• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections 2023: ಬೆದರಿಸಿ ಬಿಎಸ್​ವೈಯಿಂದ ಪ್ರಚಾರ ಮಾಡಿಸುತ್ತಿದ್ದಾರಾ? ಎಂಬಿ ಪಾಟೀಲ್​ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!

Karnataka Elections 2023: ಬೆದರಿಸಿ ಬಿಎಸ್​ವೈಯಿಂದ ಪ್ರಚಾರ ಮಾಡಿಸುತ್ತಿದ್ದಾರಾ? ಎಂಬಿ ಪಾಟೀಲ್​ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!

ಎಂಬಿ ಪಾಟೀಲ್​/ ಬಿಎಸ್​ ಯಡಿಯೂರಪ್ಪ

ಎಂಬಿ ಪಾಟೀಲ್​/ ಬಿಎಸ್​ ಯಡಿಯೂರಪ್ಪ

ಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಎಂಬಿಪಿ, ಯಡಿಯೂರಪ್ಪ ಅವರನ್ನ ಹೆದರಿಸಿ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತರನ್ನ ಸೋಲಿಸಲು ಲಿಂಗಾಯತರನ್ನೇ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Assembly Elections 2023) ಇಂದು ಬಿಜೆಪಿ (BJP) ಪ್ರಜಾ ಪ್ರಣಾಳಿಕೆಯನ್ನು (Praja Pranalike) ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಂಬಿ ಪಾಟೀಲ್ (MB Patil)​​, ಪರಮೇಶ್ವರ್ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆ ನೀಡಿದ್ದೆವೋ ಅವುಗಳನ್ನು ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಈಡೇರಿಸಿದ್ದೇವೆ. ಇವತ್ತು ರಾಜ್ಯದ ಮರ್ಯಾದೆ ಹಾಳು ಮಾಡಿದ್ದಾರೆ, ಡಬಲ್ ಎಂಜಿನ್ (Double Engine ) ಅಂತ ಹೇಳುತ್ತಿದ್ದಾರೆ. ಆದರೆ ಇವರ ಎರಡು ಎಂಜಿನ್ ಹಾಳಾಗಿ‌ ಹೋಗಿವೆ. ಸಮ್ಮಿಶ್ರ ಸರ್ಕಾರವನ್ನ ನಾವು ರಚಿಸಿದ್ದೆವು, ಇವರು ಕೋಟಿ ಕೋಟಿ ಖರ್ಚು ಮಾಡಿ ಅನೈತಿಕ ಮಾರ್ಗವಾಗಿ ಸರ್ಕಾರ ರಚನೆ ಮಾಡಿದ್ದರು.


ಬಿಎಸ್ ವೈ ದೆಹಲಿಯ ಲೀಲಾ ಪ್ಯಾಲೇಸ್​​ನಲ್ಲಿ ಯಾರನ್ನು ಭೇಟಿಯಾಗಿದ್ದರು


ಇವತ್ತು ಯಡಿಯೂರಪ್ಪನವರನ್ನ ತೆಗೆದು ಹಾಕಿದ್ದಾರೆ. ಆದರೆ ಚುನಾವಣೆ ಬಂದ ಕೂಡಲೇ ಇವತ್ತು‌ ಯಡಿಯೂರಪ್ಪನವರನ್ನೇ ಮುಂದೆ ಬಿಟ್ಟಿದ್ದಾರೆ. ಅವರ ಮೂಲಕ ಮಾತನಾಡಿಸುತ್ತಿದ್ದಾರೆ. 2013ರಲ್ಲಿ ಬಿಎಸ್ ವೈ, ಶೋಭಾ ಅವರು ದೆಹಲಿಯ ಲೀಲಾ ಪ್ಯಾಲೇಸ್​​ನಲ್ಲಿ ಯಾರನ್ನು ಭೇಟಿಯಾಗಿದ್ದರು. ಅವರ ಜೊತೆ ಏನು ಮಾತುಕತೆ ಆಯ್ತು ಎಂಬ ಎಲ್ಲಾ ಮಾಹಿತಿ ನಮ್ಮ ಬಳಿ ಇದೇ. ನಾಲ್ಕೈದು ದಿನ ಬಿಟ್ಟು ಎಲ್ಲ ಹೇಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.




ಇದರ ಬೆನ್ನಲ್ಲೇ ಎಂಟಿ ಪಾಟೀಲ್​ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಿಎಸ್​​ವೈ, ಎಂ ಬಿ ಪಾಟೀಲ್ ಅವರು ಅದೇನಿದೆ ಎಲ್ಲ ಬಹಿರಂಗ ಮಾಡಲಿ. ಅವರು‌ ಬಹಿರಂಗಪಡಿಸಿದರೆ ನಾನು ಉತ್ತರ ಕೊಡ್ತೇನೆ ಎಂದು ಸವಾಲು ಹಾಕಿದ್ದಾರೆ.


ಹೆದರಿಸಿ ಬಿಎಸ್​ವೈ ಅವರ ಜೊತೆ ಪ್ರಚಾರ ಮಾಡಿಸುತ್ತಿದ್ದಾರೆ


ಇತ್ತ, ಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಎಂಬಿಪಿ, ಯಡಿಯೂರಪ್ಪ ಅವರನ್ನ ಹೆದರಿಸಿ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತರನ್ನ ಸೋಲಿಸಲು ಲಿಂಗಾಯತರನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದು ಪಾಪದ ಕೆಲಸವಲ್ಲವೇ? ತಮ್ಮ ಮಗನ ಭವಿಷ್ಯಕ್ಕಾಗಿ ಯಡಿಯೂರಪ್ಪ ಬಿಜೆಪಿಯಲ್ಲಿ ಇದ್ದಾರೆ. ಇವರು ಕೆಜೆಪಿ ಪಕ್ಷ ಕಟ್ಟಿ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಈಗ ಶೆಟ್ಟರ್, ಸವದಿಯನ್ನ ಸೋಲಿಸುವ ಮಾತನ್ನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



ಇದೇ ವೇಳೆ ವಿಜಯಪುರದಲ್ಲಿ ಯತ್ನಾಳ್ ಜೊತೆ ಹೊಂದಾಣಿಕೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಮಾಜಿ ಸಚಿವರು, ನಾವು ಯಾರ ಜೊತೆಗೆ ಹೊಂದಾಣಿಕೆ ಇಲ್ಲ. ಈ ಬಾರಿ ಚುನಾವಣೆ ಕಾದು ‌ನೋಡಿ, ಹಿಂದೆ ಭಗವಾನ್ 40 ಸಾವಿರ ಮತ ಪಡೆದಿದ್ದರು. 2018ರಲ್ಲಿ ಮುಶ್ರಫ್ 72 ಸಾವಿರ ಮತ ಗಳಿಸಿದ್ದರು. ಆದರೆ ಮುಸ್ಲಿಂ ಸಮುದಾಯದ ಮತ 52% ಆಯ್ತು, ಪ್ರತಿ ಬಾರಿ 72% ವೋಟಿಂಗ್ ಆಗುತ್ತಿತ್ತು. ಹೀಗಾಗಿ ಕಳೆದ ಬಾರಿ ನಾವು ಸೋಲ ಬೇಕಾಯ್ತು, ಈ ಬಾರಿ ಕಾದು ನೋಡಿ ಯಾರು ‌ಗೆಲ್ತಾರೆ ಎಂದು ಹೇಳಿದ್ದಾರೆ.

First published: