ರಾಯಚೂರು: ಸಿದ್ದರಾಮಯ್ಯ (Siddaramaia) ಪರ ನಟ ಶಿವಣ್ಣ (Shiva Rajkumar) ಪ್ರಚಾರದ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಅವರು ತಮ್ಮ ಟ್ವೀಟ್ಗೆ (Tweet) ಇಂದು ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ ಬಗ್ಗೆ ನಟ ಶಿವಣ್ಣ ಬೇಸರ ವ್ಯಕ್ತಪಡಿಸಿರುವ ಬಗ್ಗೆ ರಾಯಚೂರು (Raichuru) ತಾಲೂಕಿನ ಯಾಪಲದಿನ್ನಿಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು, ಅವರು ಏನು ಮಾತನಾಡಿದ್ದಾರೆ ಅನ್ನೋದನ್ನ ಕೇಳಿದ್ದೇನೆ. ನಾನು ಅವರ ಅಭಿಮಾನಿ (Fan), ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಅವರ ಸಿನಿಮಾಗಳನ್ನ ನೋಡ್ಕೊಂಡು ಬಂದಿದ್ದೀನಿ
ಪುನೀತ್ ಹೆಸರಿನಲ್ಲಿ ಸೋಮಣ್ಣ ಆಸ್ಪತ್ರೆ ಕಟ್ಟಿದ್ದರು. ಆ ಬಗ್ಗೆ ರಾಘಣ್ಣ ಶ್ಲಾಘಿಸಿದ್ದರು. ಆದರೆ ಶಿವಣ್ಣ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಂದಿದ್ದಾರೆ ಅಂತ ಹಾಕಿದ್ದೆ. ಆದರೆ ಶಿವಣ್ಣ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗೆ ಸೋಮಣ್ಣ ಅವರು ನಿಂತಿರುವುದು ಗೊತ್ತಿರಲಿಲ್ಲ. ಬಿಜೆಪಿ ಅವರು ನನ್ನನ್ನು ಕರೆದಿಲ್ಲ.
ಒಂದು ವೇಳೆ ನನ್ನ ಕರೆದರೆ ಬಿಜೆಪಿ ಪರ ಪ್ರಚಾರಕ್ಕೆ ವರುಣಾಕ್ಕೂ ಕರೆದರೂ ಬರ್ತಿನಿ ಅಂದಿದ್ದಾರೆ. ನಾನು ಶಿವಣ್ಣನ ಅಭಿಮಾನಿ, ನಾನು ಅವರ ಮನ ಮೆಚ್ಚಿದ ಹುಡುಗಿ, ರಥ ಸಪ್ತಮಿ ಸಿನಿಮಾಗಳನ್ನ ನೋಡ್ಕೊಂಡು ಬಂದಿದ್ದೀನಿ. ಶಿವಣ್ಣ ಸಿಕ್ಕಾಗೆಲ್ಲಾ ನಮಸ್ಕಾರ ಮಾಡುತ್ತೇನೆ ನಾನು. ಅವರ ಇಡೀ ಕುಟುಂಬವನ್ನ ನಾವು ರಾಜಕೀಯದ ಹೊರತಾಗಿ ನೋಡುತ್ತೇವೆ.
ಶಿವಣ್ಣ ನಾವು ಯಾವತ್ತು ನಿಮ್ಮ ಅಭಿಮಾನಿಗಳೇ!
ರಾಜಕುಮಾರ್ ಕುಟುಂಬದ ಬಗ್ಗೆ ಅಪಾರವಾದ ಗೌರವಿದೆ. ನಾವು ರಾಜಕೀಯದ ಹೊರತಾಗಿ ನಮ್ಮ ರಾಜ್ಯದ ಅಸ್ಮಿತೆಯ ಮಟ್ಟದಲ್ಲಿ ಅಣ್ಣಾವ್ರ ಕುಟುಂಬವನ್ನ ನೋಡುತ್ತೇವೆ. ಅಣ್ಣಾವ್ರ ಕುಟುಂಬ ಅಂದರೆ ಆ ರೀತಿ ಗೌರವ ಕೊಡುತ್ತೇವೆ. ಹಾಗಾಗಿ ಆ ಥರ(ಅರ್ಥದಲ್ಲಿ) ಟ್ವೀಟ್ ಮಾಡಿದ್ದೆ. ಪ್ರತಾಪ್ ಸಿಂಹ, ಸೋಮಣ್ಣ ಆಪ್ತರು. ಸೋಮಣ್ಣ ಅವರು ಅಲ್ಲಿ ನಿಂತಿರೋದು ಗೊತ್ತಿಲ್ಲ ಅಂದಿದ್ದಾರೆ. ಶಿವಣ್ಣಗೆ ಧನ್ಯವಾದ ಹೇಳುತ್ತೇನೆ. ಶಿವಣ್ಣ ನಾವು ಯಾವತ್ತು ನಿಮ್ಮ ಅಭಿಮಾನಿಗಳೇ, ನಮ್ಮ ಗೌರವ ಪ್ರೀತಿ ಹೀಗೆ ಇರುತ್ತೆ. ನೀವು ನಮ್ಮ ಮೇಲೆ ಅದೇ ರೀತಿ ಒಳ್ಳೆ ರೀತಿ ಸ್ಪಂದಿಸಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಶಿವಣ್ಣ ಹೇಳಿದ್ದೇನು?
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ವರುಣಾದಲ್ಲಿ ನಿನ್ನೆ ರೋಡ್ ಶೋ ಚೆನ್ನಾಗಿ ಆಯ್ತು. ಇವತ್ತು ಶಿರಸಿ ಹೋಗುತ್ತಿದ್ದೇನೆ. ನಾಳೆ ಜಗದೀಶ್ ಶೆಟ್ಟರ್ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಹಾಗೆಯೇ ಬೀದರ್, ಬಸವ ಕಲ್ಯಾಣ, ಮುಂಡಗೋಡು, ಮಂಗಳೂರಿಗೂ ಹೋಗುತ್ತೇನೆ. ಸೋಮಣ್ಣ ಕೂಡ ಆಪ್ತರು, ಪ್ರತಾಪ್ ಸಿಂಹ ಕೂಡ ಪರಿಚಯಸ್ಥರು. ಅವರ ಬಗ್ಗೆ ಗೌರವ ಇದೆ. ನಾನೇನು ಹೇಳಲ್ಲ, ಕಾಂಗ್ರೆಸ್ ಬಗ್ಗೆ ಕೂಡ ನಾನು ಮಾತನಾಡುತ್ತಿಲ್ಲ.
ಕೆಲ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನನಗೆ ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರು ಇದ್ದಾರೆ. ಸಿನಿಮಾದಲ್ಲಿ ಡಿಮ್ಯಾಂಡ್ ಇತ್ತು, ಈಗ ಇಲ್ಲೂ ಶುರುವಾಗಿದೆ. ಬೇರೆ ಪಕ್ಷದವರು ಕರೆದರೂ ಹೊಗ್ತೇನೆ, ಆದರೆ ಯಾರು ಕರೆದಿಲ್ಲ. ರಾಹುಲ್ ಗಾಂಧಿಯವರು ನನಗೆ ಇಷ್ಟವಾಗಿದ್ದರು ಭೇಟಿ ಮಾಡಿದ್ದೆ. ಅವರ ಫಿಟ್ನೆಸ್ ನೋಡಿ ಇಂಪ್ರೆಸ್ ಆಗಿದ್ದೆ. ಸುದೀಪ್ ಕೂಡ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹಾಗಾಂತ ನಾಳೆ ಸಿಕ್ಕರೆ ನಾವು ಮಾತಾಡಲ್ವಾ? ಹೀ ಇಸ್ ಮೈ ಫ್ರೆಂಡ್, ಬ್ರದರ್ ಫ್ಯಾಮಿಲಿ ತರ. ಇಲ್ಲಿ ವಾರ್ ಏನು ಇಲ್ಲ, ಜಸ್ಟ್ ಸ್ಪರ್ಧೆ ಅಷ್ಟೇ. ಅದು ಎಲ್ಲಾ ಕಡೆನೂ ಇರುತ್ತೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ