ಬಾಗಲಕೋಟೆ: ಬಾದಾಮಿಯ (Badami) ಬನಶಂಕರಿ ಲೇಔಟ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ (Narendra Modi) ಅವರು, ತಮ್ಮ ಭಾಷಣವನ್ನು ಬಜರಂಗ ಬಲಿಗೆ ಜೈಕಾರ ಹಾಕುವ ಮೂಲಕ ಆರಂಭ ಮಾಡಿದರು. ಕರ್ನಾಟಕದಲ್ಲಿ (Karnataka) ನಿಮ್ಮ ಮೂಲಕ ಬಿಜೆಪಿಗೆ (BJP) ಇಷ್ಟೊಂದು ಆಶೀರ್ವಾದ ಪಡೆದುಕೊಳ್ಳುವುದು ಸಂತೋಷ ತಂದಿದೆ. ಇಂದು ಬೆಳಗ್ಗೆ ಬೆಂಗಳೂರಿನಲ್ಲಿ (Bengaluru) ಜನತಾ ಜನಾರ್ದನ ದರ್ಶನಕ್ಕೆ ಹೋಗಿದ್ದೆ, ಅಲ್ಲಿನ ಜನರು ನಿಮ್ಮಂತೆ ಪ್ರೀತಿ ತೋರಿಸಿದರು. ಚುನಾವಣೆಯ (Election) ಸಂಪೂರ್ಣ ಕಂಟ್ರೋಲ್ ಜನರ ಕೈಯಲ್ಲಿದೆ. ಜನರು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು. ಕರ್ನಾಟಕವನ್ನು (Karnataka) ನಂಬರ್ ಒನ್ ಮಾಡಲು ಬಿಜೆಪಿಗೆ ಮತ ನೀಡಿ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಅವರು, ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಿಮ್ಮನ್ನು ಬಿಟ್ಟು ಓಡಿ ಹೋಗಿದ್ದಾರೆ. ಅವರು ಏನಾದರೂ ಮತ್ತೆ ಇಲ್ಲಿಗೆ ಬಂದರೆ ಒಂದು ಪ್ರಶ್ನೆ ಕೇಳಿ, ಕಳೆದ 3.5 ವರ್ಷಗಳಲ್ಲಿ ಬಾದಾಮಿಯಲ್ಲಿ ಅಭಿವೃದ್ಧಿ ಆಗಿದೆ ಎಂದು ಹೇಳುವ ಸಿದ್ದರಾಮಯ್ಯ ಡಬಲ್ ಎಂಜಿನ್ ಸರ್ಕಾರದ ಕೊಡುಗೆ, ಸಫಲತೆಯನ್ನು ಒಪ್ಪಿದ್ದಾರೆ. ಇದಕ್ಕಿಂತ ಮೊದಲು ಬಾದಾಮಿಯ ಜನತೆ ಮೂಲಭೂತ ಸೌಕರ್ಯಗಳಿಂದ ಯಾಕೆ ವಂಚಿತರಾಗಿದ್ದರು ಎಂದು ನೀವು ಅವರನ್ನು ಕೇಳಬೇಕು. ಪ್ರಶ್ನೆ ಮಾಡಿ ಎಂದು ಹೇಳಿದರು.
ಬಾಗಲಕೋಟೆಯಲ್ಲಿ ನಾವು ಮನೆ ಮನೆಗೂ ನಲ್ಲಿ ಮೂಲಕ ನೀರು ಕೊಟ್ಟಿದ್ದೇವೆ. ಇದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ಜಿಲ್ಲೆಯ 25 ಸಾವಿರ ಬಡಕುಟುಂಬಗಳಿಗೆ ಶಾಶ್ವತ ಮನೆಗಳನ್ನು ನೀಡಿದ್ದೇವೆ. 6 ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಜೀವನ ವಿಮೆಯ ಲಾಭವನ್ನು ನೀಡಿದ್ದೇವೆ. 1 ಲಕ್ಷ ಕುಟುಂಬಳಿಗೆ ಜನ್ ದನ್ ಯೋಜನೆ ನೀಡಿದ್ದೇವೆ. ಇಂತಹ ಯಾವುದೇ ಯೋಜನೆಗಳು ಕಾಂಗ್ರೆಸ್ ಸರ್ಕಾರ ನೀಡಿಲ್ಲ ಎಂದು ಹೇಳಿದರು.
ಆ ಬಳಿಕ ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿಗಳು, ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷ ಕಾಂಗ್ರೆಸ್, ಕಾಂಗ್ರೆಸ್ ಅಂದರೆ 85 ಪರ್ಸೆಂಟ್ ಕಮಿಷನ್ ಪಾರ್ಟಿ. ರೈತರ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಈಗ ಜನರ ಕಣ್ಣಿಗೆ ಮರೆಮಾಚುವ ಕೆಲಸವನ್ನು ಮಾಡುತ್ತಿದೆ.
ಕಾಂಗ್ರೆಸ್ ಈವರೆಗೂ ಅವರು ಕೊಟ್ಟ ಮಾತನ್ನು ಈಡೇರಿಸಿಲ್ಲ. ರೈತರನ್ನು ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಕಡೆಗಣಿಸಿದೆ. ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್ ನೋಡಿ ಎಷ್ಟು ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಅಂತ. ಹಿಮಾಚಲ ಸರ್ಕಾರ ನೋಡಿದರೆ ನಿಮಗೆ ಅರ್ಥ ಆಗುತ್ತದೆ, ಅಲ್ಲಿ ಸರ್ಕಾರ ಯಾವುದೇ ಗ್ಯಾರೆಂಟಿಯನ್ನು ಜಾರಿ ಮಾಡಿಲ್ಲ, 50 ವರ್ಷಗಳ ಹಿಂದೆ ಗರಿಬಿ ಹಠವೋ ಅಂತ ಮೊದಲ ಗ್ಯಾರೆಂಟಿ ಕೊಟ್ಟಿತ್ತು, ಇದುವರೆಗೂ ದೇಶದಲ್ಲಿ ಬಡತನ ನಿರ್ಮೂಲನೆ ಆಗಿದೆಯಾ ಅಂತ ಎಂದು ತಮ್ಮ ಭಾಷಣದ ಉದ್ದಕ್ಕೂ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ