ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi ) ಅವರು ಇಂದು ಮೈಸೂರಿನಲ್ಲಿ (Mysuru) ಭರ್ಜರಿ ರೋಡ್ ಶೋ ನಡೆಸಿದ್ದು, ಈ ವೇಳೆ ಭದ್ರತಾ ಲೋಪ ಎದುರಾಗಿದೆ. ಮೋದಿ ಅವರು ತೆರೆದ ವಾಹನದಲ್ಲಿ ತೆರಳುತ್ತಿದ್ದ ವೇಳೆ ಜನರ ಕಡೆಯಿಂದ ತೂರಿ ಬಂದ ಮೊಬೈಲ್ (Mobile) ವಾಹನ ಮೇಲೆ ಬಿದ್ದಿದೆ. ಪ್ರಧಾನಿ ಮೋದಿ ಅವರು ಜನರತ್ತ ಕೈ ಬೀಸುತ್ತಿದ್ದ ಸಂದರ್ಭದಲ್ಲಿ ಜನರು ಪ್ರಧಾನಿಗಳತ್ತ ಹೂ ಎಸೆಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಏಕಾಏಕಿ ಹೂವಿನೊಂದಿಗೆ (Flowers) ಮೊಬೈಲ್ ಕೂಡ ತೂರಿ ಬಂದಿದೆ. ಇದನ್ನು ಮೋದಿ ಅವರು ಗಮನಿಸಿದ್ದು, ಬಳಿಕ ಮೋದಿ ಅವರ ಪಕ್ಕದಲ್ಲೇ ನಿಂತಿದ್ದ ಭದ್ರತಾ ಸಿಬ್ಬಂದಿ (Security Guards) ಮೊಬೈಲ್ ಬಿದಿದ್ದನ್ನು ಗಮನಿಸಿದ್ದಾರೆ.
ಮೈಸೂರಿನ ಕೆಆರ್ ಸರ್ಕಲ್ ಬಳಿಯ ಚಿಕ್ಕ ಗಡಿಯಾರದ ಬಳಿ ಘಟನೆ ನಡೆದಿದ್ದು, ಪ್ರಚಾರ ವಾಹನದ ಮೇಲೆ ಬಿದ್ದ ಮೊಬೈಲ್ ಬಳಿಕ ರಸ್ತೆ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಮೋದಿ ಅವರು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದಾರೆ. ನರೇಂದ್ರ ಮೋದಿ ಹೋಗುತ್ತಿದ್ದ ವಾಹನದ ಮೇಲೆ ಮೊಬೈಲ್ ಎಸೆದ ವಿಚಾರ ಸಂಬಂಧಿಸಿದಂತೆ ಭದ್ರತೆಯಲ್ಲಿದ್ದ ಪೊಲೀಸರಿಗೆ ಟೆನ್ಶನ್ ಶುರುವಾಗಿದೆ. ಯಾರು ಮೊಬೈಲ್ ಎಸೆದರು? ಎಲ್ಲಿಂದ ಮೊಬೈಲ್ ತೂರಿ ಬಂತು? ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ