• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • 2023 Karnataka Elections: ಬೆಂಗಳೂರಿನಲ್ಲಿ ಬಿಜೆಪಿ ಸ್ಟ್ರಾಟಜಿ ಸ್ವಲ್ಪ ಬದಲು, ಮೋದಿ ರೋಡ್‌ ಶೋ 2 ದಿನಕ್ಕೆ ವಿಸ್ತರಣೆ

2023 Karnataka Elections: ಬೆಂಗಳೂರಿನಲ್ಲಿ ಬಿಜೆಪಿ ಸ್ಟ್ರಾಟಜಿ ಸ್ವಲ್ಪ ಬದಲು, ಮೋದಿ ರೋಡ್‌ ಶೋ 2 ದಿನಕ್ಕೆ ವಿಸ್ತರಣೆ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಶನಿವಾರ ಬೆಳಗ್ಗೆ ನಿಗದಿಯಂತೆ ಮೋದಿ ರೋಡ್ ಶೋ ನಡೆಯಲಿದ್ದು, ಶನಿವಾರ ಸಂಜೆ ಇದ್ದ ರೋಡ್‌ ಶೋವನ್ನು ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಗುರಿಯೊಂದಿಗೆ ಬಿಜೆಪಿ (BJP) ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯದ ಜನರ ಮನಗೆಲ್ಲಲು ಬಿಜೆಪಿ ಹಲವು ತಂತ್ರಗಳನ್ನು ಮಾಡುತ್ತಿದೆ. ಇದರ ಭಾಗವಾಗಿಯೇ ಈಗಾಗಲೇ ಪ್ರಧಾನಿ ಮೋದಿ (PM Modi) ಅವರು ಎರಡು ದಿನ ಭರ್ಜರಿ ಪ್ರಚಾರ ನಡೆಸಿದ್ದರು. ಇನ್ನು ಎರಡು ದಿನಗಳ ಕಾಲ ರಾಜ್ಯದಲ್ಲಿ ಮೋದಿ ಅವರ ಪ್ರಚಾರ ನಡೆಯಲಿದ್ದು, ಇದೇ ಶನಿವಾರ ಬೆಂಗಳೂರಿನಲ್ಲಿ (Bengaluru) ಮೋದಿ ಪ್ರಚಾರ ನಿಗದಿಯಾಗಿತ್ತು. ಆದರೆ ತಮ್ಮ ಸ್ಟ್ರಾಟೆಜಿಯಲ್ಲಿ ಬಿಜೆಪಿ ಸ್ವಲ್ಪ ಬದಲಾವಣೆ ಮಾಡಿದ್ದು, ಬೆಂಗಳೂರಿನಲ್ಲಿ ಇಂದೇ ದಿನ ಮೋದಿ ಏರ್ಪಡಿಸುವ ಬದಲು ಎರಡು ದಿನಕ್ಕೆ ವಿಸ್ತರಣೆ ಮಾಡಿದೆ.


ಶನಿವಾರ ಸಂಜೆ ಇದ್ದ ರೋಡ್‌ ಶೋ ಭಾನುವಾರಕ್ಕೆ ಶಿಫ್ಟ್


ಹೌದು, ಶನಿವಾರ ನಿಗದಿಯಾಗಿದ್ದ ರೋಡ್​ ಶೋ ಜೊತೆಗೆ ಭಾನುವಾರವೂ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ರೋಡ್​​​ ಶೋ ನಡೆಸಲಿದ್ದಾರೆ. ಶನಿವಾರ ಬೆಳಗ್ಗೆ ನಿಗದಿಯಂತೆ ಮೋದಿ ರೋಡ್ ಶೋ ನಡೆಯಲಿದ್ದು, ಶನಿವಾರ ಸಂಜೆ ಇದ್ದ ರೋಡ್‌ ಶೋವನ್ನು ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: Karnataka Elections: ಕಾಂಗ್ರೆಸ್​​ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ! ಆರ್ ಅಶೋಕ್​ ವಾಗ್ದಾಳಿ


ಶನಿವಾರ 10 ಕಿಮೀ ಮತ್ತು ಭಾನುವಾರ 25 ಕಿಮೀ ರೋಡ್​ ಶೋ


ಶನಿವಾರ ಬೆಳಗ್ಗೆ 10 ಕಿ.ಮೀ ರೋಡ್ ಶೋ ನಡೆಯಲಿದ್ದು, ಬೆಂಗಳೂರು ಕೇಂದ್ರ ಭಾಗದಿಂದ ಆರಂಭವಾಗುವ ರ್ಯಾಲಿ ಸಿ.ವಿ ರಾಮನ್ ನಗರ- ಬ್ರಿಗೆಡ್ ರೋಡ್‌ವರೆಗೆ ಸಾಗಲಿದೆ. ಆ ಬಳಿಕ ಭಾನುವಾರ 25.5 ಕಿ.ಮೀ ರೋಡ್‌ಶೋ ನಡೆಯಲಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದವರೆಗೆ ರೋಡ್​ ಸಾಗಲಿದೆ.


ರೋಡ್​​ ಶೋ ಕುರಿತಂತೆ ಶೋಭಾ ಕರಂದ್ಲಾಜೆ ಹೇಳಿಕೆ


ಇನ್ನು, ಮೋದಿ ರೋಡ್ ಶೋ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಮೋದಿಯವರು ಮೇ 6 ಮತ್ತು 7 ರಂದು ಬೆಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ. ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೆ ಇತ್ತು, ಮೋದಿಯವರಿಗೂ ವಿನಂತಿ ಕೂಡ ಮಾಡಿದ್ದೆವು. ಆದರೆ ನಾನು ಬರುವುದರಿಂದ ಟ್ರಾಫಿಕ್ ಜಾಮ್ ಆಗಬಾರದು, ಯಾವುದಕ್ಕಾದರೂ ಒಂದಕ್ಕೆ ಬರುತ್ತೇನೆ ಎಂದಿದ್ದರು.


ಆದರೆ ಈಗ ಎರಡು ಕಡೆಗಳಲ್ಲಿ ರೋಡ್ ಶೋಗೆ ಒಪ್ಪಿಕೊಂಡಿದ್ದಾರೆ. ಮೇ 6 ರಂದು 10 ಕಿ ಮೀ ಮತ್ತು 7 ರಂದು 26 ಕಿ ಮೀ ರೋಡ್ ಶೋ ಮಾಡಲಿದ್ದಾರೆ. ಬೆಂಗಳೂರಿನ ಬೀದಿಯಲ್ಲಿ ಅವರು ಓಡಾಡುತ್ತಾರೆ. ಸುಮಾರು 10 ಲಕ್ಷ ಜನರು ಅವರನ್ನು ನೋಡೋಕೆ ಬರ್ತಾರೆ ಅನ್ನುವ ನಿರೀಕ್ಷೆ ಇರುವುದಾಗಿ ತಿಳಿಸಿದರು.


ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರಿನ ರಾಜಕೀಯ ಇತಿಹಾಸದಲ್ಲಿಯೇ ದೊಡ್ಡ ಕಾರ್ಯಕ್ರಮ ಆಗುತ್ತಿದೆ. ಮೋದಿ ರೋಡ್ ಶೋನಿಂದ ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲಲು ಸಹಕಾರಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


यह ख़बर बिल्कुल अभी आई है और इसे सबसे पहले आप News18Hindi पर पढ़ रहे हैं. जैसे-जैसे जानकारी मिल रही है, हम इसे अपडेट कर रहे हैं. ज्यादा बेहतर एक्सपीरिएंस के लिए आप इस खबर को रीफ्रेश करते रहें, ताकि सभी अपडेट आपको तुरंत मिल सकें. आप हमारे साथ बने रहिए और पाइए हर सही ख़बर, सबसे पहले सिर्फ Hindi.News18.com पर...


यह ख़बर बिल्कुल अभी आई है और इसे सबसे पहले आप News18Hindi पर पढ़ रहे हैं. जैसे-जैसे जानकारी मिल रही है, हम इसे अपडेट कर रहे हैं. ज्यादा बेहतर एक्सपीरिएंस के लिए आप इस खबर को रीफ्रेश करते रहें, ताकि सभी अपडेट आपको तुरंत मिल सकें. आप हमारे साथ बने रहिए और पाइए हर सही ख़बर, सबसे पहले सिर्फ Hindi.News18.com पर...

First published: