ


ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ. ಇವರ ಈ ಸೇವೆಗೆ ಪದ್ಮಶ್ರೀ ಪುರಸ್ಕಾರ ಸಂದಿದೆ.

top videos


  ನಾಡೋಜ ಸುಕ್ರಿ ಬೊಮ್ಮಗೌಡ ಜಾನಪದ ಗಾಯಕಿ. ಸುಕ್ರಜ್ಜಿಗೆ ಸುಮಾರು 5 ಸಾವಿರ ಹಾಲಕ್ಕಿ ಹಾಡುಗಳು ಕಂಠಪಾಟವಾಗಿವೆ. ಈ ಇಬ್ಬರೂ ಸಾಧಕಿಯರನ್ನ ಭೇಟಿಯಾಗಿದ್ದ ಮೋದಿ ಆಶೀರ್ವಾದ ಪಡೆದು ಕುಶಲೋಪರಿ ವಿಚಾರಿಸಿದರು.

  First published: