• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ‘ನಮ್ಮ ಅಣ್ಣನಿಗೆ ಗಡ್ಡ ಯಾಕೆ ತೆಗೆದಿಲ್ಲ ಅಂತಾರೆ’ -ಕಣ್ಣೀರಿಡುತ್ತಾ ಡಿಕೆಶಿ ಪರ ಮತ ಕೇಳಿದ ಡಿಕೆ ಸುರೇಶ್​​

Karnataka Election 2023: ‘ನಮ್ಮ ಅಣ್ಣನಿಗೆ ಗಡ್ಡ ಯಾಕೆ ತೆಗೆದಿಲ್ಲ ಅಂತಾರೆ’ -ಕಣ್ಣೀರಿಡುತ್ತಾ ಡಿಕೆಶಿ ಪರ ಮತ ಕೇಳಿದ ಡಿಕೆ ಸುರೇಶ್​​

ಡಿಕೆ ಶಿವಕುಮಾರ್/ ಡಿಕೆ ಸುರೇಶ್​

ಡಿಕೆ ಶಿವಕುಮಾರ್/ ಡಿಕೆ ಸುರೇಶ್​

ಹೆಲಿಕಾಪ್ಟರ್ ಅವಘಡ ಕುರಿತಂತೆ ಪ್ರತಿಕ್ರಿಯೆ ನೀಡಿದ ಉಷಾ ಶಿವಕುಮಾರ್​ ಅವರು, ನನಗೆ ವಿಡಿಯೋ ಕಾಲ್ ಮಾಡಿ ಹೆದರಬೇಡ ಎಂದಿದ್ದರು, ಹೆಲಿಕಾಪ್ಟರ್ ನಿಂದ ಇಳಿದ ತಕ್ಷಣ ನನಗೆ ಮೊದಲು ವಿಡಿಯೋ ಕಾಲ್ ಮಾಡಿದ್ದರು ಎಂದು ತಿಳಿಸಿದರು.

  • News18 Kannada
  • 4-MIN READ
  • Last Updated :
  • Kanakapura, India
  • Share this:

ಕನಕಪುರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಮತದಾರರ (Voters) ಮನವೊಲಿಕೆ ಮಾಡಲು ಮುಂದಾಗಿದ್ದಾರೆ. ಈ ನಡುವೆ ತೀವ್ರ ಕುತೂಹಲ ಮೂಡಿಸಿರುವ ಕನಕಪುರ (Kanakapura) ಕ್ಷೇತ್ರದಲ್ಲಿ ಕಣ್ಣೀರಿನ ಪಾಲಿಟಿಕ್ಸ್​​ ಸದ್ದು ಮಾಡಿದೆ. ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್​ (DK Shivakumar) ಅವರಿಗೆ ಬ್ರೇಕ್​ ಹಾಕಲು ಬಿಜೆಪಿ ಸಚಿವ ಆರ್​ ಅಶೋಕ್ (R Ashok)​ ಅವರನ್ನು ಕಣಕ್ಕೆ ಇಳಿಸಿದೆ. ಆದರೆ ಇದ್ಯಾವುದಕ್ಕೂ ಮಹತ್ವದ ಕೊಡದ ಡಿಕೆ ಶಿವಕುಮಾರ್​ ಅವರು ರಾಜ್ಯ ಪ್ರವಾಸ ಮುಂದುವರಿಸಿದ್ದು, ಕೆಪಿಸಿಸಿ (KPCC) ಅಧ್ಯಕ್ಷರ ಪರ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಅವರು ಇಂದು ಪ್ರಚಾರ ನಡೆಸಿದ್ದಾರೆ. ಇತ್ತ ಡಿಕೆಶಿ ಸಹೋದರ ಡಿಕೆ ಸುರೇಶ್ (DK Suresh)​ ಅವರು ಕೂಡ ಭರ್ಜರಿ ಪ್ರಚಾರ ನಡೆಸಿದ್ದಾರೆ.


ನಮ್ಮ ಅಣ್ಣನಿಗೆ ಗಡ್ಡ ಯಾಕೆ ತೆಗೆದಿಲ್ಲ ಅಂತಾರೆ


ಡಿಕೆ ಸುರೇಶ್​ ಅವರು ಕನಕಪುರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು, ಕಣ್ಣೀರು ಹಾಕುತ್ತಾ ಅಣ್ಣನ ಪರ ಪ್ರಚಾರ ನಡೆಸಿದ್ದಾರೆ. ಪ್ರಚಾರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಸುರೇಶ್​ ಅವರು, ಕೆಲವರು ನಮ್ಮ ಅಣ್ಣನಿಗೆ ಗಡ್ಡ ಯಾಕೆ ತೆಗೆದಿಲ್ಲ ಅಂತಾರೆ. ಗಡ್ಡಕ್ಕೆ ಉತ್ತರ ಕೊಡಬೇಕಾದವರು ಈ ತಾಲೂಕಿನ ಜನ. ಆ ಗಡ್ಡ ಯಾಕೆ ತೆಗೆದಿಲ್ಲ ಅಂತಾ 13ರಂದು ತೀರ್ಮಾನ ಆಗುತ್ತದೆ ಅಂತ ಸಹೋದರನ ಪರ ಮತಯಾಚಿಸಿದರು.




ಇದನ್ನೂ ಓದಿ: PM Modi Roadshow: ಸಿಲಿಕಾನ್ ಸಿಟಿಯಲ್ಲಿ ‘ನಮೋ’ ಸಂಚಾರ; ಜೈಶ್ರೀರಾಮ, ಭಜರಂಗಬಲಿ ಘೋಷಣೆ


ಕನಕಪುರದಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಸ್ಪರ್ಧೆಯಿಂದ ಪ್ರಬಲ ಪೈಪೋಟಿ ಏರ್ಪಟ್ಟಿರುವಂತೆ ಕಂಡು ಬಂದಿದೆ. ಇದರ ನಡುವೆ ಆರ್​ ಅಶೋಕ್​ ಪರ ಪತ್ನಿ ಪ್ರಮೀಳಾ ಅವರು ಪ್ರಚಾರ ಮಾಡುತ್ತಿದ್ರೆ, ಡಿಕೆಶಿ ಪರ ಉಷಾ ಶಿವಕುಮಾರ್ ಅವರು ಪ್ರಚಾರಕ್ಕೆ ಇಳಿದಿದ್ದಾರೆ.




ಈ ನಡುವೆ ನ್ಯೂಸ್​​18 ಕನ್ನಡದೊಂದಿಗೆ ಮಾತನಾಡಿದ ಉಷಾ ಅವರು, ಕನಕಪುರದಲ್ಲಿ 12 ದಿನ‌ ಡಿಕೆ ಶಿವಕುಮಾರ್ ಪರ ಪ್ರಚಾರ ಮಾಡ್ತಿದ್ದೀನಿ. ಇಂದಿಗೆ ನಗರದ ಪ್ರಚಾರ ಮುಕ್ತಾಯವಾಗಿದೆ. ಕನಕಪುರದಲ್ಲಿ ಜನರು ತುಂಬಾ ಖುಷಿ ಪಟ್ಟಿದ್ದಾರೆ, ಬೆಂಬಲ ನೀಡಿದ್ದಾರೆ. ಇನ್ನು ಕೆಲ ಅಭಿವೃದ್ಧಿ ಕೆಲಸವಾಗಬೇಕಿದೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಮಾಡ್ತೀವಿ ಎಂದರು. ಇದೇ ವೇಳೆ ಡಿಕೆಶಿ ಸಿಎಂ ಆಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರ, ದೇವರ ಇಚ್ಛೆ ಎಂದರು.




ಇದೇ ವೇಳೆ ಹೆಲಿಕಾಪ್ಟರ್ ಅವಘಡ ಕುರಿತಂತೆ ಪ್ರತಿಕ್ರಿಯೆ ನೀಡಿದ ಉಷಾ ಶಿವಕುಮಾರ್​ ಅವರು, ನನಗೆ ವಿಡಿಯೋ ಕಾಲ್ ಮಾಡಿ ಹೆದರಬೇಡ ಎಂದಿದ್ದರು, ಹೆಲಿಕಾಪ್ಟರ್ ನಿಂದ ಇಳಿದ ತಕ್ಷಣ ನನಗೆ ಮೊದಲು ವಿಡಿಯೋ ಕಾಲ್ ಮಾಡಿದರು ಎಂದರು. ಕನಕಪುರದಲ್ಲಿ ಆರ್​ ಅಶೋಕ್ ಪತ್ನಿ ಪ್ರಮೀಳಾ ಪ್ರಚಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಸಂತೋಷ ಪಡ್ತೀನಿ ಅವರು ಮಾಡಲಿ, ಜನರಿಗೆ ಮತ ಕೇಳಲಿ ತಪ್ಪೇನಿಲ್ಲ. ಆದರೆ ಕಳೆದ ಬಾರಿಗಿಂತಲೂ ಹೆಚ್ಚಿನ ಲೀಡ್ ನಲ್ಲಿ ಗೆಲ್ಲುತ್ತೇವೆ ಎಂದು ನ್ಯೂಸ್​​ಗೆ ತಿಳಿಸಿದರು.

First published: