ಮೈಸೂರು: ಮಾಜಿ ಸಚಿವ, ಕೃಷ್ಣರಾಜ (Krishnaraja) ಕ್ಷೇತ್ರದ ಶಾಸಕ ರಾಮದಾಸ್ (SA Ramadas) ಅವರು ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಹೊರ ಹಾಕಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂ (Vidyaranyapuram) ನಿವಾಸದಲ್ಲಿ ಮಾತನಾಡಿದ ಅವರು, 30 ವರ್ಷದಿಂದ ಇದ್ದ ತಾಯಿ (Mother) ಮನೆಯಿಂದ ಓಡಿಸಿದ್ದಾರೆ. ಆ ಮನೆಯಲ್ಲಿ ಇರಬೇಕಾ? ಬೇಡವಾ? ಅಂತ ನಾಳೆ ಸಂಜೆ ತಿಳಿಸುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ರಾಮದಾಸ್ ಭೇಟಿಗೆ ಬಂದಿದ್ದ ಬಿಜೆಪಿ (BJP) ನಿಯೋಜಿತ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ಮುಖಭಂಗ ಎದುರಾಗಿದೆ.
ರಾಮದಾಸ್ ಅಭಿಮಾನಿಗಳ ಕಣ್ಣೀರು
ಎಸ್.ಎ.ರಾಮದಾಸ್‌ಗೆ ಟಿಕೆಟ್ ಮಿಸ್ ಆಗಿದಕ್ಕೆ ಶಾಸಕರ ವಿದ್ಯಾರಣ್ಯಪುರಂ ನಿವಾಸದಲ್ಲಿ ಸಭೆ ಸೇರಿದ್ದ ಬೆಂಬಲಿಗರು, ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ಅಭ್ಯರ್ಥಿ ಶ್ರೀವತ್ಸ, ಸಂಸದ ಪ್ರತಾಪ್ ಸಿಂಹ ಭೇಟಿ ಸಂದರ್ಭದಲ್ಲಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: DK Shivakumar: 1124 ಕೋಟಿ ರೂಪಾಯಿ ಆಸ್ತಿ ಒಡೆಯ ಡಿಕೆಶಿ, ಪತ್ನಿ ಹೆಸರಲ್ಲಿ ಇದೆ ಕೆಜಿಗಟ್ಟಲೆ ಬಂಗಾರ!
ಅಲ್ಲದೆ, ರಾಮದಾಸ್ ಭೇಟಿಗೆ ಬಿಡದಂತೆ ಅಭಿಮಾನಿಗಳು ತಡೆದರು. ಸುಮಾರು 30 ನಿಮಿಷ ಕಾಲ ರಾಮದಾಸ್ ಭೇಟಿಗೆ ಕಾದು ನಿಂತ ಪ್ರತಾಪ್ ಸಿಂಹ, ಶ್ರೀವತ್ಸ, ರವಿಶಂಕರ್ ಹಾಗೂ ಇತರರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಡ್ಯಾಮೇಜ್ ಕಂಟ್ರೋಲ್‌ಗೆ ಹೆಣಗಾಡಿದ ಪ್ರತಾಪ್ ಸಿಂಹ
ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಮದಾಸ್ ಅವರ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೇವು. ಟಿಕೆಟ್ ತಪ್ಪಿರುವ ಕಾರಣ ರಾಮದಾಸ್ ಅವರಿಗೆ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರೋದು ಸಹಜ.
ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ. ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿರುವವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಹೆಣಗಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ