ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಇಂದು ಅಭ್ಯರ್ಥಿಗಳು ನಾಮಪತ್ರ (Nomination) ವಾಪಸ್ ಪಡೆಯಲು ಕೊನೇ ದಿನ ಆಗಿತ್ತು. ಬಂಡಾಯ ಎದ್ದವರಲ್ಲಿ ಬಹುತೇಕರು ನಾಮಪತ್ರ ವಾಪಸ್ ಪಡೆದರೇ, ಕೆಲವರು ಬಂಡಾಯ ಮುಂದುವರೆಸಿದ್ದಾರೆ. ರಾಜ್ಯದಲ್ಲಿ (State) ನಾಮಿನೇಷನ್ ವಾಪಾಸ್ ಪಡೆಯುವ ಪ್ರಕ್ರಿಯೆ ಮುಗಿದಿದ್ದು, ಕದನ ಕಣ ಕ್ಲೀಯರ್ ಆಗಿದೆ. ಆದರೆ ಬಿಜೆಪಿ (BJP) ಹಾಗೂ ಕಾಂಗ್ರೆಸ್ಗೆ (Congress) ಕೆಲ ಕ್ಷೇತ್ರಗಳ ಬಗ್ಗೆ ಸಮಾಧಾನವಾದರೆ ಇನ್ನು ಕೆಲ ಕ್ಷೇತ್ರಗಳಲ್ಲಿ ಗೆಲುವು (Win) ಪಡೆಯುವುದು ಟೆನ್ಷನ್ ತಂದೊಡ್ಡಿದೆ.
ಬಿಎಸ್ವೈ ಫೋನ್ ಮಾಡಿದರೂ ಡೋಟ್ ಕೇರ್!
ಹೌದು, ಪುತ್ತೂರಲ್ಲಿ ಅರುಣ್ ಪುತ್ತಿಲ ನಾಮಪತ್ರ ವಾಪಾಸ್ ಪಡೆದಿಲ್ಲ. ಖುದ್ದು ಯಡಿಯೂರಪ್ಪ ಫೋನ್ ಮಾಡಿದರೂ ಡೋಂಟ್ ಕೇರ್ ಎಂದಿದ್ದಾರೆ ಪುತ್ತಿಲ. ಬಂಡಾಯ ಸ್ಪರ್ಧೆ ಫಿಕ್ಸ್ ಆಗಿದೆ. ಹೀಗಾಗಿ ಬಿಜೆಪಿಗೆ ಆಶಾ ತಿಮ್ಮಪ್ಪ ಅವರನ್ನ ಗೆಲ್ಲಿಸುವುದು ದೊಡ್ಡ ಸವಾಲಾಗುವಂತಿದೆ. ಕಾಂಗ್ರೆಸ್ ಅಶೋಕ್ಕುಮಾರ್ ರೈಗೆ ಬಿಜೆಪಿಯ ಮತಗಳು ಇಬ್ಭಾಗವಾಗುವ ಲೆಕ್ಕಾಚಾರವಿದೆ. ಈ ನಡುವೆ ನಾನೇ ಗೆಲ್ಲೋದು ಅಂತಿದ್ದಾರೆ ಅರುಣ್ ಪುತ್ತಿಲ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಕಣದಿಂದ ಹಿಂದೆ ಸರಿದ್ದಿದ್ದು ಜಗದೀಶ್ ಶೆಟ್ಟರ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಧಾರವಾಡ ಗ್ರಾಮೀಣಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಶಮನವಾಗಿದೆ. ಶಾಸಕ ಅಮೃತ ದೇಸಾಯಿಗೆ ಸಡ್ಡು ಹೊಡೆದಿದ್ದ ಹೋರಾಟಗಾರ ಬಸವರಾಜ ಕೊರವರ್ ಸಂಧಾನಕ್ಕೆ ಒಪ್ಪಿದ್ದು, ನಾಮಿನೇಷನ್ ವಾಪಾಸ್ ಪಡೆದಿದ್ದಾರೆ.
ಚಿಕ್ಕಪೇಟೆಯಲ್ಲಿ ಕೈಗೆ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿ ಕಮಲಕ್ಕೆ ಶಾಕ್
ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಕೆಜಿಎಫ್ ಬಾಬು ಪತ್ನಿ ನಾಮಿನೇಷನ್ ವಾಪಸ್ ಪಡೆದಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪಕ್ಷೇತರವಾಗಿ ಸ್ಪರ್ಧಿಸಿರುವ ಕೋಟಿ ಕುಳ ಕೆಜಿಎಫ್ ಬಾಬು ಹವಾನೇ ಕಾಡುತ್ತಿದೆ.
ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಶಾಕ್ ಆಗಿದೆ. ಗುಂಡ್ಲುಪೇಟೆಯಲ್ಲಿ ಎಂ.ಪಿ.ಸುನೀಲ್ ಸ್ಪರ್ಧೆ ಮಾಡಿರುವ ಶಾಸಕ ನಿರಂಜನಕುಮಾರ್‌ಗೆ ತೊಡಕಾಗುತ್ತೆ ಎನ್ನಲಾಗಿದೆ. ಇನ್ನು ಕೊಳ್ಳೇಗಾಲದಲ್ಲಿ ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ವಿರುದ್ಧ ಸೆಟೆದು ನಿಂತಿರುವ ಕಿನಕಹಳ್ಳಿ ರಾಚಯ್ಯ ನಾಮಪತ್ರ ವಾಪಾಸ್ ಪಡೆದಿಲ್ಲ.
ತೇರದಾಳ ಕ್ಷೇತ್ರ ನೋಡಿದರೆ ಪಕ್ಷೇತರ ಅಭ್ಯರ್ಥಿ, ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ನೇಕಾರರ ಮತ ತಪ್ಪುವ ಬಿಜೆಪಿಯ ಆತಂಕ ದೂರವಾಗಿದೆ. ಅರಸೀಕೆರೆಯಲ್ಲಿ ಜೆಡಿಎಸ್ನ ಬಾಣಾವರ ಅಶೋಕ್ ನಾಮಿನೇಷನ್ ವಾಪಾಸ್ ಪಡೆದಿರುದು, ಅಭ್ಯರ್ಥಿ ಎನ್ ಆರ್ ಸಂತೋಷ್ಗೆ ಖುಷಿಯಾಗಿದೆ.
ಉಳ್ಳಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಆದರೆ ಕಾಂಗ್ರೆಸ್ ನ ಉಸ್ಮಾನ್ ಕಲ್ಲಾಪು ಸೇರಿ ಹಲವರು ನನ್ನನ್ನ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯಲು ಸಹಿ ಹಾಕಿಸಿಕೊಂಡಿದ್ದರು. ಈ ಬಗ್ಗೆ ನಾನು ದೂರು ಕೊಡ್ತೇನೆ ಎಂದಿದ್ದಾರೆ.
ರಾಮದುರ್ಗದಲ್ಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ನಾಮಪತ್ರ ವಾಪಸ್ ಪಡೆದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಇನ್ನು, ಮಾಜಿ ಶಾಸಕಿ ಕುಮಟಾದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಾರದಾ ಶೆಟ್ಟಿ, ಡಿಕೆ ಶಿವಕುಮಾರ್ ಮನವೊಲಿಕೆಗೆ ಒಪ್ಪಿದ್ದು, ನಾಮಪತ್ರ ವಾಪಾಸ್ ಪಡೆದಿದ್ದಾರೆ. ಬೇಸರಗೊಂಡಿರೋ ಶಾರದ ಶೆಟ್ಟಿ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ