ಮೈಸೂರು: ನಂಜನಗೂಡಿನಲ್ಲಿ (Nanjangud) ಮಾತನಾಡಿದ ಸಂಸದ ಪ್ರತಾಪ್ ಸಿಂಹ (Pratap Simha) ಅವರು, ನಟ ಸುದೀಪ್ (Sudeep) ಕಾಂಗ್ರೆಸ್‌ನಲ್ಲಿ ಕಿಚ್ಚು ಹತ್ತಿಸಿದ್ದಾರೆ. ಕಿಚ್ಚ ಸುದೀಪ್‌ರ ಕಿಚ್ಚು ಕಾಂಗ್ರೆಸ್‌ನ (Congress) ಭಸ್ಮ ಮಾಡುತ್ತೆ. ಸಿಎಂ ಬಸವರಾಜ ಬೊಮ್ಮಾಯಿ ಅಗ್ರೆಸಿವ್ ಲೀಡರ್. ಜಾತಿವಾದಿಗಳ ಭದ್ರಕೋಟೆಯಲ್ಲೂ ಅಭಿವೃದ್ಧಿ ಪರ್ವ ಕೋಟೆ. ನಮಗೆ ಕೇಸರಿ ಬಾವುಟ ಕಂಡರೆ ಸುರಕ್ಷಿತ ಭಾವನೆ ಬರುತ್ತದೆ. ಆದರೆ ಕೇಸರಿ ಟೋಪಿ ಹಾಕಲು ಸಿದ್ದರಾಮಯ್ಯ (Siddaramaiah) ತಿರಸ್ಕರಿಸುತ್ತಾರೆ. ಮುಸ್ಲಿಂರ ಮನೆಗೆ ಹೋಗಿ ಬಿರಿಯಾನಿ (Biryani) ತಿಂತಾರೆ ಅಂತಾ ವಾಗ್ದಾಳಿ ನಡೆಸಿದ್ದರು.
ವರುಣಾದಲ್ಲಿ ಕಳೆದ ಹನುಮ ಜಯಂತಿಯಂದು ಮಾಂಸ ತಿನ್ನುವಾಗ ಇವತ್ತು ಹನುಮ ಜಯಂತಿ ಎಂದ ಕಾರ್ಯಕರ್ತನನ್ನು ಗದರುತ್ತಾರೆ. ಆದರೆ ನವೆಂಬರ್ 9 ರಂದು ಟಿಪ್ಪು ಜಯಂತಿ ನೆನಪಾಗುತ್ತಾ? ಹೈದರಾಲಿ ಮಗ ಟಿಪ್ಪು ಹುಟ್ಟುವಾಗ ನೀವೇನು ಕುಂಡಲಿ ಬಾರಿಸುತ್ತಿದ್ದರಾ? ಕಾಂಗ್ರೆಸ್‌ಗೆ ಮತ ಹಾಕಿದರೆ ತಾಲಿಬಾನಿ ಸರ್ಕಾರ ಬರುತ್ತೆ ಗ್ಯಾರೆಂಟಿ, ಹಿಂದೂಗಳಿಂದ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡಲು ಹೊರಟಿದ್ದಾರೆ ನಿಮಗೆ ಬೇಕಾ?
ಇದನ್ನೂ ಓದಿ: Karnataka Elections: ಸಿದ್ದು ಸೋಲಲಿ ಅಂತ ಡಿಕೆಶಿ ಸಂಕಲ್ಪ; ನಮ್ಗೆ ಇಂಟಲಿಜನ್ಸ್ ಮಾಹಿತಿ ಬಂದಿದೆ ಅಂದ್ರು ಸಿ ಟಿ ರವಿ!
ಈ ಸಿದ್ದರಾಮಯ್ಯಗೆ ಬುದ್ಧಿ ಕಲಿಸಬೇಕು. ವೀರಶೈವ ಸಮುದಾಯ ನಿಂದಿಸುವ ಸಿದ್ದರಾಮಯ್ಯಗೆ ಪಾಠ ಕಲಿಸಬೇಕು. ನಿಮ್ಮ ಕಿಚ್ಚನ್ನ ಮತಗಟ್ಟೆಯಲ್ಲಿ ತೋರಿಸಬೇಕು, ಸಿದ್ದರಾಮಯ್ಯ ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ. ಅವರು ಬೆಳೆಸಿದ ಕೆಂಪೀರೇಗೌಡ, ಎಚ್.ಡಿ.ದೇವೆಗೌಡರನ್ನ ಬಿಟ್ಟವರು. ಸಿದ್ದರಾಮಯ್ಯ ಯಾವತ್ತು ರಿಯಲ್ ಫೈಟ್ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ, ಖರ್ಗೆ ವರುಣಾಗೆ ಬಂದು ಯಾಕೆ ಪ್ರಚಾರ ಮಾಡಿಲ್ಲ?
ಸಿದ್ದರಾಮಯ್ಯ ಎಂತ ಜಾತಿವಾದಿ ಗೊತ್ತಾ? ಕೆ.ಆರ್.ಕ್ಷೇತ್ರದ 19 ವಾರ್ಡ್‌ಗಳಲ್ಲಿ 12 ಟಿಕೆಟ್ ಕುರುಬರಿಗೆ ಕೊಟ್ಟರು. ಇವತ್ತು ದುನಿಯಾ ವಿಜಯ್ ನನ್ನ ಪರ ಪ್ರಚಾರ ಮಾಡಿದರು ಕೃತಜ್ಞತೆಗಳು ಅಂತ ಟ್ವೀಟ್ ಮಾಡಿದ್ದಾರೆ. ಆಗಾದರೆ ವಕ್ಕಲಿಗ, ವೀರಶೈವ ಲಿಂಗಾಯತರು ಯಾರು? ಸಿದ್ದರಾಮಯ್ಯ ಯಾವತ್ತೂ ಸ್ವಜಾತಿ ಪ್ರೇಮಿ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲೇ ಭಸ್ಮಾಸುರ ಆಗಿದ್ದಾರೆ. ಡಿಕೆ ಶಿವಕುಮಾರ್, ಖರ್ಗೆ, ಆಂಜನೇಯ, ಮುನಿಯಪ್ಪ ವರುಣಾಗೆ ಬಂದು ಯಾಕೆ ಪ್ರಚಾರಕ್ಕೆ ಬಂದಿಲ್ಲ ಅರ್ಥ ಮಾಡಿಕೊಳ್ಳಬೇಕು. ಇವರು ಮತ್ತೆ ಗೆದ್ದರೆ ನಮಗೆ ಉಳಿಗಾಲ ಇಲ್ಲ ಅಂತ ಬಂದಿಲ್ಲ ಅಂತ.
ಎಡಗೈ, ಬಲಗೈ , ವಕ್ಕಲಿಗ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಬಂದರೆ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವ ವಾಡಿಕೆ, ಕೈ ಹಿಡಿದು ಬೆಳೆಸಿದ ವಕ್ಕಲಿಗ ಸಮುದಾಯ ಲೆಕ್ಕಕ್ಕಿಲ್ಲ. ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರಂತಹ ಜಾತಿವಾದಿಗಳನ್ನ ಬೇರು ಸಮೇತ ಕಿತ್ತೊಗೆಯಬೇಕು ಎಂದು ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯರನ್ನೇ ಪ್ರತಾಪ್ ಸಿಂಹ ಟಾರ್ಗೆಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ