• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Nikhil Kumaraswamy: ನನ್ನನ್ನು ತೀರಿಸಬೇಕು ಅಂತ ಬಿಜೆಪಿ-ಕಾಂಗ್ರೆಸ್ ಒಂದಾಗಿದೆ; ನಿಖಿಲ್​​ ಕುಮಾರಸ್ವಾಮಿ

Nikhil Kumaraswamy: ನನ್ನನ್ನು ತೀರಿಸಬೇಕು ಅಂತ ಬಿಜೆಪಿ-ಕಾಂಗ್ರೆಸ್ ಒಂದಾಗಿದೆ; ನಿಖಿಲ್​​ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ, ರಾಮನಗರ ಜೆಡಿಎಸ್​ ಅಭ್ಯರ್ಥಿ

ನಿಖಿಲ್​ ಕುಮಾರಸ್ವಾಮಿ, ರಾಮನಗರ ಜೆಡಿಎಸ್​ ಅಭ್ಯರ್ಥಿ

ನನಗೆ ಮತ ಹಾಕಲಿಲ್ಲ ಎಂದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೇಳುತ್ತಿದ್ದಾರೆ ಎಂದು ನಿಖಿಲ್​ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

 • News18 Kannada
 • 4-MIN READ
 • Last Updated :
 • Ramanagara, India
 • Share this:

ರಾಮನಗರ: ವಿಧಾನಸಭಾ ಚುನಾವಣೆಗೆ (Assembly Elections) ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಮನಗರದಲ್ಲಿ (Ramanagara) ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ನಡುವೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಖಿಲ್ ಅವರು, ರಾಮನಗರದಲ್ಲಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಹೊಂದಾಣಿಕೆ ಮಾಡಿಕೊಂಡು ನನ್ನನ್ನ ಸೋಲಿಸಲು ಷಡ್ಯಂತ್ರ ನಡೆಸಿದ್ದಾರೆ. ನನ್ನನ್ನ ತೀರಿಸಬೇಕು ಅಂತ ಬಿಜೆಪಿ-ಕಾಂಗ್ರೆಸ್ ಒಂದಾಗಿದೆ. ಕ್ಷೇತ್ರದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಮತ ಹಾಕಿ ಅಂದಿದ್ದಾರೆ. ನನಗೆ ಮತ (Vote) ಹಾಕಲಿಲ್ಲ ಅಂದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಮಂಡ್ಯದ ಚುನಾವಣೆ ರೀತಿಯಲ್ಲೇ ಕುತಂತ್ರ


ಕೆಲವು ಕಡೆ ಬಿಜೆಪಿಯವರೂ ಕೂಡಾ ಕಾಂಗ್ರೆಸ್​​ಗೆ ಮತಹಾಕಿ ಅಂತ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮತಗಳನ್ನ ವಿಭಜನೆ ಮಾಡಲು ಕಾಂಗ್ರೆಸ್-ಬಿಜೆಪಿ ಈ ರೀತಿ ಮಾಡುತ್ತಿದೆ. ಮಂಡ್ಯದ ಚುನಾವಣೆ ರೀತಿಯಲ್ಲೇ ಕುತಂತ್ರ ಮಾಡುತ್ತಿದ್ದಾರೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲ್ಲ, ಇದಕ್ಕೆ ಕ್ಷೇತ್ರದ ಮತದಾರರೇ ಉತ್ತರ ಕೊಡುತ್ತಾರೆ. ಇದರಿಂದ ಬೇಸತ್ತಿರುವ ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ


ಕಾಟಾಚಾರಕ್ಕೆ ಕನಕಪುರದಲ್ಲಿ ಅಶೋಕ್ ಅರ್ಜಿ


ಇದೇ ವೇಳೆ ಕನಕಪುರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಎಂಬ ಆರ್ ಅಶೋಕ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್​​, ಕನಕಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದು ಅಶೋಕ್ ಹಾಗೂ ಡಿಕೆ ಶಿವಕುಮಾರ್. ಸುಮ್ಮನೆ ಕಾಟಾಚಾರಕ್ಕೆ ಬಂದು ಕನಕಪುರದಲ್ಲಿ ಅರ್ಜಿ ಹಾಕಿದ್ದಾರೆ.
ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದ್ದಿದ್ದರೆ ಕನಕಪುರದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕಿತ್ತು. ಎರಡೂ ಕಡೆ ಹಾಕಿರುವುದು ಹೊಂದಾಣಿಕೆ ಅಲ್ಲವೇ? ಕನಕಪುರದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವರಿಂದ ನಾವು ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು. ಅಲ್ಲದೆ, ಹೊಂದಾಣಿಕೆ ರಾಜಕೀಯಕ್ಕೆ ಬೇಸತ್ತು ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಎಂದು ನಿಖಿಲ್​​ ಹೇಳಿದ್ದಾರೆ. ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಜೆಡಿಎಸ್​​ ಸೇರ್ಪಡೆ ಕಾರ್ಯಕ್ರಮ ನಡೆಯಿತು.

top videos
  First published: