ಕೋಲಾರ: ಬಿಜೆಪಿಯ (BJP) ಬಂಡಾಯದ ಲಾಭ ಗಿಟ್ಟಿಸುವ ಕಾಂಗ್ರೆಸ್ (Congress) ಓಡಾಡುತ್ತಿದೆ. ಆದರೆ ಕಾಂಗ್ರೆಸ್ನಲ್ಲಿ ಬಂಡಾಯದ ಬೆಂಕಿ ಬುಡವನ್ನೇ ಸುತ್ತಿದೆ. ಇವತ್ತೂ 3ನೇ ಪಟ್ಟಿ ರಿಲೀಸ್ ಆದ ಬಳಿಕ ಅಂತು ಕೈ ನಾಯಕರು ಕೈ ಕೈ ಹಿಸುಕಿಕೊಳ್ತಿದ್ದಾರೆ. ಹೌದು, ಕೋಲಾರ (Kolar) ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್ (Kottur Manjunath) ರನ್ನ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಆಕಾಂಕ್ಷಿಯಾಗಿದ್ದ ವಿ.ಆರ್.ಸುದರ್ಶನ್ (VR Sudarshan) ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕೊಟ್ಟರೆ ಸಿದ್ದರಾಮಯ್ಯ (Siddaramaiah) ಅವರಿಗೆ ಕೊಡಿ. ಇಲ್ಲ ನನಗೆ ಕೊಡಿ ಅಂದಿದ್ದೆ. ನನಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಎಲೆಕ್ಷನ್ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಸುದರ್ಶನ್ ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆ ಕೊತ್ತೂರು ಮಂಜುನಾಥ್ ಮಾತನಾಡಿ ಈಗಲೂ ಸಿದ್ದರಾಮಯ್ಯನವರೇ ಸ್ಪರ್ಧಿಸಬೇಕು ಎಂದು ಹೇಳಿದ್ದಾರೆ.
ಹೇಳದೆ ಕೇಳದೆ ಪಟ್ಟಿ ಬಿಡುಗಡೆ ಮಾಡಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್, ನನ್ನ ವಾದ ಇಂದಿಗೂ ಸಿದ್ದರಾಮಯ್ಯ ಅವರೇ ಕೋಲಾರಕ್ಕೆ ಬರಬೇಕು ಅನ್ನೋದು. ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಹೇಳದೆ, ಕೇಳದೆ ಪಟ್ಟಿ ಬಿಡುಗಡೆ ಮಾಡಿದೆ. ನನ್ನ ಮುಳಬಾಗಲು ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಮಾಡಿಲ್ಲ. ಈಗಲೂ ನನ್ನ ಒತ್ತಾಯ ಸಿದ್ದರಾಮಯ್ಯ ಅವರೇ ಬರಬೇಕು.
ಇದನ್ನೂ ಓದಿ: Laxman Savadi-Ramesh Jarkiholi: ಪೀಡೆ ತೊಲಗಿತು ಎಂದಿದ್ದ ಸಾಹುಕಾರ್‌ಗೆ ಸವದಿ ತಿರುಗೇಟು!
ಟಿಕೆಟ್ ಘೋಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಹೈಕಮಾಂಡ್ ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲೆಯ ಎಲ್ಲಾ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಮಾಡಬೇಕಿತ್ತು. ಒಂದು ವೇಳೆ ಹೈಕಮಾಂಡ್ ನೀನೇ ಹೋಗಿ ಪ್ರಚಾರ ಮಾಡು ಎಂದರೆ, ಜಿಲ್ಲೆಯ ಎಲ್ಲಾ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದೆ ಹಾಗಾಗಿ ಇಲ್ಲಿ ಗೆಲ್ಲುತ್ತೇವೆ. ನಜೀರ್ ಅಹ್ಮದ್ ಅವರ ಬಳಿ ಮಾತನಾಡಬೇಕಿತ್ತು. ಇಲ್ಲಿನ ರಮೇಶ್ ಕುಮಾರ್, ಶ್ರೀನಿವಾಸಗೌಡ, ಅನಿಲ್ ಕುಮಾರ್ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇತ್ತ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದ ಮುಸ್ಲಿಂ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ಎದುರಲ್ಲೇ ಸಿಟ್ಟು ಹೊರ ಹಾಕಿದ್ದ ಮುಖಂಡರು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಾಂಧಲೆ ನಡೆಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿದ್ದು, ಎಂಎಲ್ಸಿ ಅನಿಲ್ ಕುಮಾರ್ ರನ್ನ ತರಾಟೆಗೆ ತೆಗೆದುಕೊಂಡರು.
ಈ ವೇಳೆ ನಡೆದ ನೂಕಾಟ ತಳ್ಳಾಟದಲ್ಲಿ ಕಾಂಗ್ರೆಸ್ ಮುಖಂಡ ಉದಯ್ ಶಂಕರ್ ತಲೆಗೆ ಗಾಯ ಆಯ್ತು. ಕೂಡಲೇ ಸ್ಥಳಕ್ಕೆ ಬಂದ ಕೋಲಾರ ನಗರ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದರು. ಇತ್ತ ಕಾಂಗ್ರೆಸ್ ಬಂಡಾಯ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಮುಖಂಡರು ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ